ರಿಷಭ್ ಪಂತ್ ತಪ್ಪಿಗೆ ಶಿಕ್ಷೆ: ಐಸಿಸಿ ವಿಧಿಸಿದ ದಂಡ ಏನು?
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಲೀಡ್ಸ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಆಂಡರ್ಸನ್-ತೆಂಡೂಲ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್, ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ವಿದೇಶಿ ನೆಲದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಎಂಬ ಶ್ರೇಯ ಇವರದ್ದಾಗಿದೆ. ಇವರ ಅವಿಸ್ಮರಣೀಯ ಇನಿಂಗ್ಸ್‌ನ ಹೊರತಾಗಿಯೂ ಐಸಿಸಿ ಇವರ ವಿರುದ್ಧ ಗರಂ ಆಗಿದ್ದು ಶಿಕ್ಷೆಯನ್ನು ವಿಧಿಸಿದೆ.
ರಿಷಭ್ ಪಂತ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ದರು. ಹಾಗೇಯೇ ಎರಡನೇ ಇನಿಂಗ್ಸ್‌ನಲ್ಲೂ ಕಾಡಿ ಗಮನ ಸೆಳೆದರು. ಈ ವೇಳೆ ಪಂತ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ ಇತಿಹಾಸ ಬರೆದರು. ಆದರೆ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವಾಗ ರಿಷಭ್ ಪಂತ್ ತೋರಿದ ಆ ವರ್ತನೆಗೆ ಐಸಿಸಿ ಕೆಂಡ ಕಾರಿದೆ. ಅಲ್ಲದೆ ಶಿಕ್ಷೆಯನ್ನು ಸಹ ಘೋಷಿಸಿದೆ.

ಲೀಡ್ಸ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಪಡೆಯುವಲ್ಲಿ ಹೆಣಗಾಟ ನಡೆಸಿತ್ತು. ಈ ವೇಳೆ ಕ್ಯಾಚ್‌ಗಳನ್ನು ಕೈ ಚೆಲ್ಲಿದ ಆಟಗಾರರು ತಂಡದ ಚಿಂತೆಯನ್ನು ಹೆಚ್ಚಿಸಿದ್ದರು. ಈ ವೇಳೆ ಟೀಮ್ ಇಂಡಿಯಾ ಆಟಗಾರರು ನಿಯಮಿತ ಸಮಯಕ್ಕೂ ಮುನ್ನವೇ ಚೆಂಡು ಶೇಪ್ ಕಳೆದುಕೊಂಡಿದೆ. ಚೆಂಡನ್ನು ಬದಲಿಸುವಂತೆ ಪದೆ ಪದೇ ಅಂಪೈರ್‌ಗೆ ಕೇಳಿಕೊಂಡರು. ಇವರ ಮನವಿಗೆ ಅಂಪೈರ್ ಯಾವುದೇ ಸೊಪ್ಪು ಹಾಕಿರಲಿಲ್ಲ. ಆದರೆ ಇದೇ ವಿಷಯವನ್ನು ಮತ್ತೆ ಪಂತ್, ಅಂಪೈರ್ ಬಳಿ ಕೇಳಿದ್ರು.
ಪಂತ್ ತಪ್ಪಿಗೆ ಐಸಿಸಿ ಶಿಕ್ಷೆ
ಪಂತ್ ಅವರ ಮನವಿಗೆ ಮನ್ನಣೆ ನೀಡಿದ ಅಂಪೈರ್ ಅವರ ಬಳಿ ಇದ್ದ ಬಾಲ್ ಗೇಜ್‌ನಿಂದ ಪರೀಕ್ಷೆ ನಡೆಸಿದರು. ಆದರೆ ಅಂಪೈರ್ ಪರೀಕ್ಷೆ ನಡೆಸಿದಾಗ ಚೆಂಡು ಗೇಜ್‌ನಿಂದ ಪಾರು ಮಾಡಿತು. ಆಗ ಅಂಪೈರ್ ಚೆಂಡನ್ನು ಬದಲಿಸಲು ಒಪ್ಪಲಿಲ್ಲ. ಇದರಿಂದ ಪಂತ್ ನಿರಾಸೆಗೆ ಒಳಗಾದರು. ಚೆಂಡನ್ನು ಅಂಪೈರ್‌ರಿಂದ ಪಡೆದು ಬಲವಂತವಾಗಿ ನೆಲದ ಮೇಲೆ ಎಸೆದರು. ರಿಷಭ್ ಪಂತ್ ಅವರ ಈ ನಡೆಗೆ ಐಸಿಸಿ ಗರಂ ಆಗಿದೆ.

ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ತಪ್ಪಿತಸ್ಥರೆಂದು ಕಂಡು ಬಂದಿದೆ. ಐಸಿಸಿ ಪಂತ್ ಅವರ ನಡೆಯನ್ನು ಖಂಡಿಸಿದ್ದು ಒಂದು ಡಿಮೆರಿಟ್ ಅಂಕ ಸೇರಿಸಿದೆ. ಪಂತ್ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಾರೆ. ಪಂತ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂ ಹೆಚ್ಚಿನ ಚರ್ಚೆ ಆಗುವುದಿಲ್ಲ. ಒಬ್ಬ ಆಟಗಾರ ಎರಡು ವರ್ಷಗಳಲ್ಲಿ 24 ತಿಂಗಳು ಗಳಲ್ಲಿ 4 ಡಿಮೆರಿಟ್ ಅಂಕಗಳನ್ನು ಪಡೆದರೆ, ಆಗ ಒಂದು ಪಂದ್ಯವನ್ನು ನಿಷೇಧಿಸಲಾಗುತ್ತದೆ. ಪಂತ್‌ಗೆ ಇದು ಮೊದಲ ಡಿಮೇರಿಟ್ ಅಂಕವಾಗಿದೆ.












Click it and Unblock the Notifications