RCB vs RR: ಆರ್‌ಸಿಬಿ ವಿರುದ್ಧ ಸಂಜು ಬಳಗ #PinkPromise ಅಸ್ತ್ರ- ಉದ್ದೇಶ ಏನು?
RCB vs RR: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈಗಾಗಲೇ ಆಡಿರುವ 4 ಪಂದ್ಯಗಳಲ್ಲಿ ಒಂದು ಮಾತ್ರ ಗೆದ್ದು, ಮೂರುರಲ್ಲಿ ಸೋಲನುಭವಿಸಿದೆ. ಇನ್ನು ಇಂದು ಜೈಪುರಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದ ವಿರುದ್ಧ ಐದನೇ ಪಂದ್ಯ ಆಡಲಿದ್ದು, ಎರಡನೇ ಗೆಲುವಿನ ನಿರೀಕ್ಷೇಯಲ್ಲಿದೆ. ಮತ್ತೊಂದೆಡೆ ಆಡಿರುವ ಮೂರು ಪಂದ್ಯಗಳಲ್ಲೂ ಗೆದ್ದು ಬೀಗಿರುವ ಸಂಜು ಪಡೆ 6 ಪಾಯಿಂಟ್ಸ್‌ಗಳ ಮೂಲಕ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಹಾಗೆಯೇ ಇಂದು ಸತತ 4ನೇ ಗೆಲುವು ಸಾಧಿಸಲು ಹೊಸ ಅವತಾರಲ್ಲಿ ಸಜ್ಜಾಗಿದೆ.
ಸತತವಾಗಿ ಆಡಿರುವ 3 ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಬಳಗ ಇಂದು ಆರ್‌ಸಿಬಿ ವಿರುದ್ಧ ಹೊಸ ಅವಾತಾರದಲ್ಲಿ ಕಣಕ್ಕಿಲಿಯಲಿದೆ. ಹಾಗೆಯೇ ಇಂದಿನ ಪಂದ್ಯದಲ್ಲೂ ಗೆದ್ದು ಮೊದಲ ಸ್ಥಾನಕ್ಕೇರುವ ತವಕದಲ್ಲಿ ರಾಜಸ್ಥಾನ್ ತಂಡ ಕಾಯುತ್ತಿದೆ. ಆದರೆ ಈಗಾಗಲೇ ಸತತವಾಗಿ ಸೋಲನುಭವಿಸಿ ಗಾಯಂಗೊಂಡಿರುವ ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಪಡೆ ಈ ಪಂದ್ಯ ಗೆಲ್ಲಲೇಬೇಕೆನ್ನುವ ಹಠದಲ್ಲಿದೆ.

ಒಂದು ವೇಳೆ ಆರ್‌ಸಿಬಿ ವಿರುದ್ಧ ಗೆದ್ದರೆ ಮಾತ್ರ ಕೆಕೆಆರ್ ತಂಡವನ್ನು ಹಿಂದಿಕ್ಕಿ ಆರ್‌ಆರ್ ತಂಡ ಮೊದಲನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ಗ್ರಹಚಾರ ಈಗಾಗಲೇ ಸೋಲಿನ ಸರಮಾಲೆಗಳಿಂದ ಗಾಯಗೊಂಡಿರುವ ಆರ್‌ಸಿಬಿ ಗೆಲುವು ಸಾಧಿಸಿದರೆ ಆರ್‌ಆರ್ ಕನಸು ಭಗ್ನವಾಗಲಿದೆ. ಇನ್ನು ತವರಿನ ಅಂಗಳದಲ್ಲಿ ಸಂಜು ಸ್ಯಾಮ್ಸನ್ ಬಳಗ ಇಂದಿನ ಆರ್‌ಸಿಬಿ ವಿರುದ್ಧ ಪಂದ್ಯವನ್ನಾಡಲು #PinkPromise! ಮೂಲಕ ಹೊಸ ಅವಾತಾರಲ್ಲಿ ಕಾಣಿಸಿಕೊಳ್ಳಲಿದೆ.
On April 6, every six will count. It’s our #PinkPromise! 💗💪
— Rajasthan Royals (@rajasthanroyals) April 5, 2024
With the support of trained women solar engineers from Rajasthan, every six hit tomorrow will help us power six homes! ☀️ pic.twitter.com/Vo7feGsbP3
2024ರ ಐಪಿಎಲ್ ಋತುವಿನಲ್ಲಿ ಆರ್‌ಆರ್ ಹೊಸ ಅಧ್ಯಾಯವನ್ನು ಸೃಷ್ಟಿಸಲು ಮುಂದಾಗಿದ್ದು, ಇಂದು ಪಿಂಕ್ ಸಿಟಿ ಅಂತಲೇ ಹೆಸರುವಾಸಿಯಾಗಿರುವ ಜೈಪುರದಲ್ಲಿ ಆರ್‌ಸಿಬಿ ವಿರುದ್ಧ ಹೊರ ಅವಾತಾರದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮೈದಾನಕ್ಕಿಳಿಯಲಿದೆ. ಇನ್ನು ಇದೀಗ ಆರ್‌ಆರ್ ತಂಡದ ಪಂದ್ಯದ ಮುಂಚಿನ ಈ ಹೊಸ ಅವಾತಾರದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಬಗ್ಗೆ ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ, ಆರ್‌ಆರ್ ತಂಡದ ಕೋಚ್ ಕುಮಾರ್ ಸಂಗಕ್ಕಾರ ಮಾತನಾಡಿದ, "ಏಪ್ರಿಲ್ 6ರಂದು ಜೈಪುರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿರುವ ಪಂದ್ಯದಲ್ಲಿ ತಮ್ಮ ತಂಡ ಪಿಂಕ್ ಜೆರ್ಸಿಗಳನ್ನು ಧರಿಸಲಿದೆ. PinkPromise ಮೂಲಕ ಮಹತ್ವದ ಸಾಮಾಜಿಕ ಪರಿವರ್ತನೆಗೆ ಚಾಲನೆ ನೀಡುತ್ತಿರುವ ರಾಜಸ್ಥಾನದ ಗ್ರಾಮೀಣ ಮಹಿಳೆಯರಿಗೆ ತಮ್ಮ ಬೆಂಬಲವನ್ನು ಹೆಚ್ಚಿಸುವ ಗುರಿಯನ್ನು ತಂಡ ಹೊಂದಿದೆ," ಎಂದು ಹೇಳಿದ್ದಾರೆ.
Delivering game day hype and a #PinkPromise to play for. 🔥💗 pic.twitter.com/t9en0a0n7n
— Rajasthan Royals (@rajasthanroyals) April 6, 2024
ಆರ್‌ಸಿಬಿ ಟೀಂ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ಗ್ಲೆನ್ ಮ್ಯಾಕ್ಸ್‌ವಲ್, ಸುಯೇಷ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ (ವಿ.ಕೀ.), ಮಹಿಪಾಲ್ ಲೊಮ್ರೊರ್, ಲಾಕಿ ಫರ್ಗ್ಯೂಸನ್, ವೈಶಾಖ್ ವಿಜಯ್‌ಕುಮಾರ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್.
ರಾಜಸ್ಥಾನ್ ಟಿಂ: ಸಂಜು ಸ್ಯಾಮ್ಸನ್ (ನಾಯಕ, ವಿ.ಕಿ), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೇಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೋಲ್ಟ್, ಯುಜುವೇಂದ್ರ ಚಹಲ್, ಆವೇಶ್ ಖಾನ್, ಸಂದೀಪ್ ಶರ್ಮಾ.












Click it and Unblock the Notifications