Get Updates
Get notified of breaking news, exclusive insights, and must-see stories!

ಮೊಘಲರ ಕಾಲದ ಚಿತ್ರ ಹಂಚಿಕೊಂಡು ಪಾಕ್ ತಂಡವನ್ನು ಕಿಚಾಯಿಸಿದ ಶಶಿ ತರೂರ್

ನವದೆಹಲಿ, ಸೆ.13: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ 2022ರ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಶ್ರೀಲಂಕಾ ಗೆಲುವಿನ ನಗೆ ಬೀರಿದೆ. ಏಷ್ಯಾಕಪ್ 2022 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ರನ್ ಗಳಿಂದ ಶ್ರೀಲಂಕಾ ಸೋಲಿಸಿ, ಸಂಭ್ರಮದಲ್ಲಿ ತೇಲಾಡಿದೆ. ಈ ನಡುವೆ ಸಾಮಾಜಿಕ ಜಾಲ ತಾಣದಲ್ಲಿ ಪಾಕ್ ಸೋಲು, ಲಂಕನ್ನರ ಗೆಲುವಿನ ಬಗ್ಗೆ ಮೀಮ್ಸ್, ಟ್ರಾಲ್ಸ್ ನಿಂತಿಲ್ಲ. ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡಾ ಚಿತ್ರವೊಂದನ್ನು ಹಂಚಿಕೊಂಡು ಪಾಕ್ ತಂಡವನ್ನು ಕಿಚಾಯಿಸಿದ್ದಾರೆ.

ಶಶಿ ತರೂರ್ ಟ್ವೀಟ್ ಮಾಡಿರುವುದು ಮೊಘಲರ ಕಾಲದ ಒಂದು ಚಿತ್ರ. ಈ ಚಿತ್ರಕಲೆಗೂ ಶ್ರೀಲಂಕಾ ವಿರುದ್ಧದ ಪಾಕಿಸ್ತಾನ ತಂಡದ ಆಟಕ್ಕೂ ಸಂಬಂಧ, ಹೋಲಿಕೆ ಇದೆ. ಇಷ್ಟಕ್ಕೂ ಆ ಚಿತ್ರದಲ್ಲಿ ಅಂಥದ್ದೇನಿದೆ ಎಂದರೆ, ತುಂಬಾ ಸರಳ ಚಿತ್ರ. ಮೊಘಲರ ದಿರಿಸಿನಲ್ಲಿರುವ ವ್ಯಕ್ತಿಯೊಬ್ಬ ಕ್ರಿಕೆಟ್ ಚೆಂಡನ್ನು ಹಿಡಿಯಲು ಯತ್ನಿಸಿ, ವಿಫಲನಾಗಿ ಕೈಚೆಲ್ಲುವ ರೀತಿ ಚಿತ್ರವಿದೆ.

ಏಷ್ಯಾಕಪ್ 2022ರ ಅಂತಿಮ ಹಣಾಹಣಿಯಲ್ಲಿ ಮಹತ್ವದ ಘಟ್ಟದಲ್ಲಿ ಕ್ಯಾಚ್ ಹಿಡಿಯಬೇಕಿದ್ದ ಆಸಿಫ್ ಅಲಿ ಚೆಂಡನ್ನು ಕೈ ಚೆಲ್ಲಿ, ಬೌಂಡರಿ ದಾಟುವಂತೆ ಮಾಡಿದ್ದರು.

Shashi Tharoor takes sly dig at Pakistan cricket team with Mughal era painting of a fielder

ಈ ಪಂದ್ಯದಲ್ಲಿ 171ರನ್ ಗುರಿ ಬೆನ್ನತ್ತಿದ್ದ ಬಾಬರ್ ಅಜಮ್ ಪಡೆ 147 ಸ್ಕೋರಿಗೆ ಆಲೌಟ್ ಆಗಿ ಸೋಲು ಕಂಡಿದೆ. ಈ ಮೂಲಕ 23 ರನ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ಮತ್ತೊಮ್ಮೆ ಏಷ್ಯಾಕಪ್ ಗೆದ್ದುಕೊಂಡಿದೆ.

ಈ ಮೀಮ್ ಹಂಚಿಕೊಂಡಿರುವ 66 ವರ್ಷ ವಯಸ್ಸಿನ ಶಶಿ ತರೂರ್ 'ವಾಟ್ಸಾಪ್ ಹುಮರಿಸ್ಟ್' ಕೃಪೆ ಎಂದು ಹಾಕಿರುವುದು ವಿಶೇಷ.

ಇನ್ನು ಅಂತಿಮ ಪಂದ್ಯದಲ್ಲಿ ಪಾಕಿಸ್ತಾನಿ ಫೀಲ್ಡರ್ಸ್ ಕ್ಯಾಚ್ ಕೈಚೆಲ್ಲಿದ್ದು, ತಂಡಕ್ಕೆ ಮುಳುವಾಗಿದ್ದು ನಿಜ. ಶ್ರೀಲಂಕಾ ತಂಡಕ್ಕೆ ಆಸರೆಯಾದ ಭಾನುಕ ರಾಜಪಕ್ಸೆ 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು.

ಶ್ರೀಲಂಕಾ ತಂಡದ ಮೊತ್ತ 58/5 ಆಗಿದ್ದಾಗ ರಾಜಪಕ್ಸೆ ಸಮಯೋಚಿತ ಆಟವಾಡಿ, ತಂಡಕ್ಕೆ ಗೆಲುವು ತಂದುಕೊಟ್ಟರು. ಆದರೆ, ರಾಜಪಕ್ಸೆಗೆ ಜೀವದಾನ ಲಭಿಸಿತ್ತು. ಶಾಬಾದ್ ಹಾಗೂ ಆಸಿಫ್ ಇಬ್ಬರು ಡಿಕ್ಕಿ ಹೊಡೆದು ಕ್ಯಾಚ್ ಬಿಟ್ಟಿದ್ದು, ಹಲವು ಮೀಮ್ಸ್, ಟ್ರಾಲ್ಸ್ ಗಳಿಗೆ ದಾರಿ ಮಾಡಿಕೊಟ್ಟಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+