ಆರ್ಸಿಬಿಗೆ ಬನ್ನಿ ಎಂದ ಫ್ಯಾನ್ಸ್: ಅವರು ಕರ್ನಾಟಕ ಆಟಗಾರರನ್ನು ತಗೊಳಲ್ಲ ಎಂದ ರಾಬಿನ್ ಉತ್ತಪ್ಪ - ವಿಡಿಯೋ ವೈರಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದು. ಒಂದು ಕಾಲದಲ್ಲಿ ಆರ್ಸಿಬಿ ತಂಡದಲ್ಲಿ ಕರ್ನಾಟಕದ ಆಟಗಾರರೇ ತುಂಬಿದ್ದರು. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ ಕೂಡ ಆರ್ ಸಿಬಿ ತಂಡಕ್ಕಾಗಿ ಆಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಆರ್ ಸಿಬಿ ಕರ್ನಾಟಕ ಆಟಗಾರರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ. ಕಳೆದ ವರ್ಷ ಕೂಡ ಕರ್ನಾಟಕ ಆಲ್‌ರೌಂಡರ್ ಮನೋಜ್ ಭಾಂಡಗೆ ಅವರನ್ನು ತೆಗೆದುಕೊಂಡಿದ್ದರು ಒಂದೂ ಪಂದ್ಯದಲ್ಲಿ ಕೂಡ ಅವಕಾಶ ನೀಡಲಿಲ್ಲ. ವೈಶಾಖ್ ವಿಜಯ್ ಕುಮಾರ್ ಮಾತ್ರ ತಂಡದಲ್ಲಿ ಅವಕಾಶ ಪಡೆದುಕೊಂಡರು.

2024ರ ಐಪಿಎಲ್ ಹರಾಜಿಗೆ ಮುನ್ನ ಶ್ರೇಯಸ್ ಗೋಪಾಲ್ ಅವರನ್ನು ಟ್ರಯಲ್ಸ್‌ಗೆ ಕರೆದಿದ್ದರೂ ಕೂಡ ಹರಾಜಿನಲ್ಲಿ ಖರೀದಿ ಮಾಡಲಿಲ್ಲ, ಹರಾಜಿನ ಸಮಯದಲ್ಲಿ ಮಾಧ್ಯಮಗಳಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ರಾಬಿನ್ ಉತ್ತಪ್ಪ ಕೂಡ ಈ ವಿಚಾರವಾಗಿ ಮಾತನಾಡಿದ್ದರು.
ಉತ್ತಪ್ಪ ಪ್ರತಿಕ್ರಿಯೆ ವೈರಲ್
ಅಭಿಮಾನಿಗಳು ಮೈದಾನದಲ್ಲಿ ರಾಬಿನ್ ಉತ್ತಪ್ಪ ಅವರಿಗೆ ಆರ್ ಸಿಬಿ ಸೇರಿಕೊಳ್ಳಿ ಎಂದಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವರು ಇಲ್ಲಿನ ಆಟಗಾರರನ್ನು ತೆಗೆದುಕೊಳ್ಳಲ್ಲ ಎಂದು ಬೇಸರದಿಂದಲೇ ಹೇಳಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಆರ್ ಸಿಬಿ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Feeling Sad for namma Karnataka Players#KCCpartIV #KCC #KCC4 #RobinUthappa @RCBTweets #RCB pic.twitter.com/N9jkE8FnPr
— nkl_boys (@nkl_boys) December 24, 2023
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕನ್ನಡ ಚಲನಚಿತ್ರ ಕಪ್‌ನಲ್ಲಿ ರಾಬಿನ್ ಉತ್ತಪ್ಪ ಚಿತ್ರನಟರ ಜೊತೆ ಕ್ರಿಕೆಟ್ ಆಡುತ್ತಿದ್ದಾರೆ. ಡಾಲಿ ಧನಂಜಯ ನಾಯಕತ್ವದ ಕದಂಬ ಲಯನ್ಸ್ ತಂಡದಲ್ಲಿ ಉತ್ತಪ್ಪ ಆಡುತ್ತಿದ್ದಾರೆ. ಆರು ತಂಡಗಳು ಕನ್ನಡ ಚಲನಚಿತ್ರ ಕಪ್‌ನಲ್ಲಿ ಆಡುತ್ತಿದ್ದು ಅಭಿಮಾನಿಗಳ ಮನರಂಜಿಸುತ್ತಿವೆ.
ಶಿವರಾಜ್‌ಕುಮಾರ್, ಉಪೇಂದ್ರ, ಸುದೀಪ್, ಗಣೇಶ್, ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ ಅವರ ನಾಯಕತ್ವದ ತಂಡಗಳು ಕೆಸಿಸಿ ಕಪ್‌ನಲ್ಲಿ ಭಾಗವಹಿಸುತ್ತವೆ.
ಅಭಿಮಾನಿಗಳ ಸಿಟ್ಟು
ರಾಬಿನ್ ಉತ್ತಪ್ಪ ಆರ್ ಸಿಬಿ ಬಗ್ಗೆ ನೀಡಿರುವ ಪ್ರತಿಕ್ರಿಯೆ ಈಗ ವೈರಲ್ ಆಗಿದ್ದು, ಈ ವಿಡಿಯೋ ಹಂಚಿಕೊಳ್ಳುತ್ತಿರುವ ಅಭಿಮಾನಿಗಳು ಆರ್ ಸಿಬಿ ಫ್ರಾಂಚೈಸಿಯನ್ನು ಟೀಕಿಸುತ್ತಿದ್ದಾರೆ. ಕರ್ನಾಟಕ ತಂಡಕ್ಕಾಗಿ ಆಡುವ ಅತ್ಯುತ್ತಮ ಆಟಗಾರರು ಇದ್ದರು ಆರ್ ಸಿಬಿ ಅವರನ್ನು ನಿರ್ಲಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಐಪಿಎಲ್ 2024ರ ಮಿನಿ ಹರಾಜಿನಲ್ಲಿ ಮನೀಷ್ ಪಾಂಡೆ ಮೂಲ ಬೆಲೆ 50 ಲಕ್ಷ ಹೊಂದಿದ್ದರೂ ಆರ್ ಸಿಬಿ ಖರೀದಿ ಮಾಡಲಿಲ್ಲ, ಕೆಕೆಆರ್ ತಂಡ ಅವರನ್ನು ಖರೀದಿ ಮಾಡಿತು, ಸ್ಪಿನ್ನರ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಕೂಡ ಮೂಲಕ ಬೆಲೆ 20 ಲಕ್ಷ ರೂಪಾಯಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾದರು.












Click it and Unblock the Notifications