RCB VS CSK: ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗಲು ಚೆನ್ನೈ ವಿರುದ್ಧ 18 ರನ್ ಅಂತರದಲ್ಲಿ ಗೆಲ್ಲಲೇಬೇಕು!
RCB ತಂಡದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದು, ಇಂದು ಚೆನ್ನೈ ವಿರುದ್ಧದ ಪಂದ್ಯದ ನಡುವೆ ಶುರುವಾದ ಭರ್ಜರಿ ಮಳೆ ದಿಢೀರ್ ನಿಂತು ಹೋಗಿದೆ. ಹೀಗಾಗಿ ಪಂದ್ಯ ಯಾವುದೇ ಓವರ್ ಬದಲಾವಣೆ ಇಲ್ಲದೆ ಮತ್ತೆ ಆರಂಭ ಆಗಿದ್ದು, ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗಲು ಹೇಗೆ ಗೆಲ್ಲಬೇಕಿದೆ ಗೊತ್ತಾ? ಬನ್ನಿ ತಿಳಿಯೋಣ.
ಆರ್‌ಸಿಬಿ ತಂಡ 13 ಪಂದ್ಯ ಆಡಿದ್ದು, 6 ಪಂದ್ಯದಲ್ಲಿ ಗೆದ್ದು 7 ಪಂದ್ಯ ಸೋತಿದೆ. ಆದರೆ ಮುಂದಿನ ಹಂತಕ್ಕೆ ಹೋಗಲು ಆರ್‌ಸಿಬಿ ಬೆಂಗಳೂರು ತಂಡ ಇಂದಿನ ಮ್ಯಾಚ್ ಗೆಲ್ಲಲೇಬೇಕಿದೆ. ಇಲ್ಲವಾದರೆ ಈ ಸ್ಥಿತಿಯಲ್ಲಿ ಆರ್‌ಸಿಬಿ ತಂಡಕ್ಕೆ ಅವಕಾಶ ಮಿಸ್ ಆಗಲಿದ್ದು, ಚೆನ್ನೈ ತಂಡವೇ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಮಳೆ ನಿಲ್ಲಲಿ ದೇವರೆ ಅಂತಾ ಬೇಡಿಕೊಳ್ಳುತ್ತಿದ್ದಾರೆ. ಚೆನ್ನೈ ತಂಡಕ್ಕೆ, ಮಳೆ ಬಂದರು ಕೂಡ ಮತ್ತೆ ಪ್ಲಸ್ ಪಾಯಿಂಟ್ ಆಗಲಿದೆ. ಯಾಕಂದ್ರೆ ಚೆನ್ನೈ ಈಗಾಗಲೇ 14 ಪಾಯಿಂಟ್ ಗಳಿಸಿದೆ, ಈಗ ಮಳೆ ಬಂದು ಮ್ಯಾಚ್ ನಿಂತರೆ ಚೆನ್ನೈ 15 ಪಾಯಿಂಟ್ ಗಳಿಸಲಿದೆ. ಹೀಗಾಗಿ ಆರ್‌ಸಿಬಿ ಈ ಪಂದ್ಯ ಅಧಿಕ ರನ್ ಅಂತರದಲ್ಲಿ ಗೆಲ್ಲಬೇಕಿದೆ.

18 ರನ್ ಅಂತರದ ಗೆಲುವು!
RCB ತಂಡ ಮುಂದಿನ ಹಂತಕ್ಕೆ ಹೋಗಲು ಇಂದು ಚೆನ್ನೈ ವಿರುದ್ಧ ಗೆದ್ದರೆ ಮಾತ್ರ ಸಾಲದು, ಇದರ ಜೊತೆಗೆ ಆರ್‌ಸಿಬಿ ಬೆಂಗಳೂರು ತಂಡ ಇಂದು ಭರ್ಜರಿ 18 ರನ್ ಅಂತರದ ಗೆಲುವು ಸಾಧಿಸಬೇಕಿದೆ. ಇಲ್ಲವಾದರೆ ಆರ್‌ಸಿಬಿ ತಂಡ ರನ್‌ರೇಟ್ ಲೆಕ್ಕಾಚಾರದಲ್ಲಿ ಚೆನ್ನೈ ತಂಡಕ್ಕಿಂತ ಹಿಂದೆ ಉಳಿಯಲಿದೆ. ಈ ಮೂಲಕ ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಿಂದಲೇ ಹೊರ ಬೀಳಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ತಲುಪಲಿದೆ. ಹೀಗಾಗಿ ಈಗ ಆರ್‌ಸಿಬಿ ತಂಡ ಕನಿಷ್ಠ 18 ರನ್ ಅಂತರದ ಗೆಲುವು ಸಾಧಿಸಬೇಕಿದೆ.
ಮಳೆಯಿಂದ ಮ್ಯಾಚ್ ನಿಂತಿತ್ತು!
ಆರ್‌ಸಿಬಿ & ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿರುವ ಅತ್ಯಂತ ಮಹತ್ವದ ಐಪಿಎಲ್ ಪಂದ್ಯ ಮಳೆಯ ಕಾರಣಕ್ಕೆ ನಿಂತಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ, ಉತ್ತಮವಾಗಿ ಆರಂಭ ಪಡೆದರೂ ಕೇವಲ 3 ಓವರ್ ಆಗುವುದರ ಒಳಗೆ ಜೋರಾಗಿ ಮಳೆಯ ಆಗಮನ ಆಯ್ತು.
ಮಳೆ ಬಂದ ಹಿನ್ನೆಲೆ ಅನಿವಾರ್ಯ ಪರಿಸ್ಥಿತಿಯಲ್ಲಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಿಲ್ಲಿಸಲಾಯಿತು. ಆದರೆ ನಂತರ ಮ್ಯಾಚ್ ಮತ್ತೆ ಆರಂಭ ಮಾಡಲಾಗಿದೆ. ಯಾಕಂದ್ರೆ ಈ ಮ್ಯಾಚ್ ನಡೆಯುತ್ತಿರುವುದು ನಮ್ಮ ಬೆಂಗಳೂರಿನಲ್ಲಿ. ಬೆಂಗಳೂರು ಕ್ರಿಕೆಟ್ ಮೈದಾನದಲ್ಲಿ ಮಳೆ ಬಂದಾಗ ಕೆಲವೇ ನಿಮಿಷದಲ್ಲಿ ಪಿಚ್ ಮತ್ತು ಫೀಲ್ಡ್ ಒಣಗಿಸುವ ತಂತ್ರಜ್ಞಾನ ಇದೆ. ಹೀಗಾಗಿ ಆರ್‌ಸಿಬಿ ತಂಡಕ್ಕೆ ಇಂದು ಮತ್ತೆ ಭಾರಿ ಅನುಕೂಲ ಆಗಿದೆ.
18 ರನ್ ಒಂದೇ ಮಂತ್ರ!
ಮಳೆ ನಿಂತ ತಕ್ಷಣ ಚಿನ್ನಸ್ವಾಮಿ ಕ್ರೀಡಾಂಗಣದ ಸಿಬ್ಬಂದಿ ಅಲರ್ಟ್ ಆಗಿ ಮೈದಾನ ಒಣಗಿಸಿದ್ರು ಹೀಗಾಗಿ ಪಂದ್ಯ ಕೇವಲ 20 ನಿಮಿಷದಲ್ಲಿ ಮತ್ತೆ ಆರಂಭ ಆಗಿದೆ. ಅಲ್ಲದೆ ಯಾವುದೇ ರೀತಿ ಓವರ್‌ಗಳ ಬದಲಾವಣೆ ಕೂಡ ಮಾಡಿಲ್ಲ, ಹೀಗಾಗಿ 20 ಓವರ್‌ಗೆ ಪಂದ್ಯ ನಡೆಯಲಿದೆ. ಈ ಎಲ್ಲಾ ಸಮಾಧಾನದ ನಡುವೆ ಆರ್‌ಸಿಬಿ ಇಂದು 18 ರನ್ ಅಂತರದಲ್ಲಿ ಗೆಲ್ಲಬೇಕಿದೆ ಅಷ್ಟೇ. ಅಭಿಮಾನಿಗಳು ಕೂಡ ದೇವರ ಬಳಿ ಇದನ್ನೇ ಈಗ ಬೇಡಿಕೊಳ್ಳುತ್ತಿದ್ದಾರೆ. ಈಗಿನ ಪರಿಸ್ಥಿತಿ ನೋಡಿದ್ರೆ ಅದು ಸಾಧ್ಯ ಎನ್ನಲಾಗುತ್ತಿದೆ ಕೂಡ. ಈ ನಡುವೆ ವಿರಾಟ್ ಕೊಹ್ಲಿ 47 ರನ್‌ಗೆ ಔಟ್ ಆಗಿ, ಸ್ವಲ್ಪದರಲ್ಲೇ ಅರ್ಧಶತಕ ಮಿಸ್ ಮಾಡಿಕೊಂಡರು.












Click it and Unblock the Notifications