ಆರ್‌ಸಿಬಿ-ಕೆಕೆಆರ್ ಪಂದ್ಯ ರದ್ದಾಗುವ ಸಾಧ್ಯತೆ
IPL 2025 RCB: ಅರ್ಧಕ್ಕೆ ರದ್ದಾಗಿದ್ದ ಐಪಿಎಲ್ 2025 ಮತ್ತೆ ಮೇ 17ರಿಂದ ಮುಂದುವರೆಯಲಿದೆ. ಹೊಸ ವೇಳಾಪಟ್ಟಿ ಪ್ರಕಾರ, ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಅಂದು ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಹಾಗಾದ್ರೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 3ರಲ್ಲಿ ಸೋತು ಇನ್ನುಳಿದ 8ರಲ್ಲಿ ಗೆಲವು ಕಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೂ ಪ್ಲೇ ಆಫ್ ಖಚಿತಪಡಿಸಿಕೊಳ್ಳಬೇಕೆಂದರೆ ಉಳಿದ ಮೂರರಲ್ಲಿ ಒಂದು ಪಂದ್ಯವನ್ನು ಉತ್ತಮ ರನ್ ರೇಟ್ ಮೂಲಕ ಗೆಲ್ಲಲ್ಲೇಬೇಕಿದೆ. ಇಲ್ಲದಿದ್ದರೇ ಕಷ್ಟ ಆಗಲಿದೆ. ಯಾಕಂದ್ರೆ ಕೆಳಗಿರುವ ತಂಡಗಳಿಗೂ ಇನ್ನೂ ಎರಡ್ಮೂರು ಪಂದ್ಯಗಳಿವೆ.

ಮೇ 17ರಂದು ಆರ್‌ಸಿಬಿಯು ಕೆಕೆಆರ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಸೆಣಸಲಿದ್ದು, ಈ ವೇಳೆ ಪಂದ್ಯಕ್ಕೆ ಮಳೆರಾಯನ ಅಡ್ಡಿಯಾಗುವ ಆತಂಕ ಎದುರಾಗಿದೆ. ಅಂಡಮಾನ್ ಹಾಗೂ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಭಾರೀ ಮಳೆ ಹಿನ್ನೆಲೆ ಈಗಾಗಲೇ ಬೆಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ಮಳೆ ಆರಂಭವಾಗುತ್ತಿದೆ. ಹಾಗೆಯೇ ಮುಂದಿನ ಹಲವು ದಿನಗಳ ಕಾಲ ನಗರದಲ್ಲಿ ಇದೇ ವಾತಾವರಣ ಇರಲಿದೆ ಎನ್ನುವ ಮುನ್ಸೂಚನೆ ಇದೆ. ಅದರಲ್ಲೂ ಒಂದು ವೇಳೆ ಮೇ 17ರಂದು ಧಾರಕಾರ ಮಳೆ ಸುರಿದರೆ ಆರ್‌ಸಿಬಿ ಹಾಗೂ ಕೊಲ್ಕತ್ತಾದ ನಡುವಿನ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಸಾಧಾರಣ ಮಳೆ ಬಂದು ನಿಂತರೆ, ಓವರ್‌ಗಳನ್ನು ಕಡಿತ ಮಾಡಲಾಗುತ್ತದೆ. ಹೀಗಾದ್ರೆ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲ ಆದಂತಾಗಲಿದೆ.
ಈಗಾಗಲೇ ಏಪ್ರಿಲ್ 18ರಂದು ಬೆಂಗಳೂರಿನ ಭಾರೀ ಮಳೆ ಸುರಿದ ಹಿನ್ನೆಲೆ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿಗೆ ತುಂಬಾ ಅಡೆತಡೆ ಆಯಿತು. ಆದರೆ, ನಂತರ ಪಿಚ್ ತೆವಾಂಶವೆಲ್ಲಾ ಮಾಯವಾದ ಕಾರಣ ಪಂಜಾಬ್ ಬ್ಯಾಟಿಂಗ್ ತುಂಬಾ ಅನುಕೂಲ ಆಗಿದ್ದು, ಆರ್‌ಸಿಬಿ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಲು ಅನುಕೂಲ ಆಯಿತು.
ಸಾಮಾನ್ಯವಾಗಿ ಈ ಕ್ರೀಡಾಂಗಣದಲ್ಲಿ ಚೇಸ್ ಮಾಡಿರುವ ತಂಡಗಳು ಗೆದ್ದಿರುವ ಉದಾಹರಣೆಗಳಿಗೆ. ಆದ್ದರಿಂದ ಟಾಸ್ ಗೆದ್ದ ತಂಡಗಳು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತವೆ. ಹಾಗೆ ನೋಡಿದ್ರೆ, ಈ ಬಾರಿ ಆರ್‌ಸಿಬಿ ಇದೇ ಹೋಂ ಗ್ರೌಂಡ್‌ನಲ್ಲಿ ಇದುವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲೂ ಒಂದು ಬಾರಿಯೂ ಟಾಸ್ ಗೆದ್ದಿಲ್ಲ. ಮತ್ತೊಂದೆಡೆ ಮೂರು ಪಂದ್ಯಗಳಲ್ಲಿ ಸೋತು ಒಂದರಲ್ಲಿ ಗೆದ್ದಿದೆ.
ಅದರಲ್ಲೂ ಸಾಧಾರಣ ಮಳೆ ಬಂದು ನಿಂತರೆ, ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವವರಿಗೆ ತುಂಬಾ ಕಷ್ಟಕರವಾಗಲಿದೆ. ನಂತರ ಚೇಸ್ ಮಾಡುವವರಿಗೆ ಅನುಕೂಲವಾಗಲಿದೆ. ಮೇ 17ರಂದು ಏನಾದರೂ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಭಾರೀ ಮಳೆ ಬಂದರೆ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆ ಬಾರದಿದ್ದರೆ, ಪಂದ್ಯ ರದ್ದಾಗುವ ಮಾತೇ ಇರುವುದಿಲ್ಲ.
ಇದೀಗ ಆರ್‌ಸಿಬಿ ಒಂದು ಮಟ್ಟಿಗೆ ಪ್ಲೇ ಆಫ್ ಹಾದಿ ಸುಗಮಗೊಳಿಸಿಕೊಂಡಿದೆ. ಬಹುತೇಕ ಖಚಿತ ಆಗಬೇಕೆಂದರೆ, ಇನ್ನೊಂದು ಪಂದ್ಯ ಗೆಲ್ಲಲೇಬೇಕಿದೆ. ಆದ್ದರಿಂದ ತವರು ಮೈದಾನದಲ್ಲಿ ಆರ್‌ಸಿಬಿಯು ಕೆಕೆಆರ್ ವಿರುದ್ಧ ಆರ್‌ಸಿಬಿ ಗೆಲ್ಲಲ್ಲೇಬೇಕೆನ್ನುವ ಹಠ ತೊಟ್ಟಿದೆ. ಒಂದು ವೇಳೆ ಕೆಕೆಆರ್ ವಿರುದ್ಧ ಶನಿವಾರ ಆರ್‌ಸಿಬಿ ಗೆದ್ದರೆ ಬಹುತೇಕ ಪ್ಲೇ ಆಫ್ ಪ್ರವೇಶಿಸಲಿದೆ.












Click it and Unblock the Notifications