IPL 2024: ಯಾರು ಹೋದರು ಏನು ವ್ಯತ್ಯಾಸ ಆಗಲ್ಲ! ಪಾಂಡ್ಯ ಬಗ್ಗೆ ಶಮಿ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಸೀಸನ್‌ಗೆ ಮುಂಚಿತವಾಗಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ಮರುಸೇರ್ಪಡೆಯಾಗಿದ್ದು ಭಾರಿ ಸದ್ದು ಮಾಡಿತ್ತು. ಹಾರ್ದಿಕ್ ಪಾಂಡ್ಯ ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದರು ಮತ್ತು ಎರಡೂ ಆವೃತ್ತಿಯಲ್ಲಿ ಅವರು ತಂಡವನ್ನು ಫೈನಲ್‌ಗೆ ಮುನ್ನಡೆಸಿದರು.

2022 ರಲ್ಲಿ ಗುಜರಾತ್ ಟೈಟನ್ಸ್ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು 2023 ರಲ್ಲಿ ಅವರು ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ನಂತರ ರನ್ನರ್-ಅಪ್ ಸ್ಥಾನ ಪಡೆದರು.

Shami Gives Blunt Verdict on Hardik Pandyas Exit from Gujarat Titans Before IPL 2024

ಹಾರ್ದಿಕ್ ಪಾಂಡ್ಯ 2024ರ ಮಿನಿ ಹರಾಜಿಗೆ ಮುನ್ನ ಟ್ರೇಡಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಪಾಂಡ್ಯ ಗುಜರಾತ್ ಟೈಟನ್ಸ್ ತೊರೆದ ಬಗ್ಗೆ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರತಿಕ್ರಿಯೆ ನೀಡಿದ್ದಾರೆ.

ಏನೂ ವ್ಯತ್ಯಾಸ ಆಗಲ್ಲ

ಸಂದರ್ಶನವೊಂದರಲ್ಲಿ ಮೊಹಮ್ಮದ್ ಶಮಿ ಅವರಿಗೆ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ತೊರೆದ ಬಗ್ಗೆ ಪ್ರತಿಕ್ರಿಯೆ ನೀಡಿ, "ಯಾರು ಹೋದರೂ ಏನೂ ವ್ಯತ್ಯಾಸ ಆಗುವುದಿಲ್ಲ. ತಂಡದ ಸಮತೋಲನವನ್ನು ನೀವು ನೋಡಬೇಕು. ಹಾರ್ದಿಕ್ ಪಾಂಡ್ಯ ನಮಗೆ ಉತ್ತಮ ನಾಯಕತ್ವ ವಹಿಸಿದ್ದರು. ಅವರು ಎರಡೂ ಆವೃತ್ತಿಗಳಲ್ಲಿ ನಮ್ಮನ್ನು ಫೈನಲ್‌ಗೆ ಕರೆದೊಯ್ದರು ಮತ್ತು ನಾವು ಒಮ್ಮೆ ಗೆದ್ದಿದ್ದೇವೆ.

ಆದರೆ ಗುಜರಾತ್ ಹಾರ್ದಿಕ್ ಅವರನ್ನು ಜೀವಮಾನವಿಡೀ ಆಡುವ ಬಗ್ಗೆ ಸಹಿ ಮಾಡಿರಲಿಲ್ಲ. ಉಳಿಯುವುದು ಅಥವಾ ಬಿಡುವುದು ಅವರ ನಿರ್ಧಾರ. ಶುಭ್‌ಮನ್‌ಗೆ ಈಗ ನಾಯಕನಾಗಿದ್ದು, ಅನುಭವವನ್ನೂ ಪಡೆಯಲಿದ್ದಾರೆ. ಕೆಲವು ದಿನ ಅವರೂ ಬೇರೆ ತಂಡಕ್ಕೆ ಹೋಗಬಹುದು. ಇದು ಆಟದ ಒಂದು ಭಾಗವಾಗಿದೆ. ಆಟಗಾರರು ಬರುತ್ತಾರೆ ಮತ್ತು ಹೋಗುತ್ತಾರೆ" ಎಂದು ಶಮಿ ನ್ಯೂಸ್ 24 ಗೆ ತಿಳಿಸಿದ್ದಾರೆ.

"ನೀವು ನಾಯಕರಾದಾಗ, ನಿಮ್ಮ ಪ್ರದರ್ಶನಗಳನ್ನು ನೋಡಿಕೊಳ್ಳುವಾಗ ಜವಾಬ್ದಾರಿಯನ್ನು ನಿರ್ವಹಿಸುವುದು ಮುಖ್ಯವಾಗಿದೆ. ಮತ್ತು ಆ ಜವಾಬ್ದಾರಿಯನ್ನು ಈ ಬಾರಿ ಶುಭ್‌ಮನ್‌ಗೆ ವಹಿಸಲಾಗಿದೆ. ಅವರ ಮೇಲೆ ಸ್ವಲ್ಪ ಹೊರೆ ಇರಬಹುದು, ಆದರೆ ಆಟಗಾರರು ಹೆಚ್ಚು ಕಡಿಮೆ ಒಂದೇ ಆಗಿರುತ್ತಾರೆ. ಹಾಗಾಗಿ ಆತ ಚಿಂತಿಸುವ ಅಗತ್ಯವಿಲ್ಲ. ನೀವು ಆಟಗಾರರನ್ನು ಉತ್ತಮವಾಗಿ ನಿರ್ವಹಿಸಬೇಕು ಮತ್ತು ನಿಮ್ಮ ಆಟಗಾರರಿಂದ ಉತ್ತಮವಾದದನ್ನು ಹೊರತೆಗೆಯಬೇಕು," ಎಂದು ಹೇಳಿದರು.

ಅರ್ಜುನ ಪ್ರಶಸ್ತಿ ಪಡೆದ ಶಮಿ

ಮೊಹಮ್ಮದ್ ಶಮಿ, ಬಿಲ್ಲುಗಾರರಾದ ಓಜಸ್ ಪ್ರವೀಣ್ ಡಿಯೋಟಾಲೆ, ಶೀತಲ್ ದೇವಿ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಮತ್ತು ಕುಸ್ತಿಪಟು ಅಂತಿಮ್ ಪಂಗಲ್ ಅವರೊಂದಿಗೆ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+