Get Updates
Get notified of breaking news, exclusive insights, and must-see stories!

RCB Vs CSK: ಬೆಂಗಳೂರಿನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣಗಳು

RCB Vs CSK: ಐಪಿಎಲ್ 2025ರ 52 ಪಂದ್ಯದಲ್ಲಿ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಮತ್ತೊಮ್ಮೆ ಗೆದ್ದು ಬೀಗಿದೆ. ಮತ್ತೊಂದೆಡೆ ಟಾಸ್‌ ಗೆದ್ದು ಗೆಲುವಿನ ಭರವಸೆಯಲಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹೀನಾಯ ಸೋಲಾಗಿದೆ. ಹಾಗಾದ್ರೆ, ಆರ್‌ಸಿಬಿ ಗೆಲುವಿಗೆ ಪ್ರಮಖ ಕಾರಣಗಳು ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಶನಿವಾರ ಸಿಎಸ್‌ಕೆ ವಿರುದ್ಧ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. ಈ ಮೂಲಕ ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, 3ರಲ್ಲಿ ಸೋಲು ಕಂಡು ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆದಿದೆ. ಅಲ್ಲದೆ, ಪ್ಲೇ ಆಫ್‌ ಕನಸನ್ನು ಜೀವಂತವಾಗಿಸಿದೆ.

RCB Vs CSK Reasons for RCB Win Against Chennai Super Kings in Bengaluru

ಬೆಂಗಳೂರಿನ ಚಿನ್ನಸ್ವಮಿ ಕ್ರೀಡಾಂಗಣದಲ್ಲಿ ಚೇಸ್‌ ಮಾಡುವ ತಂಡ ಹೆಚ್ಚು ಗೆದ್ದಿರುವ ಉದಾಹರಣೆಗಳಿದ್ದವು. ಆದರೆ, ಆರ್‌ಸಿಬಿ ಇದನ್ನೆಲ್ಲ ಮೆಟ್ಟಿ ನಿಂತು ಗೆಲುವು ಸಾಧಿಸುತ್ತಾ ಬಂದಿದೆ. ಹಾಗೆಯೇ ಶನಿವಾರದ ಪಂದ್ಯದಲ್ಲಿ ಟಾಸ್‌ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಿಗೆ 5 ವಿಕೆಟ್ ಕಳೆದುಕೊಂಡು 213 ರನ್‌ಗಳನ್ನು ಕಲೆಹಾಕುವ ಮೂಲಕ ಸಿಎಸ್‌ಕೆಗೆ 214 ರನ್‌ಗಳ ಗುರಿ ನೀಡಿತು.

ಆರ್‌ಸಿಬಿ ಪರ ಬ್ಯಾಟ್‌ ಮಾಡಿದ ಜಾಕೊಬ್ ಬೆಥೆಲ್‌ 55, ವಿರಾಟ್‌ ಕೊಹ್ಲಿ 62, ದೇವದತ್ತ ಪಡಿಕ್ಕಲ್‌ 17, ರಜತ್ ಪಾಟೀದಾರ್ 11, ಜಿತೇಶ್‌ ಶರ್ಮಾ 7, ಟೀಮ್‌ ಡೆವಿಡ್‌ 2, ರೊಮಾರಿಯೋ ಶೆಫರ್ಡ್ 53 ರನ್‌ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 210ರ ಗಡಿ ದಾಡಿಸಿದರು.

ಈ ಗುರಿ ಬೆನ್ನತ್ತಿದ್ದ ಸಿಎಸ್‌ಕೆ ತಂಡವು ಆರಂಭದಿಂದಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಮಾಡಿತು. ಆದರೆ, ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು 211 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸಿಎಸ್ಕೆ ಪರ ಆಯುಷ್ ಮ್ಹಾತ್ರೆ ಮತ್ತು ರವೀಂದ್ರ ಜಡೇಜಾ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ್‌ ಮಾಡಿದ್ದು, ಇದು ಕೊನೆಗೂ ವ್ಯರ್ಥವಾದಂತಾಯಿತು.
ಮ್ಹಾತ್ರೆ 94 ರನ್‌ ಕಲೆಹಾಕಿ ಪೆವಿಯನ್‌ ತೆರಳಿದರೆ, ರವೀಂದ್ರ ಜಡೇಜಾ 77 ರನ್ ಗಳಿಸಿದರು.

ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣಗಳು

* ಆರ್‌ಸಿಬಿ ಪರ ವಿರಾಟ್ ಕೊಹ್ಲಿ , ಜಾಕೋಬ್ ಬೆಥೆಲ್ ಹಾಗೂ ರೊಮಾರಿಯೋ ಶೆಫರ್ಡ್ ಅಬ್ಬರದ ಬ್ಯಾಟಿಂಗ್‌ ಮಾಡುವ ಮೂಲಕ ಅರ್ಧ ಶತಕಗಳನ್ನು ಸಿಡಿಸಿದರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

* ರೊಮಾರಿಯೊ ಶೆಫರ್ಡ್ 19 ಮತ್ತು 20ನೇ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು. ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು 213ರ ವರೆಗೂ ಕೊಂಡೊಯ್ದರು.

* ಆರ್‌ಸಿಬಿ ಪರ ಲುಂಗಿ ಎನ್‌ಗಿಡಿ 3 ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ಮತ್ತು ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

* ಅದರಲ್ಲೂ ಕೊನೆ ಓವರ್‌ನಲ್ಲಿ ಯಶ್ ದಯಾಳ್‌ ಅದ್ಭುತವಾಗಿ ಬೌಲಿಂಗ್‌ ಪ್ರದರ್ಶನ ಮಾಡಿದರು.

ಆರ್‌ಸಿಬಿ ತಪ್ಪು ಮಾಡಿದ್ದೆಲ್ಲಿ?: ಆರ್ಸಿಬಿಯು 16ನೇ ಓವರ್‌ನಲ್ಲಿ ಚೆನ್ನೈನ ಇಬ್ಬರೂ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ತಲಾ ಒಂದು ಕ್ಯಾಚ್‌ ಕೈಚೆಲ್ಲಿದರು. ಮೊದಲು ನಾಯಕ ರಜತ್ ಪತಿದಾರ್ ಆಯುಷ್ ಮ್ಹಾತ್ರೆ ಅವರ ಕ್ಯಾಚ್ ಅನ್ನು ಕೈಬಿಟ್ಟರೆ, ನಂತರ ಕೊನೆಯ ಎಸೆತದಲ್ಲಿ ಜಡೇಜಾ ಅವರ ಕ್ಯಾಚ್ ಅನ್ನು ಲುಂಗಿ ಎನ್‌ಗಿಡಿ ಕೈಬಿಟ್ಟರು. ಇದು ಸಿಎಸ್‌ಕೆ ಇಷ್ಟು ಹಂತದವರೆಗೂ ಬರಲು ಕಾರಣವಾಯಿತು.

ಅಲ್ಲದೆ, ಇನ್ನೂ ಬ್ಯಾಟಿಂಗ್‌ ವಿಭಾಗಕ್ಕೆ ಬಂದರೆ ದೇವದತ್ತ್‌ ಪಡಿಕ್ಕಲ್‌, ನಾಯಕ ರಜತ್ ಪಾಟಿದಾರ್ ಹೇಳಿಕೊಳ್ಳುವಷ್ಟು ಉತ್ತಮವಾಗಿ ಬ್ಯಾಟಿಂಗ್‌ ಪ್ರದರ್ಶನ ತೋರದೇ ಬೇಗನೇ ಔಟ್‌ ಆಗಿ ಪೆವಿಲಿಯನ್‌ನತ್ತ ನಡೆದರು. ಇದು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿಬಿಟ್ಟಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಳ್.

ಚೆನ್ನೈ ಸೂಪರ್ ಕಿಂಗ್ಸ್: ಶೇಖ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ದೀಪಕ್ ಹೂಡಾ, ಎಂಎಸ್ ಧೋನಿ (ನಾಯಕ, ವಿ.ಕೀ.), ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್, ಮತಿಶಾ ಪತಿರಾನ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+