Savan Barwal: ಪುರುಷರ ಮ್ಯಾರಥಾನ್‌ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ, 44 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ

Savan Barwal: ಜಪಾನ್‌ನ ಐಚಿ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಕ್ರೀಡಾಕೂಟದ ಪುರುಷರ ಮ್ಯಾರಥಾನ್ ಓಟದಲ್ಲಿ ಭಾರತದ ಸಾವನ್ ಬರ್ವಾಲ್ ಅವರು ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ 7ನೇ ದಿನದಂದು ಭಾರತೀಯ ಕ್ರೀಡಾಪಟು ಸಾವನ್ ಬರ್ವಾಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ ಅತ್ಯಂತ ಕಠಿಣ ಮ್ಯಾರಥಾನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಡುವ ಮೂಲಕ 44 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Savan Barwal Wins Silver at Asian Games 2026 Ends India s 44-Year Marathon Medal Wait Know details

ಹೊಸ ದಾಖಲೆ ಬರೆದ ಸಾವನ್ ಬರ್ವಾಲ್

28 ವರ್ಷದ ಸಾವನ್ ಬರ್ವಾಲ್ ಮ್ಯಾರಥಾನ್ ಓಟವನ್ನು 2 ಗಂಟೆ 11 ನಿಮಿಷ 36 ಸೆಕೆಂಡುಗಳಲ್ಲಿ (2:11:36) ಪೂರ್ಣಗೊಳಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರು. ಈ ಅತ್ಯುತ್ತಮ ಪ್ರದರ್ಶನದ ಮೂಲಕ ಅವರು ಈ ಹಿಂದೆ ತಾವೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು (2:11:58) ಮತ್ತೆ ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಬೆಳ್ಳಿಗೆ ತೃಪ್ತಿಪಟ್ಟ ಸಾವನ್

ಸ್ಪರ್ಧೆಯ ಕೊನೆಯ ಹಂತದವರೆಗೂ ತೀವ್ರ ಪೈಪೋಟಿ ನೀಡಿದ ಅವರು, ಅತ್ಯಂತ ಶ್ರೇಷ್ಠ ಪ್ರದರ್ಶನ ನೀಡಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಜಪಾನ್‌ನ ಇಚಿಟಾಕಾ ಯಮಾಶಿತಾ (2:10:51) ಚಿನ್ನದ ಪದಕ ಗೆದ್ದರೆ, ಸಾವನ್ ಅವರು ಬೆಳ್ಳಿಗೆ ತೃಪ್ತಿಪಟ್ಟರು.

ಏಷ್ಯನ್ ಗೇಮ್ಸ್ ಮ್ಯಾರಥಾನ್ ಇತಿಹಾಸದಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಪದಕ ಇದಾಗಿದೆ. 1982ರ ದೆಹಲಿ ಏಷ್ಯನ್ ಗೇಮ್ಸ್‌ನಲ್ಲಿ ಹೊಸೂರು ಕುಕ್ಕಪ್ಪ ಸೀತಾರಾಮ್ ಅವರು ಕಂಚಿನ ಪದಕ ಗೆದ್ದಿದ್ದರು. ಅದಾದ ನಂತರ ಮ್ಯಾರಥಾನ್ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಪದಕ ಒಲಿದಿರಲಿಲ್ಲ. ಇದೀಗ 44 ವರ್ಷಗಳ ನಂತರ ಸಾವನ್ ಬರ್ವಾಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕದ ಬರವನ್ನು ನೀಗಿಸಿ ಗಮನ ಸೆಳೆದಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರಡಾಭಂಕರ ಗ್ರಾಮದವರಾದ ಸಾವನ್ ಬರ್ವಾಲ್, ಭಾರತೀಯ ಸೇನೆಯ ಎಂಜಿನಿಯರಿಂಗ್ ಕಾರ್ಪ್ಸ್‌ನಲ್ಲಿ ಹವಿಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 1951ರ ಉದ್ಘಾಟನಾ ಏಷ್ಯನ್ ಗೇಮ್ಸ್‌ನಲ್ಲಿ ಛೋಟಾ ಸಿಂಗ್ ಚಿನ್ನ ಮತ್ತು ಸೂರತ್ ಸಿಂಗ್ ಮಾಥುರ್ ಕಂಚಿನ ಪದಕ ಗೆದ್ದಿದ್ದರು. ಇದೀಗ ಸಾವನ್ ಬರ್ವಾಲ್ ಬೆಳ್ಳಿ ಪದಕ ಗಲ್ಲುವ ಮೂಲಕ ಇವರ ಸಾಲಿಗೆ ಸೇರಿದ್ದಾರೆ. ಇದೀಗ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಮ್ಯಾರಥಾನ್‌ನಲ್ಲಿ ಪದಕ ಗೆದ್ದ ಭಾರತೀಯರು

* 2026: ಸಾವನ್ ಬರ್ವಾಲ್ - ಸಿಲ್ವಾಪ್ (2:11:36)
* 1982: ಹೊಸೂರು ಕುಕ್ಕಪ್ಪ ಸೀತಾರಾಮನ್ - ಕಂಚು (2:25:07)
* 1951 - ಛೋಟಾ ಸಿಂಗ್ - ಚಿನ್ನ (2:42:58.6)
* 1951: ಸೂರತ್ ಸಿಂಗ್ ಮಾಥುರ್ - ಕಂಚು (2:53:49.8)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+