Rohit Sharma: ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ಮುನ್ನ ಭಾರತಕ್ಕೆ ಆಘಾತ?
ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಮುನ್ನ ಭಾರತಕ್ಕೆ ಆತಂಕ ಶುರುವಾಗಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಗಾಯದ ಭೀತಿ ಕಾಡುತ್ತಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ಮಾಡುವಾಗ ರೋಹಿತ್ ಶರ್ಮಾ ಅವರು ಗಾಯಗೊಳ್ಳುವ ಪರಿಸ್ಥಿತಿಯಿಂದ ಅದೃಷ್ಟವಶಾತ್ ಬಚಾವಾಗಿದ್ದಾರೆ.

ವರದಿಗಳ ಪ್ರಕಾರ ಅಭ್ಯಾಸ ಮಾಡುವ ಸಂದರ್ಭದಲ್ಲಿ ಅವರ ಬೆರಳಿಗೆ ಚಂಡು ತಾಗಿದೆ. ಇದಕ್ಕೂ ಮೊದಲು, ಐರ್ಲೆಂಡ್ ವಿರುದ್ಧದ ಭಾರತದ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಮೊಣಕೈಗೆ ಹೊಡೆದ ನಂತರ ರೋಹಿತ್ ಅರ್ಧಶತಕವನ್ನು ಹೊಡೆದ ನಂತರ ಬಲವಂತವಾಗಿ ನಿವೃತ್ತಿ ಹೊಂದಬೇಕಾಯಿತು.
ಕಾಡುತ್ತಿದೆ ಗಾಯದ ಭೀತಿ
ರೋಹಿತ್ ಶರ್ಮಾ ಥ್ರೋಡೌನ್ ಸ್ಪೆಷಲಿಸ್ಟ್‌ನಿಂದ ಎಸೆತಗಳ್ನು ಎದುರಿಸುವಾಗ ಒಂದು ಬಾರಿ ಬೆರಳಿಗೆ ಚಂಡು ತಾಗಿತ್ತು. ಆದರೂ, ಸಹಾಯಕ ಸಿಬ್ಬಂದಿ ಮತ್ತು ತಂಡದ ಫಿಸಿಯೋಗಳಿಂದ ತಕ್ಷಣವೇ ಅದಕ್ಕೆ ಚಿಕಿತ್ಸೆ ಪಡೆದ ನಂತರ ಬ್ಯಾಟಿಂಗ್ ಮುಂದುವರಿಸಿದರು. ವರದಿಯ ಪ್ರಕಾರ, ಶರ್ಮಾ ಒಂದೆರಡು ನಿಮಿಷಗಳ ನಂತರ ಬ್ಯಾಟಿಂಗ್ ಮುಂದುವರಿಸಿದ್ದು ಸದ್ಯ ಗಾಯದ ಭಯ ಇಲ್ಲ ಎನ್ನಲಾಗಿದೆ.
ಮೊಣಕೈಗೆ ತಾಗಿದ್ದ ಚೆಂಡು
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜೋಶುವಾ ಲಿಟಲ್‌ನಿಂದ ಅವರ ಎಸೆತ ರೋಹಿತ್ ಶರ್ಮಾ ಬ್ಯಾಟ್‌ನಿಂದ ತಪ್ಪಿಸಿಕೊಂಡು ಮೊಣಕೈಗೆ ಹೊಡೆಯಿತು. ಚಂಡು ಬೀಳುತ್ತಿದ್ದಂತೆ ನೋವಿನಿಂದ ಬಳಲಿದ ಅವರು ಮೈದಾನದಿಂದ ಹೊರನಡೆದರು. ಆದರೂ ಅವರು ಆ ವೇಳೆಗೆ ಅರ್ಧಶತಕ ಪೂರೈಸಿದ್ದರು.
ಪಂದ್ಯದ ಬಳಿಕ ಮಾತನಾಡಿದ್ದ ಅವರು, ಸ್ವಲ್ಪ ಹೆಚ್ಚಾಗಿ ನೋವಾಗಿತ್ತು ಎಂದು ಹೇಳಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವುದು ಭಾರತ ತಂಡಕ್ಕೆ ಮುಖ್ಯವಾಗಿದೆ. ರೋಹಿತ್ ಶರ್ಮಾ ಅವರಿಗೆ ಗಾಯದ ಸಮಸ್ಯೆ ಕಾಡದೇ ಇರಲಿ ಎಂದು ಭಾರತ ತಂಡದ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ.












Click it and Unblock the Notifications