Rishabh Pant: ಡೆಲ್ಲಿ ತೊರೆಯುತ್ತಾರಾ ರಿಷಭ್ ಪಂತ್?
ಟೀಮ್ ಇಂಡಿಯಾ ಈಗ ಶ್ರೀಲಂಕಾ ಪ್ರವಾಸವನ್ನು ಎದುರು ನೋಡುತ್ತಿದೆ. ಜಿಂಬಾಬ್ವೆ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ತಂಡ, ಮತ್ತೊಂದು ಸರಣಿಯ ಗೆಲುವಿಗೆ ರಣ ತಂತ್ರವನ್ನು ಹೆಣೆದುಕೊಳ್ಳುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಐಪಿಎಲ್ ಹರಾಜು ಸಹ ಸುದ್ದಿ ಮಾಡುತ್ತಿದೆ. ಮುಂದಿನ ವರ್ಷ ಐಪಿಎಲ್ ಮೆಗಾ ಹರಾಜು ನಡೆಯಲಿದ್ದು, ಈ ಹರಾಜಿಗೆ ಮಾಲೀಕರು ಸಿದ್ಧತೆ ನಡೆಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಂಗಳದಿಂದ ಸಹ ಒಂದು ಸುದ್ದಿ ಸಂಚಲನ ಮೂಡಿಸಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ನಾಯಕತ್ವದಿಂದ ಕೆಳಗಿಸುವ ಸೂಚನೆ ಸಿಕ್ಕಿದೆ. ಈ ಬೆನ್ನಲ್ಲೆ, ಇನ್ನೊಂದು ತಂಡ, ಸ್ಟಾರ್ ಆಟಗಾರನನ್ನು ಕೈ ಬಿಡುವ ಸುಳಿವು ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಪಡಸಾಲೆಯಿಂದ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಹೊರ ನಡೆದಿದ್ದಾರೆ. ಈಗ ಸ್ಟಾರ್ ಪ್ಲೇಯರ್ ತಂಡವನ್ನು ಬಿಡುವ ಊಹಾಪೋಹಳು ಎದ್ದಿವೆ.

ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆಯಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್ 2025 ರ ಮೆಗಾ ಹರಾಜಿನ ಮುಂಚೆಯೇ ಪಂತ್ ತಮ್ಮ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ತಿಳಿದು ಬಂದಿದೆ. ಪಾಂಟಿಂಗ್ ಅವರು 7 ವರ್ಷಗಳ ಕಾಲ DC ಯೊಂದಿಗೆ ಸಂಬಂಧ ಹೊಂದಿದ್ದರು, ಆದರೆ ಅವರ ನಿರ್ಗಮನದ ನಂತರ ತಂಡದ ಮುಖ್ಯ ಕೋಚ್ ಹುದ್ದೆ ಖಾಲಿ ಆದಂತೆ ಆಗಿದೆ.
ರಿಷಬ್ ಪಂತ್ ಮತ್ತು ರಿಕಿ ಪಾಂಟಿಂಗ್ ಉತ್ತಮ ಸ್ನೇಹ ವಿತ್ತು. ರಿಕ್ಕಿ ತಂಡವನ್ನು ತೊರೆದಿದ್ದರಿಂದ ಪಂತ್ ಸಹ ಅವರ ಹೆಜ್ಜೆಯನ್ನು ತುಳಿಯಬಹುದು ಎಂದು ಹೇಳಲಾಗುತ್ತಿದೆ. ಪಂತ್ 2016 ರಿಂದ ದೆಹಲಿ ಪರ ಬ್ಯಾಟ್ ಬೀಸುತ್ತಿದ್ದಾರೆ. ಮತ್ತು ಶ್ರೇಯಸ್ ಅಯ್ಯರ್ ಗಾಯಗೊಂಡ ನಂತರ 2021 ರಲ್ಲಿ ನಾಯಕತ್ವವನ್ನು ಪಡೆದುಕೊಂಡಿದ್ದಾರೆ. ಅಂದಿನಿಂದ ಅವರು ಡಿಸಿ ತಂಡದ ನಾಯಕನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.

ರಿಷಭ್ ಪಂತ್‌ಗೆ ಭಾರೀ ಬಾಜಿ?
ಒಂದು ವೇಳೆ ಈ ಸುದ್ದಿ ನಿಜ ಆಗಿದ್ದೇ ಆದಲ್ಲಿ, ರಿಷಭ್ ಪಂತ್ ಐಪಿಎಲ್ ಹರಾಜು ಅಂಗಳದಲ್ಲಿ ಭಾರೀ ಮೊತ್ತವನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇವರನ್ನು ಕೊಳ್ಳಲು ಮಾಲೀಕರು ಸಹ ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಹೆಚ್ಚಾಗಿದೆ.
ನಾಯಕನಾಗಿ ರಿಷಭ್
ರಿಷಬ್ ಪಂತ್ ಕಳೆದ ನಾಲ್ಕು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಡೆಲ್ಲಿ ಒಂದು ಬಾರಿ ಮಾತ್ರ ಪ್ಲೇ ಆಫ್ ಪ್ರವೇಶಿಸಿದೆ. 2021 ರಲ್ಲಿ, ಡಿಸಿ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿತ್ತು. ಇದಾದ ಬಳಿಕ ಈ ತಂಡ ಮೂರು ವರ್ಷಗಳಲ್ಲಿ ಒಮ್ಮೆಯೂ ಪ್ಲೇ ಆಫ್ ತಲುಪಲು ಸಾಧ್ಯವಾಗಿರಲಿಲ್ಲ.
ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿರುವ ರಿಷಭ್ ಪಂತ್, ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ಅಲ್ಲದೆ ವಿಕೆಟ್ ಕೀಪಿಂಗ್‌ನಲ್ಲೂ ಮಿಂಚು ಹರಿಸಿದ್ದರು.












Click it and Unblock the Notifications