RCB Vs MI: ವಿಲ್‌ಜ್ಯಾಕ್ಸ್‌ಗೆ ಸಿಕ್ತು ಅವಕಾಶ; ನಾಲ್ಕು ಬದಲಾವಣೆ ಮಾಡಿದ ಆರ್ಸಿಬಿ
ವಿಲ್ ಜ್ಯಾಕ್ಸ್ ಅವರಿಗೆ ಆರ್ಸಿಬಿ ತಂಡದಲ್ಲಿ ಅವಕಾಶ ಕೊಡಬೇಕು ಎನ್ನುವ ಅಭಿಮಾನಿಗ ಬೇಡಿಕೆ ಕೊನೆಗೂ ಈಡೇರಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024ರ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಕೂಡ ಒಂದು ಬದಲಾವಣೆ ಮಾಡಲಾಗಿದೆ. ಪಿಯೂಷ್ ಚಾವ್ಲಾ ಬದಲಾಗಿ ಕನ್ನಡಿಗ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ನೀಡಲಾಗಿದೆ.

ಐದು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಬ್ಯಾಟರ್ ವಿಲ್ ಜ್ಯಾಕ್ಸ್ ಅವರಿಗೆ ಅವಕಾಶ ಸಿಕ್ಕಿದೆ. ಸೋಲಿನ ಸರಣಿಯಿಂದ ಹೊರಬರಲು ತಂಡದಲ್ಲಿ ಬದಲಾವಣೆ ಮಾಡಬೇಕು ಎಂದು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಆಗ್ರಹಿಸಿದ್ದರು.
ವಿಲ್ ಜ್ಯಾಕ್ಸ್ ಮಾತ್ರವಲ್ಲ ಉತ್ತಮ ಪ್ರದರ್ಶನ ನೀಡಿಯೂ ತಂಡದಿಂದ ಹೊರಗುಳಿದಿದ್ದ ಮಹಿಪಾಲ್ ಲೊಮ್ರೋರ್ ಮತ್ತು ವಿಜಯ್ ಕುಮಾರ್ ವೈಶಾಖ್ ಅವರಿಗೂ ಅವಕಾಶ ಸಿಕ್ಕಿದೆ. ಆಕಾಶ್ ದೀಪ್ ಕೂಡ ಅವಕಾಶ ಪಡೆದುಕೊಂಡಿದ್ದಾರೆ. ಯಶ್ ದಯಾಳ್, ಮಯಾಂಕ್ ದಾಗರ್, ಸೌರವ್ ಚೌಹಾಣ್ ಮತ್ತು ಕ್ಯಾಮೆರಾನ್ ಗ್ರೀನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಪಿಚ್ ಹೇಗಿದೆ?
ವಾಂಖೆಡೆ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 234 ರನ್ ಕಲೆಹಾಕಿತ್ತು. ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪಡೆ ಇದ್ದು, ಇಂದು ಕೂಡ ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ.
ಉಭಯ ತಂಡಗಳ ಆಡುವ ಬಳಗ
ಆರ್ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ರೀಸ್ ಟೋಪ್ಲಿ, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮೊಹಮ್ಮದ್ ನಬಿ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೋಟ್ಜಿ, ಆಕಾಶ್ ಮಧ್ವಾಲ್.












Click it and Unblock the Notifications