ಕೋಚ್ ವಿರುದ್ಧ ಮಹಿಳಾ ಸೈಕಲಿಸ್ಟ್ ದೂರು, ತನಿಖೆಗೆ ಸಮಿತಿ ರಚಿಸಿದ SAI
ನವದೆಹಲಿ, ಜೂನ್ 6: ಭಾರತೀಯ ರಾಷ್ಟ್ರೀಯ ಸೈಕಲ್ ಪಟುಗಳ ತಂಡದ ಕೋಚ್ ವಿರುದ್ಧ ಗುರುತರ ಆರೋಪ ಕೇಳಿ ಬಂದಿದೆ. ಸೈಕಲಿಸ್ಟ್ ಮಯೂರಿ ಲೂತೆ ತಮ್ಮ ಜೊತೆ ತಂಡದ ಮುಖ್ಯ ಕೋಚ್ ಆರ್ ಕೆ ಶರ್ಮ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಮಯೂರಿ ನೀಡಿದ ದೂರನ್ನು ಪರಿಗಣಿಸಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಈ ಬಗ್ಗೆ ಸಮಗ್ರ ತನಿಖೆಗೆ ಸಮಿತಿಯನ್ನು ರಚಿಸಿದೆ. ಸೈಕಲಿಂಗ್ ಫೆಡರೇಷನ್ ಸಹಯೋಗದಲ್ಲಿ ಸಮಿತಿ ರಚನೆಯಾಗಲಿದ್ದು ತನಿಖೆ ನಡೆಯಲಿದೆ.
ಸೈಕ್ಲಿಸ್ಟ್ ಮಯೂರಿ ದೂರಿನ ಬಗ್ಗೆ ಆದ್ಯತೆಯ ಮೇರೆಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಸಿಎಫ್‌ಐ) ಕೂಡ ತನ್ನ ಅಥ್ಲೀಟ್‌ನ ಬೆಂಬಲಕ್ಕೆ ನಿಂತಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಹೇಳಿದೆ. "ಸ್ಲೊವೇನಿಯಾದಲ್ಲಿ ವಿದೇಶಿ ತರಬೇತಿ ಶಿಬಿರದ ಸಂದರ್ಭದಲ್ಲಿ ತರಬೇತುದಾರರಿಂದ ಅನುಚಿತ ವರ್ತನೆ ಕಂಡು ಬಂದಿದೆ ಎಂದು ದೂರು ಬಂದಿದೆ. ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಶಿಫಾರಸಿನ ಮೇರೆಗೆ ತರಬೇತುದಾರನನ್ನು ನೇಮಿಸಲಾಗಿದೆ ಎಂದು SAI ಮಾಹಿತಿ ನೀಡಿದೆ.
"ಕ್ರೀಡಾಪಟು ನೀಡಿದ ದೂರು ಅನುಸರಿಸಿ, ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು SAI ತಕ್ಷಣವೇ ಅವರನ್ನು ಭಾರತಕ್ಕೆ ಕರೆತಂದಿದೆ ಮತ್ತು ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ಸಹ ರಚಿಸಿದೆ. ಈ ವಿಷಯವನ್ನು ಆದ್ಯತೆಯ ಮೇಲೆ ವ್ಯವಹರಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಪರಿಹರಿಸಲಾಗುವುದು" ಎಂದು SAI ಅಧಿಕೃತ ಹೇಳಿಕೆ ನೀಡಿದೆ.

ಜೂನ್ 18 ರಿಂದ 22 ರವರೆಗೆ ನಡೆಯಲಿರುವ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗಾಗಿ ಸ್ಲೊವೇನಿಯಾದಲ್ಲಿ ತರಬೇತಿ-ಕಮ್-ಸ್ಪರ್ಧೆಯ ವಿದೇಶಿ ಎಕ್ಸ್‌ಪೋಸರ್ ಟ್ರಿಪ್ ತಯಾರಿ ನಡೆಸಲಾಗಿದೆ.
"ದೂರುದಾರರಾದ ಮಯೂರಿ ಅವರ ಬೆಂಬಲಕ್ಕೆ CFI ನಿಂತಿದೆ ಮತ್ತು SAI ರಚಿಸಿರುವ ಸಮಿತಿಯ ನಿರ್ಧಾರವು ಫೆಡರೇಶನ್‌ನ ಸಂಪೂರ್ಣ ಬೆಂಬಲವನ್ನು ಹೊಂದಿರುತ್ತದೆ ಎಂದು ಈಗಾಗಲೇ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಮಯೂರಿ ಜೊತೆ ಮಾತುಕತೆ ನಡೆಸಿದೆದೆ" ಎಂದು CFI ಹೇಳಿದೆ.
CFI ಯ ನಾಲ್ಕು ಸದಸ್ಯರ ಸಮಿತಿಯು ಪ್ರಧಾನ ಕಾರ್ಯದರ್ಶಿ ಮಣಿಂದರ್ ಪಾಲ್ ಸಿಂಗ್, ಎಸ್‌ಎಸ್ ಸುದೀಶ್ ಕುಮಾರ್ (ಅಧ್ಯಕ್ಷ, ಕೇರಳ ಸೈಕ್ಲಿಂಗ್), ದಿಪಾಲಿ ನಿಕಮ್ (ಮುಖ್ಯ ತರಬೇತುದಾರ, ಮಹಾರಾಷ್ಟ್ರ ಸೈಕ್ಲಿಂಗ್ ತಂಡ) ಮತ್ತು ಸಹಾಯಕ ಕಾರ್ಯದರ್ಶಿ ವಿಎನ್ ಸಿಂಗ್ ಅವರು ಸೋಮವಾರದಂದು ಮಯೂರಿರನ್ನು ಭೇಟಿಯಾಗಿ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದರು.
ಕೋಚ್ ಶರ್ಮಾ ಜೊತೆಗೆ ಉಳಿದ ಆಟಗಾರರು ಜೂನ್ 14 ರಂದು ಭಾರತಕ್ಕೆ ಮರಳಲು ನಿರ್ಧರಿಸಲಾಗಿದೆ ಎಂದು ಸಿಎಫ್‌ಐ ಹೇಳಿದೆ.












Click it and Unblock the Notifications