IPL 2025 RCB: ಪಂದ್ಯಕ್ಕೂ ಮುನ್ನ ಆರ್‌ಸಿಬಿ ಗೂಡು ಸೇರಿದ ಮೂವರು ಸ್ಫೋಟಕ ಆಟಗಾರರು

IPL 2025 RCB: ಅರ್ಧಕ್ಕೆ ನಿಂತಿದ್ದ ಐಪಿಎಲ್‌ 2025 ಟೂರ್ನಿ ಮತ್ತೆ ಮೇ 17ರಿಂದ ಮುಂದುವರೆಯಲಿದೆ. ಹೊಸ ವೇಳಾಪಟ್ಟಿ ಪ್ರಕಾರ, ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ವಿದೇಶಕ್ಕೆ ಮರಳಿದ್ದ ಬೆಂಗಳೂರು ತಂಡದ ಮೂವರು ಸ್ಪೋಟಕ ಆಟಗಾರರು ಪಂದ್ಯ ಆರಂಭಕ್ಕೂ ಮುನ್ನ ಮತ್ತೆ ವಾಪಾಸ್‌ ಆಗಿದ್ದಾರೆ. ಇದರಿಂದ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐ ಆಟಗಾರರು ಹಾಗೂ ಅಭಿಮಾನಿಗಳ ಹಿತದೃಷ್ಟಿಯಿಂದ ಐಪಿಎಲ್‌ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಿ ಒಂದು ವಾರಕ್ಕೆ ಮೂಂದೂಡಿತ್ತು. ಈ ವೇಳೆ ವಿದೇಶಿ ಆಟಗಾರರನ್ನು ಅವರ ದೇಶಗಳಿಗೆ ವಾಪಾಸ್‌ ಕಳುಹಿಸಲಾಗಿತ್ತು. ಇದೀಗ ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಮತ್ತೆ ಟೂರ್ನಿ ಆರಂಭಕ್ಕೆ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಮೇ 17ರಿಂದ ಐಪಿಎಲ್‌ ಆರಂಭವಾಗಲಿದ್ದು, ಮತ್ತೆ ವಿದೇಶಿ ಆಟಗಾರರನ್ನು ಭಾರತಕ್ಕೆ ಕರೆಸಿಕೊಳ್ಳುವ ಕಾರ್ಯ ನಡೆಯುತ್ತಿದೆ.

RCB s Three Strong Players Arrived to Bengaluru From England before IPL Match

ಅದರಲ್ಲೂ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಬಲಿಷ್ಠ ತಂಡ ಆರ್‌ಸಿಬಿಗೆ ಮೂವರು ವಿದೇಶಿ ಆಟಗಾರರು ಮರಳಿದ್ದಾರೆ. ಸ್ಪೋಟಕ ಆಟಗಾರರಾಗಿರುವ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೇಕಬ್ ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯಕ್ಕೂ ಮುನ್ನ ಬೆಂಗಳೂರಿಗೆ ಆಗಮಿಸಿದ್ದಾರೆ. ಇದರಿಂದ ಬೆಂಗಳೂರು ತಂಡಕ್ಕೆ ಆನೆಬಲ ಬಂದಂತಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಟ್ರೋಫಿ ಎತ್ತುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

ಆರ್‌ಸಿಬಿ ತಂಡದಲ್ಲಿ ಫಿಲ್‌ ಸಾಲ್ಟ್, ಲಿವಿಂಗ್‌ಸ್ಟೋನ್ ಮತ್ತು ಬೆಥೆಲ್ ಪ್ರಮುಖ ಆಟಗಾರರಾಗಿದ್ದಾರೆ. ಈ ಮೂವರು ಸಹ ಆಲ್‌ ರೌಂಟರ್ ಆಟಗಾರರಾಗಿದ್ದು, ಸ್ಫೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್‌ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದರಲ್ಲೂ ಫಿಲ್ ಸಾಲ್ಟ್‌ ಬ್ಯಾಟಿಂಗ್‌, ಬೌಲಿಂಗ್‌ ಜೊತೆ ವಿಕೆಟ್‌ ಕೀಪರ್ ಸ್ಥಾನವನ್ನು ನಿಭಾಯಿಸಬಲ್ಲ ಮಾಡಬಲ್ಲವರಾಗಿದ್ದಾರೆ. ಇನ್ನು ಯುವ ಆಟಗಾರ ಬೆಥೆಲ್ ಒಂದು ವೇಳೆ ಫಿಲ್‌ ಸಾಲ್ಟ್‌ ಹೊರಗುಳಿದರೆ, ಅವರ ಆರಂಭಿಕ ಬ್ಯಾಟಿಂಗ್‌ ಸ್ಥಾನವನ್ನು ತುಂಬುವ ಸಾಮರ್ಥ್ಯ ಹೊಂದಿದ್ದಾರೆ.

ಇನ್ನು ಆರ್‌ಸಿಬಿಯು ಮೇ 17ರಂದು ಕೆಕೆಆರ್‌ ವಿರುದ್ಧ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಗೆದ್ದೆ ಗೆಲ್ಲಬೇಕೆನ್ನುವ ಹಠ ತೊಟ್ಟಿದ್ದು, ಈ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೇಲೇರುವ ತವಕದಲ್ಲಿದೆ. ಅಲ್ಲದೆ, ಪ್ಲೇ ಆಫ್‌ ಪ್ರವೇಶದ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

Take a Poll

ಆದರೂ ಮುಂದಿನ ಉಳಿದ ಪಂದ್ಯಗಳಿಗೆ ಇಂಗ್ಲೆಂಟ್‌ ಆಟಗಾರರ ಲಭ್ಯತೆಯಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಯಾಕಂದ್ರೆ ಅವರು ತಮ್ಮ ದೇಶದಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯಗಳಿಗೆ ಹೋಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಇದೆ. ಮೇ 29ರಿಂದ ಪ್ರಾರಂಭ ಆಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಇಂಗ್ಲೆಂಡ್‌ನ ಮುಂಬರುವ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಅವರಲ್ಲಿ ಕೆಲವರು ಆರ್‌ಸಿಬಿ ತೊರೆಯುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+