ರಜತ್ ಪಾಟಿದಾರ್ ಢಮಾರ್, ವಿರಾಟ್ ಕೊಹ್ಲಿ ಕೈಗೆ ಆರ್‌ಸಿಬಿ ನಾಯಕತ್ವ ನೀಡಲು... Virat Kohli
ವಿರಾಟ್ ಕೊಹ್ಲಿ ವಿಚಾರದಲ್ಲಿ ಆರ್‌ಸಿಬಿ ಅಭಿಮಾನಿಗಳು ಯಾವುದೇ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ. ಜೀವ ಇರುವ ತನಕ ಕೂಡ ವಿರಾಟ್ ಕೊಹ್ಲಿ ನಮ್ಮ ಜೀವ ಅಂತಾರೆ ವಿರಾಟ್ ಫ್ಯಾನ್ಸ್. ಹೀಗಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂದ್ರೆ ಆರ್‌ಸಿಬಿ ಆಡಳಿತ ವಿರಾಟ್ ಕೊಹ್ಲಿ ಅವರನ್ನ ಕ್ಯಾಪ್ಟನ್ ಸ್ಥಾನದಿಂದ ಕೆಳಗೆ ಇಳಿಸಿದೆ. ಆದರೆ ಆರ್‌ಸಿಬಿ ತಂಡ ಕೊಹ್ಲಿ ಇಲ್ಲದೆ ಹೀನಾಯವಾಗಿ ಸೋಲು ಕಾಣುತ್ತಿರುವ ಸಮಯದಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ...
ವಿರಾಟ್ ಕೊಹ್ಲಿ ಅವರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತವರಿನ ಕುವರ ಅಂದ್ರೆ ಕನ್ನಡ ಮಣ್ಣಿನ ಮಗನ ರೀತಿ ಹಚ್ಚಿಕೊಂಡಿದ್ದಾರೆ. ಆರ್‌ಸಿಬಿ ತಂಡಕ್ಕೋಸ್ಕರ ಕಳೆದ 18 ವರ್ಷದಿಂದ ಆಡ್ತಿರುವ ವಿರಾಟ್ ಕೊಹ್ಲಿ ಬಗ್ಗೆ ಕನ್ನಡಿಗರಿಗೆ ಸಿಕ್ಕಾಪಟ್ಟೆ ಗೌರವ ಕೂಡ ಇದೆ. ಹೀಗಾಗಿಯೇ ವಿರಾಟ್ ಕೊಹ್ಲಿಗೆ ಎಲ್ಲಾ ರೀತಿಯಲ್ಲಿ ಬೆಂಬಲ ನೀಡುತ್ತಾರೆ ಕನ್ನಡಿಗರು. ಆದರೂ ಆರ್‌ಸಿಬಿ ನಾಯಕತ್ವ ಸ್ಥಾನದಿಂದ ವಿರಾಟ್ ಕೊಹ್ಲಿ ಅವರನ್ನ ಹೊರಗೆ ಇಟ್ಟಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ವಿರಾಟ್ ಕೊಹ್ಲಿ ಕೈಗೆ ಆರ್‌ಸಿಬಿ ನಾಯಕತ್ವ ನೀಡಲು...

ಕೊಹ್ಲಿ ಕೈಗೆ ಆರ್‌ಸಿಬಿ ನಾಯಕತ್ವ ನೀಡಲು...
ಕೊಹ್ಲಿ... ಕೊಹ್ಲಿ... ಕೊಹ್ಲಿ... ಹೀಗೆ ವಿರಾಟ್ ಕೊಹ್ಲಿ ಅಂದ್ರೆ ಕನ್ನಡಿಗರಿಗೆ ತುಂಬಾ ಹತ್ತಿರ ಅಂತಾ ಹೇಳಬೇಕು. ವಿರಾಟ್ ಕೊಹ್ಲಿ ಬೆಂಗಳೂರು ತಂಡಕ್ಕೆ ಆಡುತ್ತಿದ್ದು, ಬೇರೆ ಯಾವುದೇ ತಂಡಕ್ಕೆ ಹೋಗುವ ಮನಸ್ಸು ಮಾಡಿಲ್ಲ. ಹೀಗೆ ಕೊಹ್ಲಿ ಅವರನ್ನ ನಮ್ಮ ನಾಡಿನ ಜನ, ಅಂದ್ರೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಅಣ್ಣಾ ಅಂತ ಕರೆದು ಗೌರವಿಸುತ್ತಾರೆ. ಹೀಗೆ ಬೆಂಗಳೂರು ಟೀಂ ಆರ್‌ಸಿಬಿ ಫ್ಯಾನ್ಸ್ ಪಾಲಿನ ಅಣ್ಣ, ಕೊಹ್ಲಿ ಅವರ ಕೈಗೆ ಆರ್‌ಸಿಬಿ ನಾಯಕತ್ವ ನೀಡಲು...
ಬೇಕೆ ಬೇಕು.. ನ್ಯಾಯ ಬೇಕು..!
ಆರ್‌ಸಿಬಿ ತಂಡ ಈ ಬಾರಿ ಸಿಕ್ಕಾಪಟ್ಟೆ ಜೋಶ್‌ನಲ್ಲೇ ಆಟ ಆರಂಭಿಸಿತ್ತು. 2025ರ ಐಪಿಎಲ್ ಟೂರ್ನಿ ಆರಂಭ ಆದಾಗ ಆರ್‌ಸಿಬಿ ಕಪ್ ಗೆಲ್ಲೋದು ಗ್ಯಾರಂಟಿ ಅಂತಾನೇ ಎಲ್ಲರು ಕೂಡ ಭಾವಿಸಿದ್ದರು. ಆದರೆ ಇದೀಗ ಸಾಲು ಸಾಲು ಸೋಲುಗಳು ಎದುರಾಗಿರುವ ಕಾರಣಕ್ಕೆ ಭಾರಿ ಆಕ್ರೋಶ ಮೊಳಗಿದೆ. ಬೆಂಗಳೂರು ತಂಡ ಆರ್‌ಸಿಬಿ ಇದೇ ರೀತಿ ಸೋಲುತ್ತಾ ಹೋದರೆ ಆಗ ಮತ್ತೆ ಕಪ್ ಗೆಲ್ಲಲು ಆಗಲ್ಲ, ಈ ಬಾರಿ ಕೂಡ ಕಪ್ ನಮ್ಮದಲ್ಲ ಅಂತಾ ಹೇಳಬೇಕಾಗುತ್ತದೆ ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿರುವ ಭಯ. ಇದೇ ಕಾರಣಕ್ಕೆ ಇದೀಗ ತಕ್ಷಣ ವಿರಾಟ್ ಕೊಹ್ಲಿ ಕೈಗೆ ಆರ್‌ಸಿಬಿ ನಾಯಕತ್ವ ನೀಡಲು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.
ವಿರಾಟ್ ಕೊಹ್ಲಿ ಫ್ಯಾನ್ಸ್ ಡಿಮ್ಯಾಂಡ್!
ಹೌದು, ಕಿಂಗ್ ವಿರಾಟ್ ಕೊಹ್ಲಿ ವಿಚಾರದಲ್ಲಿ ಮತ್ತೆ ಮಹತ್ವದ ಮನವಿ ಮಾಡಿರುವ ಆರ್‌ಸಿಬಿ ಅಭಿಮಾನಿಗಳು ಮಹತ್ವದ ಬೇಡಿಕೆಯನ್ನ ಮುಂದಿಟ್ಟಿದ್ದಾರೆ. ಕಿಂಗ್ ವಿರಾಟ್ ಕೊಹ್ಲಿಗೆ ತಕ್ಷಣವೆ ಆರ್‌ಸಿಬಿ ನಾಯಕತ್ವ ವಹಿಸಲು ಕ್ರಮ ಕೈಗೊಳ್ಳಿ ಅಂತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಳಿತಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಹೀಗಾಗಿಯೇ ಈಗ ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಟೀಂ ಕ್ಯಾಪ್ಟನ್ ಆಗುತ್ತಾರಾ? ಅನ್ನೋ ಕುತೂಹಲ ಮೂಡಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲೇ ಆರ್‌ಸಿಬಿ ಮ್ಯಾಚ್ ಸೋತ ನಂತರ ಭಾರಿ ದೊಡ್ಡ ಕೋಲಾಹಲ ಎದ್ದಿದೆ.












Click it and Unblock the Notifications