ಸೂರ್ಯಕುಮಾರ್ ಯಾದವ್‌ ಕ್ಯಾಚ್‌ ಬಿಟ್ಟಿದ್ದರೇ ರೋಹಿತ್ ಶರ್ಮಾ ಏನು ಮಾಡುತ್ತಿದ್ದರು?

ಟೀಮ್ ಇಂಡಿಯಾ ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗಿ ದಿನಗಳೇ ಕಳೆದಿವೆ. ಆದರೂ ಈ ಪಂದ್ಯದ ಒಂದೊಂದು ರೋಚಕ ಸಂಗತಿಗಳು ದಿನ ಕಳೆದಂತೆ ಬೆಳಕಿಗೆ ಬರುತ್ತಿವೆ. ಈ ಎಲ್ಲ ವಿಷಯಗಳ ನಡುವೆ ಎಲ್ಲರ ಚಿತ್ತ ಕದ್ದಿದ್ದು ಸೂರ್ಯಕುಮಾರ್‌ ಯಾದವ್‌ ಪಡೆದ ಕ್ಯಾಚ್‌..

ಎಲ್ಲರಿಗೂ ಈ ಕ್ಯಾಚ್‌ ಇನ್ನು ಕಣ್ಣಿನಲ್ಲಿ ಹಸಿರಾಗಿದೆ. ಆ ಸನ್ನಿವೇಶವನ್ನು ಒಮ್ಮೆ ನೆನಪಿಸಿಕೊಂಡರೆ ಬರಬಹುದಾದ ಒಂದೇ ಒಂದು ಪದ ವ್ಹಾ.. ಈ ಕ್ಯಾಚ್‌ ಇಡೀ ಪಂದ್ಯದ ಸನ್ನಿವೇಶವನ್ನೇ ಬದಲು ಮಾಡಿತು. ಈ ಕ್ಯಾಚ್‌ ಪಡೆದ ಸೂರ್ಯಕುಮಾರ್‌ ಸೂಪರ್‌ ಮ್ಯಾನ್‌ ರೀತಿ ಅಭಿಮಾನಿಗಳ ಮುಂದೆ ರಾಜನಂತೆ ಮೆರೆಯುತ್ತಿದ್ದಾರೆ. ಈಗ ಈ ಕ್ಯಾಚ್‌ ಪಡೆದ ಸನ್ನಿವೇಶದ ಬಗ್ಗೆ ಈಗ ಹಲವು ಕಥೆಗಳು ಹೊರ ಬರುತ್ತಿವೆ.

Rohit Sharma s Hilarious Reaction to Suryakumar Yadav s Match-Winning Catch in T20 World Cup Final

ಕೊನೆಯ ಓವರ್‌

ಹಾರ್ದಿಕ್ ಪಾಂಡ್ಯ ಕೊನೆಯ ಓವರ್ ಎಸೆಯಲು ಮುಂದಾದರು. ಆ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 16 ರನ್‌ಗಳ ಅವಶ್ಯಕತೆ ಇತ್ತು. ಈ ರನ್‌ಗಳನ್ನು ಡಿಫೆಂಡ್‌ ಮಾಡಿಕೊಳ್ಳುವುದು ಹಾರ್ದಿಕ್‌ ಪಾಂಡ್ಯ ಅವರಿಗೆ ಸವಾಲಾಗಿತ್ತು. ಇಂತಹ ಕಷ್ಟದ ಸನ್ನಿವೇಶದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಬೌಲಿಂಗ್ ಮಾಡಿ ಅಭ್ಯಾಸ ಇತ್ತು. ಹೀಗಾಗಿ ಒತ್ತಡವನ್ನು ಮೆಟ್ಟಿ ನಿಂತು ಬೌಲ್‌ ಮಾಡಿದರು.

ಈ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್‌ ಮಿಲ್ಲರ್‌ ಹಾರ್ದಿಕ್‌ ಎಸೆದ ಫುಲ್‌ ಟಾಸ್‌ ಎಸೆತವನ್ನು ಲಾಂಗ್‌ ಆನ್‌ ಬೌಂಡರಿ ಮೇಲೆ ಸಿಕ್ಸರ್‌ ಬಾರಿಸಲು ಮುಂದಾದರು. ಆದರೆ ಸೂರ್ಯಕುಮಾರ್‌ ಬೌಂಡರಿ ಲೈನ್‌ನಲ್ಲಿ ರಣ ಹದ್ದಿನ್ನಂತೆ ಕಾಯುತ್ತಿದ್ದರು. ಬೌಂಡರಿ ಕಡೆ ಚೆಂಡು ಬರುತ್ತಿದ್ದಂತೆ ಸೂರ್ಯ ಕಾರ್ಯಪ್ರವೃತರಾದರು. ಅಲ್ಲದೆ ಅಮೋಘವಾಗಿ ಕ್ಯಾಚ್‌ ಪಡೆದು ತಂಡಕ್ಕೆ ಚಾಂಪಿಯನ್‌ ಪಟ್ಟಕ್ಕೇರಿಸಿದರು.

ಕ್ಯಾಚ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

ಈ ಕ್ಯಾಚ್‌ ಬಗ್ಗೆ ಇತ್ತೀಚಿಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಮನ ಬಿಚ್ಚಿ ಮಾತನಾಡಿದ್ದಾರೆ. ರೋಹಿತ್ ಶರ್ಮಾ ಸನ್ಮಾನ ಸ್ವೀಕರಿಸಿ, ವಿಶ್ವಕಪ್‌ ನೆನಪನ್ನು ಮೆಲಕು ಹಾಕಿದರು. ಇದೇ ವೇಳೆ ಸೂರ್ಯಕುಮಾರ್‌ ಯಾದವ್ ಪಡೆದ ಕ್ಯಾಚ್‌ ಬಗ್ಗೆಯೂ ಮಾತನಾಡಿದರು.

Rohit Sharma s Hilarious Reaction to Suryakumar Yadav s Match-Winning Catch in T20 World Cup Final

"ಸೂರ್ಯಕುಮಾರ್‌ ಯಾದವ್‌ ಅದ್ಭುತ ಕ್ಯಾಚ್‌ ಪಡೆದರು. ಚೆಂಡನ್ನು ಅವರ ಕೈಗೆ ಕ್ಯಾಚ್‌ ಬಂದಿತು. ಒಂದು ವೇಳೆ ಸೂರ್ಯಕುಮಾರ್‌ ಯಾದವ್‌ ಕ್ಯಾಚ್‌ ಬಿಟ್ಟಿದ್ದರೆ, ನಾನು ಅವರನ್ನು ಕುಡಿಸಿ ಬಿಡುತ್ತಿದ್ದೆ" ಎಂದು ರೋಹಿತ್‌ ಹೇಳಿದರು. ಆಗ ಸಭೆಯಲ್ಲಿದ್ದ ಸಭಿಕರು ನಕ್ಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+