RCB: ಇಂದು ಆರ್‌ಸಿಬಿ-ಪಂಜಾಬ್ ಕಿಂಗ್ಸ್ ಫೈನಲ್ ಪಂದ್ಯ ರದ್ದು ಸಾಧ್ಯತೆ: ಹೀಗಾದ್ರೆ ಮುಂದಿನ ನಿರ್ಧಾರವೇನು?
IPL 2025 RCB vs PBKS: ಐಪಿಎಲ್ 2025 ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇಂದು (ಜೂನ್ 3) ರಾಯಲ್ ಚಾಲೆಂಜರ್ಸ್ ಬೆಂಗಳೂರುನ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಹೈ ವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯ ವೀಕ್ಷಣೆ ಮಾಡಲಿ ಅಭಿಮಾನಿಗಳ ಸಾಗರವೇ ಕಾತರದಿಂದ ಕಾಯುತ್ತಿದೆ. ಆದರೆ ಈ ನಡುವೆ ಆಘಾತವೊಂದು ಎದುರಾಗಿದೆ. ಅದೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ಗಮನಿಸಿ.
ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಸೀಸನ್ ಆರಂಭದಿಂದಲೂ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್‌ಗೆ ಅದ್ಧೂರಿಯಾಗಿದೆ ಪ್ರವೇಶ ಮಾಡಿದೆ. ಅಲ್ಲದೆ, ಈ ಬಾರಿ ಟ್ರೋಫಿ ಎತ್ತುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ ಎನ್ನುವತ್ತಿದ್ದಾರೆ ಅಭಿಮಾನಿಗಳು.

ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಸಹ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಆರ್‌ಸಿಬಿ ವಿರುದ್ಧ ಮೊದಲ ಕ್ವಾಲಿಫೈಯರ್‌ನಲ್ಲಿ ಸೋಲನುಭವಿಸಿ ಬಳಿಕ ಕ್ವಾಲಿಫೈಯರ್-2ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಫೈನಲ್ ಪ್ರವೇಶ ಮಾಡಿದೆ. ಈ ಮೂಲಕ ಎರಡು ತಂಡಗಳು ಕೂಡ ಬಲಿಷ್ಠವಾಗಿವೆ. ಆದರೂ, ಆರ್‌ಸಿಬಿ ಟೀಂನಲ್ಲಿ ಈ ಬಾರಿ ಏನೋ ತುಂಬಾ ಬದಲಾವಣೆ ಆಗಿದ್ದು, ಕಪ್ ಹೊಡೆಯುವುದು ನಮ್ಮದೆ ಟೀ.. ಈ ಸಲ ಕಪ್ ನಮ್ದೆ ಎನ್ನುವ ಘೋಷವಾಕ್ಯವನ್ನು ನಿಜ ಮಾಡುವ ಎಲ್ಲಾ ಲಕ್ಷಣಗಳು ಎದ್ದುಕಾಣುತ್ತಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 17 ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದ 'ಈ ಸಲ ಕಪ್ ನಮ್ದೆ' ಎನ್ನುವ ಘೋಷವಾಕ್ಯ ಇಂದು (ಜೂನ್ 3) ಪಕ್ಕಾ ನಿಜವಾಗಲಿದ ಎಂದು ಅಭಿಮಾನಿಗಳು ಹೇಳುವ ಮಾತಾಗಿದೆ. ಅಷ್ಟರ ಮಟ್ಟಿದೆ ಬೆಂಗಳೂರು ತಂಡ ಲಾಯಲ್ಟಿ ಫ್ಯಾನ್ಸ್ ಅನ್ನು ಹೊಂದಿದೆ.
ಇಂದಿನ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯ ಅಹಮದಬಾದ್ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಆರಂಭವಾಗಲಿದೆ. ಈಗಾಗಲೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸೆಲೆಬ್ರೆಷನ್‌ಗೆ ದೊಡ್ಡ ಮಟ್ಟದಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಈ ನಡುವೆಯೇ ಇಂದಿನ ಫೈನಲ್ ಮ್ಯಾಚ್‌ಗೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
ಮಳೆಯಿಂದ ರದ್ದಾದ್ರೆ ಮುಂದಿನ ನಿರ್ಧಾರವೇನು?: ಹವಾಮಾನ ಇಲಾಕೆ ಮಾಹಿತಿ ಪ್ರಕಾರ, ಉತ್ತರ ಭಾರತದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಈಗಾಗಲೇ ಕೆಲವೆಡೆ ಪ್ರವಾಹದ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಹಾಗೆಯೇ ಗುಜರಾತ್‌ನಲ್ಲೂ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಅಂತಲೂ ತಿಳಿಸಿದೆ. ಒಂದು ವೇಳೆ ಇಲ್ಲಿನ ಅಹಮದಬಾದ್‌ನಲ್ಲಿ ಇಂದು ಭಾರೀ ಮಳೆಯಾದ್ರೆ ಪಂದ್ಯವನ್ನು ಅರ್ಧಕ್ಕೆ ರದ್ದು ಮಾಡಿ ಮಾರನೇ ದಿನಕ್ಕೆ ಮುಂದೂಡಿಕೆ ಮಾಡುವ ಸಾಧ್ಯತೆಯಿರುತ್ತದೆ. ಇಂದು ವೇಳೆ ಸಾಧಾರಣ ಮಳೆ ಬಂದು ನಿಂತ್ರೆ ಪಂದ್ಯವನ್ನು ಆಡಿಸಲಾಗುತ್ತದೆ.
ಇಂದು ಅಹಮದಾಬಾದ್ ನಗರದ ಕೆಲವೆಡೆ ಮಳೆ ಬೀಳುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 38 ಡಿಗ್ರಿ ಮತ್ತು ಕನಿಷ್ಠ ತಾಪಮಾನ 27 ಡಿಗ್ರಿ ದಾಖಲಾಗುವ ಸಾಧ್ಯತೆಯಿ ಅಂತಲೂ ತಿಳಿಸಿದೆ. ಮಳೆ ಬಂದರೂ ಕೂಡ ಈ ಪಂದ್ಯಕ್ಕೆ 120 ನಿಮಿಷಗಳ ಹೆಚ್ಚುವರಿ ಸಮಯ ಇದೆ. ಅಲ್ಲದೆ, ಈ ಪಂದ್ಯ ಜೂನ್ 3 ರಂದು ರದ್ದಾಗಿ ಅರ್ಧಕ್ಕೆ ನಿಲ್ಲಿಸಿದರೆ, ಜೂನ್ 4ರಂದು ಮೀಸಲು ದಿನ ಆಗಿರುತ್ತದೆ. ಆದ್ದರಿಂದ ಈ ಪಂದ್ಯದ ಫಲಿತಾಂಶ ಸ್ಪಷ್ಟವಾಗಿ ಗೊತ್ತಾಗಲಿದೆ.
ಈ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲ ಆಗಲಿದೆ. ಈ ಮೈದಾನದಲ್ಲಿ ಒಟ್ಟು 42 ಐಪಿಎಲ್ ಪಂದ್ಯಗಳನ್ನು ಆಡಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 20 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ತಂಡವು 22 ಪಂದ್ಯಗಳನ್ನ ಗೆದ್ದಿದೆ. ಇದು ಈ ಪಿಚ್‌ನಲ್ಲಿ ಗುರಿ ಬೆನ್ನತ್ತಲು ತುಸು ಸುಲಭ ಆಗಿದೆ. ಆದ್ದರಿಂದ ಈ ಆವೃತ್ತಿಯಲ್ಲಿ ಮೊದಲು ಬ್ಯಾಟ್ ಮಾಡಿದ 8 ತಂಡಗಳಲ್ಲಿ 6 ತಂಡಗಳು ಗೆದ್ದಿರಬಹುದು. ಒಟ್ಟಿನಲ್ಲಿ ಮಳೆ ಬಾರದೇ ಇಂದೇ ಫೈನಲ್ ಪಂದ್ಯ ನಡೆಯಬೇಕೆನ್ನುವುದು ಅಭಿಮಾನಿಗಳು ದೇವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications