Rishab Pant: ಮೈದಾನದಲ್ಲೇ ಲಿಟ್ಟನ್ ದಾಸ್ - ರಿಷಬ್ ಪಂತ್ ಜಗಳ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದ್ದು. ಆರಂಭದಲ್ಲಿ ಬಾಂಗ್ಲಾದೇಶ ಬೌಲಿಂಗ್ ಪಡೆ ಮೇಲುಗೈ ಸಾಧಿಸಿತು, ರೋಹಿತ್, ಕೊಹ್ಲಿ, ಗಿಲ್ ವಿಫಲವಾದರು. ಪಂತ್, ಜೈಸ್ವಾಲ್ ಆಸರೆಯಾದರು. ಅಪಘಾತದ ಬಳಿಕ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಆಡುತ್ತಿರುವ ರಿಷಬ್ ಪಂತ್ ಬಾಂಗ್ಲಾದೇಶದ ಆಟಗಾರ ಲಿಟ್ಟನ್ ದಾಸ್ ನಡುವೆ ಮೈದಾನದಲ್ಲೇ ವಾಗ್ವಾದ ನಡೆಯಿತು.
ಭಾರತ ಮೊದಲ 10 ಓವರ್ ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಬಾಂಗ್ಲಾದೇಶ ಆಟಗಾರ ಉತ್ಸಾಹ ಹೆಚ್ಚಾಗಿತ್ತು. ಅವರ ಬೌಲರ್‌ಗಳು ವಿಶೇಷವಾಗಿ ಹಸನ್ ಮಹಮೂದ್ ಮಾರಕ ಬೌಲಿಂಗ್ ಮಾಡುತ್ತಿದ್ದರು ಮತ್ತು ಫೀಲ್ಡರ್‌ಗಳು ಸಹಜವಾಗಿ ಚುರುಕಾಗಿದ್ದರು.

ಯಶಸ್ವಿ ಜೈಸ್ವಾಲ್ ಮತ್ತು ರಿಷಬ್ ಪಂತ್ ಮಹತ್ವದ ಜೊತೆಯಾಟ ಆಡುತ್ತಿದ್ದರು. ಬಾಂಗ್ಲಾದೇಶ 4ನೇ ವಿಕೆಟ್‌ಗಾಗಿ ಕಾಯುತ್ತಿತ್ತು, ಪಂದ್ಯದ 16 ನೇ ಓವರ್‌ನಲ್ಲಿ, ರಿಷಬ್ ಪಂತ್ ಜೈಸ್ವಾಲ್ ಜೋಡಿಯು ಒಂದು ರನ್ ಪಡೆಯಲು ಓಡಿದರು, ಆದರೆ ಜೈಸ್ವಾಲ್ ಔಟಾಗುವ ಅಪಾಯ ಅರಿತು ಪಂತ್ ಅವರನ್ನು ಹಿಂದಕ್ಕೆ ಕಳುಹಿಸಿದರು, ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಆಟಗಾರ ಥ್ರೋ ಎಸೆದರು, ಚೆಂಡು ಪಂತ್ ಧರಿಸಿದ್ದ ಪ್ಯಾಡ್‌ಗೆ ಬಡಿದು ಮಿಡ್ ವಿಕೆಟ್ ಕಡೆಗೆ ಹೋಯಿತು.
ಚೆಂಡು ಮಿಡ್ ವಿಕೆಟ್‌ಗೆ ಹೋದ ಬಳಿಕ ಪಂತ್ ಜೈಸ್ವಾಲ್ ಸಿಂಗಲ್ ರನ್ ಓಡಿದರು. ಚೆಂಡು ಪಂತ್‌ಗೆ ಬಡಿದ ಬಳಿಕ ರನ್ ಓಡಿದ್ದು ಬಾಂಗ್ಲಾದೇಶ ಆಟಗಾರರಿಗೆ ಇಷ್ಟವಾಗಲಿಲ್ಲ, ಲಿಟ್ಟನ್ ದಾಸ್ ಕೋಪಗೊಂಡರು. ರಿಷಬ್ ಪಂತ್ ಜೊತೆಗೆ ವಾಗ್ವಾದ ನಡೆಸಿದರು. ಇಬ್ಬರ ನಡುವೆ ಸುದೀರ್ಘ ಚರ್ಚೆ ನಡೆಯಿತು. ಲಿಟ್ಟನ್ ದಾಸ್ ಹೇಳಿದ್ದನ್ನು ಕೇಳಿದ ಪಂತ್, ಚೆಂಡನ್ನು ಸರಿಯಾಗಿ ಎಸೆಯಲು ಫೀಲ್ಡರ್ ಗೆ ಹೇಳಿ, ಆತ ನನಗೆ ಏಕೆ ಎಸೆಯುತ್ತಿದ್ದಾನೆ? ಎಂದು ಸಿಟ್ಟಾದರು.
ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಲಿಟ್ಟನ್ ದಾಸ್ ಅವರಿಗೆ ರಿಷಬ್ ಪಂತ್ ಯಾವ ರೀತಿ ಕಾಲೆಳೆಯುತ್ತಾರೆ ಎನ್ನುವುದನ್ನು ನೋಡಬೇಕಿದೆ. ಪಂತ್ ವಿಕೆಟ್ ಹಿಂದೆ ನಿಂತುಕೊಂಡು ಎದುರಾಳಿ ಆಟಗಾರರ ಕಾಲೆಳೆಯುವುದನ್ನು ಹಲವು ಬಾರಿ ನೋಡಿದ್ದೇವೆ.
ಭಾರತಕ್ಕೆ ಮೇಲುಗೈ
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 80 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ. ಜೈಸ್ವಾಲ್ 56 ರನ್ ಗಳಿಸಿದರು. ರವೀಂದ್ರ ಜಡೇಜಾ ಅಜೇಯ 86 ರನ್ ಗಳಿಸಿದರೆ, ರವಿಚಂದ್ರನ್ ಅಶ್ವಿನ್ ಅಜೇಯ 102 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಎರಡನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.












Click it and Unblock the Notifications