RCB Devdutt Padikkal: ಆರ್‌ಸಿಬಿ ದೇವದತ್ ಪಡಿಕ್ಕಲ್ ಬೇರೆ ಟೀಂಗೆ ಮಾರಾಟ
RCB Devdutt Padikkal: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದರ ಬೆನ್ನಲ್ಲೇ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಕನ್ನಡಿದ ದೇವದತ್ ಪಡಿಕ್ಕಲ್ ಬೇರೆ ಟೀಂಗೆ ಮಾರಾಟ ಆಗಿದ್ದಾರೆ. ಹಾಗಾದ್ರೆ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿದೆ. ಅದರಲ್ಲೂ ಐಪಿಎಲ್‌ನಲ್ಲಿ ಆರ್‌ಸಿಬಿಯು ಅತೀ ಹೆಚ್ಚು ಅಭಿಮಾನಿಗಳನ್ನು ಹಾಗೂ ಬ್ರಾಂಡ್ ವ್ಯಾಲ್ಯೂನಲ್ಲಿ ನಂಬರ್ ತಂಡವಾಗಿದೆ. ಆಡಿದ 17 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಸೀಸನ್‌ನಲ್ಲಿ ಫೈನಲ್ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿ ಅಭಿಮಾನಿಗಳ ಆಸೆಯನ್ನ ಕೊನೆಗೂ ನೆರವೇರಿಸಿಬಿಟ್ಟಿತು.

ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲಲು ಪ್ರಮುಖ ಕಾರಣವೆಂದರೆ, ಬ್ಯಾಟಿಂಗ್, ಬೌಲಿಂಗ್, ಫೀಲ್ಡೀಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು. ಬಳಿಷ್ಠ ತಂಡಗಳನ್ನೆಲ್ಲ ಬಗ್ಗುಬಡಿದು ಈ ಸಾಧನೆ ಮಾಡಿದೆ. ಅದರಲ್ಲೂ ಟ್ರೋಫಿ ಗೆಲುವಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಒಬ್ಬರಾಗಿದ್ದಾರೆ. ಆರಂಭದಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಎದುರಾಳಿಗಳಿಗೆ ಬೆವರಿಳಿಸಿದ್ದರು. ಆದರೆ ಕೊನೆಗೆ, ಗಾಯದಿಂದ ಬಳಲುತ್ತಿದ್ದ ಕಾರಣ ಅವರ ಬದಲಿಗೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಆಡಿಸಲಾಯಿತು.
ಆದರೂ ಈ ಬಾರಿ ಆರ್‌ಸಿಬಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಆದರೆ, ಇದೀಗ ಅವರು ಬೇರೆ ತಂಡಕ್ಕೆ ಮಾರಾಟ ಆಗಿದ್ದಾರೆ. ಟ್ವಿಸ್ಟ್ ಏನೆಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೊರೆದಿಲ್ಲ ಎನ್ನುವುದು. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬಹುತೇಕರಲ್ಲಿ ಮೂಡಿರುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ಇಲ್ಲಿದೆ ಕಣ್ಣಾಡಿಸಿ.
ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಈ ಬಾರಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿ ಉತ್ತಮ ಪ್ರದರ್ಶನ ನೀಡಿದ್ದು, ಗಾಯದ ಕಾರಣ ಅವರು ಸೀಸನ್ನಿಂದ ಹೊರಗುಳಿಯಬೇಕಾಯಿತು. ಆದರೆ, ಇದೀಗ ಅವರು ಮಹಾರಾಜ ಟ್ರೋಫಿ ಟಿ-20 ಆಡಲು ತರಾಯಾಹಿದ್ದಾರೆ. ಯುವ ಆಟಗಾರರ ಮೇಲೆ ತಂಡಗಳು ಹಣದ ಸುರಿಮಳೆಯನ್ನೇ ಹರಿಸಿವೆ. ಅದರಲ್ಲೂ ದೇವದತ್ಗೆ ಹೆಚ್ಚಿನ ಮೊತ್ತ ನೀಡಿ ಖರೀದಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯಲ್ಲಿ ಮಹರಾಜ ಟ್ರೋಫಿಗೆ ಇದೇ ಜುಲೈ 15ರಂದು ಹರಾಜು ಪ್ರಕ್ರಿಯೆ ನಡೆದಿದ್ದು, ಈ ವೇಳೆ ದೇವದತ್ ಅವರು ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರನಾಗಿದ್ದಾರೆ. ಐಪಿಎಲ್‌ನಲ್ಲಿ ಆರ್‌ಆರ್ ಕೈಬಿಟ್ಟ ದೇವದತ್ ಪಡಿಕ್ಕಲ್ ಅವರನ್ನು ಆರ್‌ಸಿಬಿ 3.20 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದೀಗ ಈಗ ಹುಬ್ಬಳ್ಳಿ ಟೈಗರ್ಸ್ 13.20 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಈ ಮೂಲಕ ಇಡೀ ಮಹರಾಜ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟ ಆದ ಆಟಗಾರನಾಗಿದ್ದಾರೆ.
ಯಾರು ಎಷ್ಟಕ್ಕೆ ಮಾರಾಟ: ಇನ್ನು ಕನ್ನಡಿಗ ಮನೀಶ್ ಪಾಂಡೆಯನ್ನು ಮೈಸೂರು ವಾರಿಯರ್ಸ್ ತಂಡ 12.20 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಸನ್ ರೈಸರ್ಸ್ ಹೈದರಾಬಾದ್ನ ಅಭಿನವ್ ಮನೋಹರ್ನ ಹುಬ್ಬಳ್ಳಿ ಟೈಗರ್ಸ್ 12.20 ಲಕ್ಷ ರೂಪಾಯಿ ಕೊಟ್ಟು ಪಡೆದುಕೊಂಡಿದೆ. ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ನ ಮಂಗಳೂರು ಡ್ರ್ಯಾಗನ್ಸ್ 8.60 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.
ಮಹಾರಾಜ ಟ್ರೋಫಿಯಲ್ಲಿ ಪ್ರತಿ ಫ್ರಾಂಚೈಸಿ ಅವರು ಎರಡು ಸ್ಥಳೀಯ ಆಟಗಾರರನ್ನು ಇಟ್ಟುಕೊಳ್ಳಲೇಬೇಕೆಂಬ ನಿಯಮವಿದೆ. ಸ್ಥಳೀಯ ಆಟಗಾರರಿಗೆ ಅವಕಾಶ ನೀಡಬೇಕೆಂಬ ಕಾರಣದಿಂದ ಈ ನಿಯಮವನ್ನು ಜಾರಿ ಮಾಡಲಾಗಿದೆ. ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಯಾವುದೇ ಅಭಿಮಾನಿಗಳಿಗೆ ಮೈದಾನದಲ್ಲಿ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಈ ಮಹಾರಾಜ ಟ್ರೋಫಿ ಟೂರ್ನಿ ಆಗಸ್ಟ್ 11ರಿಂದ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.
ಯಾವೆಲ್ಲಾ ತಂಡಗಳು ಇರಲಿವೆ?
* ಹುಬ್ಬಳ್ಳಿ ಟೈಗರ್ಸ್
* ಗುಲ್ಬರ್ಗಾ ಮಿಸ್ಟಿಕ್ಸ್
* ಮಂಗಳೂರು ಡ್ರ್ಯಾಗನ್ಸ್
* ಮೈಸೂರು ವಾರಿಯರ್ಸ್
* ಶಿವಮೊಗ್ಗ ಲಯನ್ಸ್
* ಬೆಂಗಳೂರು ಬ್ಲಾಸ್ಟರ್ಸ್












Click it and Unblock the Notifications