ಆರ್‌ಸಿಬಿ ಈ ವರ್ಷ ಕಪ್ ಹೊಡಿತಲೇ ಪರಾಕ್: ದೇವರಹಳ್ಳಿ ಮತ್ಯಾ ಭವಿಷ್ಯ ಭಾರೀ ವೈರಲ್
RCB Prediction: ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ 2025ರ ಐಪಿಎಲ್ ಉದ್ಘಾಟನಾ ಪಂದ್ಯದ ನಡೆದಿದೆ. ಆರಂಭದ ಪಂದ್ಯದಲ್ಲೇ ಚಾಂಪಿಯನ್ ಕೆಕೆಆರ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಭವಿಷ್ಯದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ ಬರೀ 174 ರನ್‌ಗಳನ್ನು ಮಾತ್ರ ಕಲೆಹಾಕಿ, ಆರ್‌ಸಿಗೆ 175 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಸುಲಭವಾಗಿ ಗೆದ್ದು ಬೀಗಿತು. ಇದರ ಬೆನ್ನಲ್ಲೇ ಆರ್‌ಸಿಬಿ ಭವಿಷ್ಯದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಪ್ರತಿ ವರ್ಷದಂತೆ ಈ ಬಾರಿ ಕಪ್ ನಮ್ದೆ ಎನ್ನುವ ಘೋಷವಾಕ್ಯವನ್ನು ಅಭಿಮಾನಿಗಳು ಜೋರಾಗಿ ಕೂಗಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಘೋಷವಾಕ್ಯದ ವಿಡಿಯೋವನ್ನು ತಮ್ಮ ವ್ಯಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಈ ಮೂಲಕ ಆರ್‌ಸಿಬಿ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.
ಐಪಿಎಲ್‌ನಲ್ಲಿ ಎಲ್ಲಾ ತಂಡಗಳಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಎಂದರೆ ಅದು ಆರ್‌ಸಿಬಿ ಮಾತ್ರ. ಇನ್ನು ಈ ಬಾರಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಪರ ಅಭಿಮಾನಿಗಳು ಸಾಲು ಸಾಲು ವಿಡಿಯೋಗಳನ್ನು ಹಂಚಿಕೊಂಡಿದ್ದರು. ಕೆಕೆಆರ್ ವಿರುದ್ಧ ಮೊದಲ ಪಂದ್ಯದಲ್ಲೇ ಗೆದ್ದ ಬಳಿಕವಂತೂ ಯಾರ ವ್ಯಾಟ್ಸಪ್ ಸ್ಟೇಟಸ್ ನೋಡಿದರೂ ಆರ್‌ಸಿಬಿ ಪರ ಘೋಷವಾಕ್ಯಗಳೇ ಕಾಣಸಿಗುತ್ತವೆ.
ಆರ್‌ಸಿಬಿ ಭವಿಷ್ಯವಾಣಿ: ಇನ್ನು ಮೈಲಾರಲಿಂಗೇಶ್ವರ ಕಾರ್ಣಿಕಕ್ಕಾಗಿ ಇಡೀ ರಾಜ್ಯವೇ ಕಾತರದಿಂದ ಕಾಯುತ್ತಿರುತ್ತವೆ. ಈ ಬಾರಿ ತುಂಬಿದ ಕೊಡ ತುಳುಕಿತಲೇ ಪರಾಕ್ ಎಂಬ ಭವಿಷ್ಯ ವಾಣಿಯನ್ನು ಗೊರವಪ್ಪ ನುಡಿದಿದ್ದಾರೆ. ಹಾಗೆಯೇ ಇದೀಗ ಐಪಿಎಲ್ 2025ರ ಐಪಿಎಲ್ ಉದ್ಘಾಟನಾ ಪಂಂದ್ಯದಲ್ಲೇ ಆರ್‌ಸಿಬಿ ಕೆಕೆಆರ್ ವಿರುದ್ಧ ಗೆದ್ದು ಬೀಗಿದ್ದು, ಈ ಬಗ್ಗೆಯೂ ಭವಿಷ್ಯ ವಾಣಿಯೊಂದು ಹೊರಬಿದ್ದಿದೆ. ದೇವರಹಳ್ಳಿ ಮತ್ಯಾ ಎಂಬುವವರು "ಆರ್‌ಸಿಬಿ ಈ ವರ್ಷ ಕಪ್ ಹೊಡಿತಲೇ ಪರಾಕ್" ಎಂದು ಭವಿಷ್ಯ ನುಡಿದಿದ್ದರೆ.
ಈ ಭವಿಷ್ಯ ವಾಣಿಯ ವಿಡಿಯೋವನ್ನು ಪ್ರಶಾಂತ್ ಎಂಬುವವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಇದುವರೆಗೂ 24,287 ಮೆಚ್ಚುಗೆಗಳು ಬಂದಿವೆ. ವಿಚಿತ್ರ ಏನು ಅಂದ್ರೆ, ಈ ವಿಡಿಯೋದಲ್ಲಿ ದೇವರಹಳ್ಳಿ ಮತ್ಯಾ ಎಂಬುವವರು ಭವಿಷ್ಯ ನುಡಿದು ಹುಲ್ಲಿನ ಮೇಲೆ ಬಿದ್ದಿರುವುದು.
ಕೆಕೆಆರ್ ಆರಂಭದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿತು. ಆದರೆ ಬರಬರುತ್ತಾ ಆರ್‌ಸಿಬಿ ಬೌಲರ್‌ಗಳು ಕೆಕೆಆರ್ ವಿಕೆಟ್‌ಗಳನ್ನು ಕಬಳಿಸುವ ಮೂಲಕ 174 ರನ್‌ಗಳಿಗೆ ಕಟ್ಟಿಹಾಕಿದರು. ಈ ಗುರಿಯನ್ನು ಆರ್‌ಸಿಬಿ ಬ್ಯಾಟರ್‌ಗಳು ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾಗಿ ಗೆದ್ದು ಬೀಗಿದರು. ಕೆಕೆಆರ್ ನೀಡಿದ 175 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ಫಿಪಿಪ್ ಸಾಲ್ಟ್ ಅಬ್ಬರಿಸಿದರು.
ಕೆಕೆಆರ್ ಬೌಲರ್ಗಳನ್ನು ಕಾಡಿದ ಫಿಪಿಪ್ ಸಾಲ್ಟ್ ಕೇವಲ 31 ಬಾಲ್ನಲ್ಲಿ 9 ಬೌಡರಿಗಳು, 2 ಸಿಕ್ಸರ್ಗ ಮೂಲಕ 56 ರನ್‌ಗಳನ್ನು ಕಲೆಹಾಕಿದರು. ಇನ್ನು ಫಿಲ್ ಸಾಲ್ಟ್ಗೆ ಸಾಥ್ ನೀಡಿದ ವಿರಾಟ್ ಕೊಹ್ಲಿ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರರಾದರು.












Click it and Unblock the Notifications