ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಪುರುಷರ ತಂಡಕ್ಕೆ ಎಂಟ್ರಿ? ಐಪಿಎಲ್ ಅಖಾಡದಲ್ಲಿ ಐತಿಹಾಸಿಕ ಬೆಳವಣಿಗೆ?

ಆರ್‌ಸಿಬಿ ತಂಡ ಮತ್ತೊಮ್ಮೆ ತನ್ನ ಹೀನಾಯ ಪ್ರದರ್ಶನ ನೀಡುತ್ತಿದೆ. ಬೆಂಗಳೂರು ತಂಡ ಹೀಗೆ ಸೋಲಿನ ಸುಳಿಗೆ ಸಿಲುಕಿರುವ ಕಾರಣಕ್ಕೆ ಅಭಿಮಾನಿಗಳು ಕೂಡ ಸಿಟ್ಟು & ಕೋಪ ಹೊರಹಾಕಿ, ಆರ್‌ಸಿಬಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ಬಳಿ ಒಳ್ಳೆಯ ಬೌಲರ್ ಇಲ್ಲ ಅನ್ನೋದೆ ಆಕ್ರೋಶಕ್ಕೆ ಕಾರಣ. ಹೀಗಿದ್ದಾಗ ತಲ್ಲಣ ಸೃಷ್ಟಿಸುವ ಸುದ್ದಿ ಹೊರಬಿದ್ದಿದ್ದು, ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಪುರುಷರ ತಂಡಕ್ಕೆ ಎಂಟ್ರಿ ಕೊಡ್ತಾರಾ? ಐಪಿಎಲ್ ಅಖಾಡದಲ್ಲಿ ಐತಿಹಾಸಿಕ ಬೆಳವಣಿಗೆ ನಡೆಯುತ್ತಾ? ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

ಮೊನ್ನೆ, ಮೊನ್ನೆ ಕೊಲ್ಕತ್ತಾ ಎದುರಿಗಿನ ಪಂದ್ಯದಲ್ಲಿ ಆರ್‌ಸಿಬಿ ತಂಡ 182 ರನ್ ಗಳಿಸಿದ್ದರೂ ಗೆಲ್ಲಲು ಆಗಲೇ ಇಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ 16.5 ಓವರ್‌ಗೆ ಭರ್ಜರಿ 186 ರನ್ ಗಳಿಸಿ ಗೆದ್ದು ಬೀಗಿತ್ತು. ಹೀಗೆ ಆರ್‌ಸಿಬಿ ತಂಡ ಮತ್ತೊಮ್ಮೆ, ಹೀನಾಯವಾಗಿ ಸೋತಿರುವ ಬೆನ್ನಲ್ಲಿಯೇ ಹೊಸ ಮಾತು ಶುರುವಾಗಿದೆ. ಅದು ಏನೆಂದರೆ ಬೌಲರ್‌ಗಳೇ ಇಲ್ಲದೆ, ಅದರಲ್ಲಿಯು ಪ್ರಮುಖವಾಗಿ ಸ್ಪಿನ್ ಬೌಲರ್ ಇಲ್ಲದೆ ನರಳುತ್ತಿರುವ ಆರ್‌ಸಿಬಿ ತಂಡಕ್ಕೆ 'ಟಗರು ಪುಟ್ಟಿ' ಎಂಬ ಬಿರುದು ಪಡೆದ ಶ್ರೇಯಾಂಕಾ ಪಾಟೀಲ್ ಅವರು ಎಂಟ್ರಿ ಕೊಡ್ತಾರಾ? ಐಪಿಎಲ್ ಇತಿಹಾಸದಲ್ಲೇ, ಪುರುಷರ ತಂಡಕ್ಕೆ ಮಹಿಳಾ ಆಟಗಾರ್ತಿ ಎಂಟ್ರಿ ಆಗ್ತಾರಾ? ಶ್ರೇಯಾಂಕಾ ಪಾಟೀಲ್, ಆರ್‌ಸಿಬಿ ಪುರುಷರ ತಂಡಕ್ಕೆ ಸೇರ್ಪಡೆ ಆಗ್ತಾರಾ? ಮುಂದೆ ಓದಿ.

Shreyanka Patil Joins Men s RCB Team Historic Movement in IPL Records Know More

ಐಪಿಎಲ್ ಇತಿಹಾಸದಲ್ಲೇ ಹೊಸ ನಿರ್ಧಾರ?

ಕ್ರಿಕೆಟ್ ಲೋಕದಲ್ಲಿ ಎಲ್ಲಿ ಕೇಳಿದರೂ ಬರೀ ಆರ್‌ಸಿಬಿ, ಆರ್‌ಸಿಬಿ ಪದವೇ ಪ್ರತಿಧ್ವನಿಸುತ್ತಿದೆ. ಹೀಗೆ ಬೆಂಗಳೂರು ತಂಡದ ಆಟಕ್ಕೆ ಕೋಟಿ ಕೋಟಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ರೀತಿ ಬೆಂಗಳೂರು ತಂಡ ಅಬ್ಬರಿಸಿ 2024ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಿಸೋದಕ್ಕೆ ಒಬ್ಬ ಕನ್ನಡತಿ ಕಾರಣ. ಆ ಕನ್ನಡತಿ ಹೆಸರೇ ಶ್ರೇಯಾಂಕಾ ಪಾಟೀಲ್, ಹೀಗಾಗಿ ಶ್ರೇಯಾಂಕಾ ಪಾಟೀಲ್ ಈಗ ಹೊಸ ನ್ಯಾಷನಲ್ ಕ್ರಷ್ ಆಗಿದ್ದಾರೆ. ಇದೀಗ ಸ್ಪಿನ್ ಬೌಲರ್ ಇಲ್ಲದೆ ನರಳುತ್ತಿರುವ ಆರ್‌ಸಿಬಿ ಪುರುಷರ ತಂಡಕ್ಕೂ, ಇದೇ ಶೇಯಾಂಕಾ ಅವರು ಆಫ್ ಸ್ಪಿನ್ನರ್ ಆಗಿ ಎಂಟ್ರಿ ಕೊಡಲಿದ್ದಾರಾ? ಎಂಬ ಕುತೂಹಲವು ಮೂಡಿದೆ.

ನಿಜವಾಗುತ್ತಾ ಫ್ಯಾನ್ಸ್ ಕನಸು?

ಅಷ್ಟಕ್ಕೂ ತಾಂತ್ರಿಕವಾಗಿ ಮಹಿಳಾ ಆಟಗಾರ್ತಿ ಒಬ್ಬರು, ಪುರುಷರ ತಂಡಕ್ಕೆ ಸೇರ್ಪಡೆಯಾಗಲು ಸಾಧ್ಯ ಆಗದೇ ಇದ್ದರೂ ಫ್ಯಾನ್ಸ್ ಇಂತಹ ಬೇಡಿಕೆ ಇಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಆರ್‌ಸಿಬಿ ಅಭಿಮಾನಿಗಳು ಇಂತಹ ಬೇಡಿಕೆ ಇಟ್ಟಿದ್ದು. ಶ್ರೇಯಾಂಕಾ ಅವರನ್ನ ತಂಡಕ್ಕೆ ಸೇರಿಸಿ ತಂಡವನ್ನು ಬಲಿಷ್ಠಗೊಳಿಸಿ ಅಂತಿದ್ದಾರೆ. ಈ ಮೂಲಕವಾಗಿ ಆರ್‌ಸಿಬಿ ಕಪ್ ಗೆಲ್ಲಲಿ ಎಂಬುವ ಮಾತನ್ನ ಹೇಳುತ್ತಿದ್ದಾರೆ. ಯಾಕಂದ್ರೆ ಆರ್‌ಸಿಬಿ ಮಹಿಳಾ ತಂಡ ಮೊದಲ ಬಾರಿಗೆ ಕಪ್ ಗೆದ್ದಿದ್ದ ಕಾರಣಕ್ಕೆ ಕೋಟಿ ಕೋಟಿ ಅಭಿಮಾನಿಗಳು ಖುಷಿಯಾಗಿದ್ದರು. ಈಗ ಪುರುಷರ ತಂಡವು ಕಪ್‌ನ ಗೆಲ್ಲಲಿ ಎಂಬ ಬೇಡಿಕೆ ಇಡುತ್ತಿದ್ದಾರೆ.

Shreyanka Patil Joins Men s RCB Team Historic Movement in IPL Records Know More

ಒಟ್ನಲ್ಲಿ ಹೀಗೆ ಆರ್‌ಸಿಬಿ ತಂಡದ ನೀರಸ ಪ್ರದರ್ಶನ ಹಾಗೂ ಹೀನಾಯವಾಗಿ ಎದುರಾಳಿ ತಂಡಕ್ಕೆ ರನ್ ಬಿಟ್ಟುಕೊಡುತ್ತಿರುವ ರೀತಿ ನೋಡಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಪುರುಷರ ತಂಡಕ್ಕೆ ಎಂಟ್ರಿ ಕೊಡ್ತಾರಾ? ಅನ್ನೋದನ್ನ ಇದೀಗ ಕಾದು ನೋಡಬೇಕಿದೆ.

16 ವರ್ಷ ಕಪ್ ಗೆದ್ದೇ ಇಲ್ಲ!

ಐಪಿಎಲ್ ಶುರುವಾಯ್ತು ಅಂದ್ರೆ ಭಾರತದಲ್ಲಿ ಹಬ್ಬದ ರೀತಿ ಜನ ಸೆಲೆಬ್ರೇಷನ್‌ ಮಾಡ್ತಾರೆ ಅದ್ರಲ್ಲೂ ಬೆಂಗಳೂರು ನಿವಾಸಿಗಳಿಗೆ & ಕನ್ನಡಿಗರಿಗೆ ಆರ್‌ಸಿಬಿ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇಷ್ಟೆಲ್ಲಾ ನಡೆದ್ರೂ ಕನ್ನಡಿಗರು ಮಾತ್ರ ಆರ್‌ಸಿಬಿ ತಂಡದ ಕೈಬಿಟ್ಟಿಲ್ಲ ಹಾಗೇ ಈ ಬಾರಿ ಅಂದ್ರೆ 17ನೇ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ, ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಮತ್ತೆ 'ಈ ಸಲ ಕಪ್ ನಮ್ದೆ' ವೈರಲ್ ಆಗುತ್ತಿದೆ. ಆದರೆ ಆರ್‌ಸಿಬಿ ತಂಡ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳನ್ನು ಬೇಸರಪಡಿಸಿದೆ. ಅಲ್ಲದೆ, ಆರ್‌ಸಿಬಿ ತಂಡದಲ್ಲಿ ಸ್ಪಿನ್ನರ್ಸ್ ಇಲ್ಲ ಅನ್ನೋದು ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ. ಹೀಗಾಗಿ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಪುರುಷರ ತಂಡಕ್ಕೆ ಸ್ಪಿನ್ನರ್ ಆಗಿ ಬರಲಿ ಅಂತಿದ್ದಾರೆ ಫ್ಯಾನ್ಸ್.

ಬಾಯಲ್ಲಿ ಕ್ಯಾಚ್ ಹಿಡಿತಾರಂತೆ!

ಶ್ರೇಯಾಂಕಾ ಪಾಟೀಲ್ ಸ್ಟಾರ್ ಕ್ರಿಕೆಟರ್ ಆಗಿ ಬೆಳೆದು ನಿಂತಿರುವುದಕ್ಕೆ ಅವರ ತಂದೆಗೂ ಹೆಮ್ಮೆ ಇದೆ. ಹೀಗೆ ತಮ್ಮ ಮಗಳ ಜೊತೆಗೆ ಸಂದರ್ಶನ ಒಂದರಲ್ಲಿ ಚರ್ಚೆ ಮಾಡುವಾಗ, ಮನೆಯಲ್ಲಿ ಅಪ್ಪ & ಮಗಳ ನಡುವೆ ಯಾವ ಕಾರಣಕ್ಕೆ ಜಗಳ ಆಗುತ್ತದೆ? ಎಂಬುದನ್ನ ವಿವರಿಸಿದ್ದಾರೆ. ಆಗ ಶ್ರೇಯಾಂಕಾ ಅವರು ತಮ್ಮ ತಂದೆ ಬಗ್ಗೆ ಕಂಪ್ಲೆಂಟ್ ಅನ್ನು ಹೇಳುತ್ತಾ ಕುತೂಹಲಕಾರಿ ವಿಚಾರ ಒಂದನ್ನ ವಿವರಿಸಿದ್ದಾರೆ.

ಹೌದು, ಶ್ರೇಯಾಂಕಾ ಪಾಟೀಲ್ ಅವರ ಅಪ್ಪ ರಾಜೇಶ್ ಪಾಟೀಲ್ ಪದೇ ಪದೇ ಮಗಳನ್ನ ರೇಗಿಸುತ್ತಾರಂತೆ. ಮಗಳು ಕ್ರಿಕೆಟ್ ಮ್ಯಾಚ್ ಮುಗಿಸಿ ಮನೆಗೆ ಬಂದಾಗ ಶ್ರೇಯಾಂಕಾ ಆಟದ ಬಗ್ಗೆ ಕಾಲು ಎಳೆಯುವ ಅವರು, ನಾನು ಬಾಯಲ್ಲೇ ಕ್ಯಾಚ್ ಹಿಡಿಯುತ್ತಿದ್ದೆ ಬಿಡು ಅಂತಾ ಚಾಲೆಂಜ್ ಹಾಕುತ್ತಾರಂತೆ. ಅಲ್ಲದೆ ಪ್ಯಾಡ್ ಇಲ್ಲದೆ ಒಂದೇ ಕೈಯಲ್ಲಿ ನಿನ್ನ ಬೌಲಿಂಗ್‌ಗೆ, ನಾನು ಬ್ಯಾಟಿಂಗ್ ಮಾಡ್ತೀನಿ ಅಂತಾನೂ ಶ್ರೇಯಾಂಕಾ ಪಾಟೀಲ್ ಅವರಿಗೆ, ಅವರ ಅಪ್ಪ ಚಾಲೆಂಜ್ ಹಾಕುತ್ತಾರಾಂತೆ. ಹೀಗೆ ಅಪ್ಪ & ಮಗಳ ಜಗಳದ ವಿಡಿಯೋ ವೈರಲ್ ಆಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+