Rishabh Pant: ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ರಿಷಬ್ ಪಂತ್ ಆಟ ನೋಡಿ ಸುಸ್ತಾದ ಫ್ಯಾನ್ಸ್!
ರಿಷಬ್ ಪಂತ್, ಭಾರತ ತಂಡದ ಭರವಸೆಯ ವಿಕೆಟ್ ಕೀಪರ್ ಬ್ಯಾಟರ್. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಆಡಿದ ಇನ್ನಿಂಗ್ಸ್ ಅವರಿಗೆ ಹೀರೋ ಪಟ್ಟ ತಂದುಕೊಟ್ಟಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸುವ ರಿಷಬ್ ಪಂತ್, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಮಾತ್ರ ಅಷ್ಟೇನೂ ಉತ್ತಮವಾಗಿ ಆಡಲ್ಲ ಎನ್ನುವ ದೂರು ಇದ್ದೇ ಇದೆ. ಇದು ಮತ್ತೊಮ್ಮೆ ಸಾಬೀತಾಗಿದ್ದು, ಅಭಿಮಾನಿಗಳು ಟೀಕಿಸಿದ್ದಾರೆ.
ಶನಿವಾರದಿಂದ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಪಂದ್ಯಾವಳಿ ಆರಂಭವಾಗಿದೆ. ರಿಷಬ್ ಪಂತ್ ಪುರಾನಿ ದಿಲ್ಲಿ 6 ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ, ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ 32 ಎಸೆತಗಳಲ್ಲಿ 35 ರನ್ ಗಳಿಸಿ ಔಟಾಗಿದ್ದು, ಅಭಿಮಾನಿಗಳಿಗೆ ತಲೆನೋವು ತಂದಿದೆ.

ಪಂತ್ ಸಹಜವಾಗಿ ಸ್ಫೋಟಕ ಬ್ಯಾಟರ್ ಎನಿಸಿಕೊಂಡವರು, ಆದರೆ ಅವರು ಅಷ್ಟು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುವುದು ಟಿ20 ಮಾದರಿಯಲ್ಲಿ ಪಂದ್ಯದ ಸೋಲಿಗೆ ಕಾರಣವಾಗಿದೆ. ಅದರಲ್ಲೂ ಸ್ಪಿನ್ ಬೌಲಿಂಗ್ ವಿರುದ್ಧ ರನ್ ಗಳಿಸಲು ಪಂತ್ ಪರದಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಪಂತ್ ಟೀಕೆಗೆ ಗುರಿಯಾಗಿದ್ದಾರೆ. ಸ್ಪಿನ್ ವಿರುದ್ಧ ಪಂತ್ ಇನ್ನೂ ಸುಧಾರಿಸಬೇಕಿದೆ ಎಂದು ಹೇಳಿದ್ದಾರೆ.
ಪಂದ್ಯದ ಮೊದಲು, ರಿಷಬ್ ಪಂತ್ ಅವರನ್ನು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ರೋಹನ್ ಜೇಟ್ಲಿ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಅಭಿನಂದನೆ ಸಲ್ಲಿಸಿದರು.
ವಿಶ್ವಕಪ್‌ನಲ್ಲಿ ಮಿಂಚಿದ್ದ ಪಂತ್
2024ರ ಟಿ20 ವಿಶ್ವಕಪ್‌ನಲ್ಲಿ ರಿಷಬ್ ಪಂತ್ 24.42ರ ಸರಾಸರಿಯಲ್ಲಿ 171 ರನ್ ಗಳಿಸಿದರು. ಬ್ಯಾಟಿಂಗ್ ಮಾಡಲು ಕಷ್ಟಕರವಾದ ಪಿಚ್‌ಗಳಲ್ಲಿ ಹಲವು ಭಾರಿ ಉಪಯುಕ್ತ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಕೀಪಿಂಗ್‌ನಲ್ಲಿ ಕೂಡ ಪಂತ್ ಉತ್ತಮ ಪ್ರದರ್ಶನ ನೀಡಿದ್ದರು. 13 ಕ್ಯಾಚ್ ಪಡೆದಿದ್ದರು.
ಶನಿವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಭರ್ಜರಿ ಉದ್ಘಾಟನಾ ಸಮಾರಂಭದ ನಂತರ ಡೆಲ್ಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಟಿ20 ಪಂದ್ಯಾವಳಿ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲೇ ರಿಷಬ್ ಪಂತ್ ಪಡೆಗೆ ಸೋಲಿನ ಕಹಿ ಸಿಕ್ಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ ನಾಯಕತ್ವದ ಪುರಾನಿ ದಿಲ್ಲಿ 6 ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿದರೆ, ಸೌತ್ ದೆಹಲಿ ಸೂಪರ್ ಸ್ಟಾರ್ಸ್ ತಂಡ 19.1 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 198 ರನ್ ಗಳಿಸುವ ಮೂಲಕ 3 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.












Click it and Unblock the Notifications