RCB vs CSK: ಮಳೆ ರಾಯ ಇವತ್ತೇ ಎಷ್ಟಾದ್ರೂ ಹೊಡೆದು ಬಿಡು.. ನಾಳೆಗೆ ಮಾತ್ರ..
ಐಪಿಎಲ್ 2024ರ ರೀಯಲ್ ಹೈವೋಲ್ಟೇಜ್ ಪಂದ್ಯ ಶನಿವಾರ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್ ಲೆಕ್ಕಾಚಾರದಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಹೋಗುವ ಆಸೆಯನ್ನು ಆರ್‌ಸಿಬಿ ಕಾಣುತ್ತಿದೆ.
ಆರ್‌ಸಿಬಿ ಹಾಗೂ ಸಿಎಸ್‌ಕೆ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಶನಿವಾರ ಪಂದ್ಯ ನಡೆಯುವ ಸಮಯದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬಂದು ಪಂದ್ಯ ಕ್ಯಾನ್ಸಲ್ ಆದಲ್ಲಿ ಆರ್‌ಸಿಬಿ ಪ್ಲೇ ಆಫ್ ಕನಸು ನುಚ್ಚುನೂರಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಪೂರ್ಣ 20 ಓವರ್‌ಗಳ ಪಂದ್ಯ ನಡೆಯಬೇಕು ಎಂಬುದನ್ನೇ ಅಭಿಮಾನಿಗಳು ಆಶಯಿಸುತ್ತಿದ್ದಾರೆ.

ಅಭಿಮಾನಿಗಳು ಶನಿವಾರ ವರುಣನ ಕಾಟ ನೀಡದಿದ್ದರೆ ಸಾಕು. ಆರ್‌ಸಿಬಿ ಎದುರಾಳಿಗೆ ಶನಿ ಕಾಟ ನೀಡಲು ಸಿದ್ಧವಾಗಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾಳೆಯ ಪಂದ್ಯ ನೋಡಲು ಅಭಿಮಾನಿಗಳು ಸಹ ಫುಲ್ ರೆಡಿ ಆಗಿದ್ದಾರೆ.
ಮಳೆ ಬಂದು ನಿಂತರೂ ಪಂದ್ಯ ಸಾಧ್ಯತೆ
ಶನಿವಾರ ಮಳೆ ಬಂದರೂ, ಪಂದ್ಯದ ಸಮಯಕ್ಕೆ ಒಂದು ಪಕ್ಷ ಬ್ರೇಕ್ ನೀಡಿದ್ದೇ ಆದಲ್ಲಿ, ಬೆಂಗಳೂರು ತಂಡಕ್ಕೆ ಸಬ್ ಏರ್ ಸಿಸ್ಟಮ್ ಕೈ ಹಿಡಿಯಬಹುದು. ಎಂ ಚಿನ್ನಸ್ವಾಮಿ ಅಂಗಳದಲ್ಲಿ ಸನ್ ಏರ್ ಸಿಸ್ಟಮ್ ಅಳವಡಿಸಲಾಗಿದೆ. ಮಳೆ ಬಂದು ನಿಂತರೆ, ಕೇವಲ 15 ರಿಂದ 20 ನಿಮಿಷಗಳ ಅವಧಿಯಲ್ಲಿ ಸ್ಟೇಡಿಯಂ ಆಡಲು ಸಿದ್ಧವಾಗುತ್ತದೆ.
ಏನಿದು ಸಬ್ ಏರ್ ಸಿಸ್ಟಮ್
ಮಳೆ ಬಂದು ನಿಂತರೂ ಪಂದ್ಯಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಕೆಳಭಾಗದಲ್ಲಿ ಕೊಳವೆಗಳನ್ನು ಅಳವಡಿಸಲಾಗಿದ್ದು, ಮಳೆ ನೀರನ್ನು ಹೀರಿಕೊಂಡು ಮೈದಾನವನ್ನು ಆದಷ್ಟು ಬೇಗ ಆಡಲು ಸಿದ್ಧವಾಗುವಂತೆ ಮಾಡುತ್ತದೆ.

ಟಿಕೆಟ್ ಸೋಲ್ಡ್ ಔಟ್
ಆರ್‌ಸಿಬಿ ವಿರುದ್ಧ ಸಿಎಸ್‌ಕೆ ನಡುವಿನ ಪಂದ್ಯ ಎಂದರೆ ಅದು ಯಾವುದೇ ಪರಿಸ್ಥಿತಿ ಇದ್ದರೂ ಹೈವೋಲ್ಟೇಜ್ ಇದ್ದೇ ಇರುತ್ತದೆ. ಈ ಪಂದ್ಯಗಳ ಟಿಕೆಟ್ ಈ ಮೊದಲೇ ಸೋಲ್ಡ್ ಆಗಿವೆ. ಈಗ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದ್ದರಿಂದ ಅಭಿಮಾನಿಗಳು ಶತಾಯ ಗತಾಯ ಪಂದ್ಯವನ್ನು ಎಷ್ಟೇ ದುಡ್ಡು ಖರ್ಚಾದ್ರೂ ಚಿಂತೆ ಇಲ್ಲ, ಮೈದಾನದಲ್ಲಿ ನೋಡಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬೀಳುತ್ತಿದೆ. ಇದರಿಂದ ಜನರು ಸಂತೋಷವಾಗಿದ್ದಾರೆ. ಆದರೆ ಶನಿವಾರ ನಡೆಯುವ ಪಂದ್ಯಕ್ಕೆ ಮಳೆರಾಯ ಕಾಟ ನೀಡಬೇಡ ಎಂದು ಬೇಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಮಳೆ ಬಂದು ಓವರ್‌ಗಳಿಗೆ ಕತ್ತರಿ ಬಿದ್ದರೂ ತೊಂದರೆ ಇಲ್ಲ. ಪಂದ್ಯ ನಡೆದರೆ ಸಾಕಪ್ಪ ಎಂದು ಆಶಿಸುತ್ತಿದ್ದಾರೆ.

5 ಓವರ್ ಪಂದ್ಯ ನಡೆದರೆ?
ಒಂದು ವೇಳೆ ಮಳೆ ತುಂಬಾ ಕಾಟ ನೀಡಿದ್ದರಿಂದ, ಪಂದ್ಯವನ್ನು ಐದು ಓವರ್‌ಗಳಿಗೆ ಇಳಿಸಿದರೆ, ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸುವುದು ಕೊಂಚ ಕಷ್ಟ. 20 ಓವರ್‌ಗಳ ಲೆಕ್ಕಾಚಾರವೇ 5 ಓವರ್‌ಗಳ ಪಂದ್ಯಗಳು ನಡೆದರು ಅಪ್ಲೈ ಆಗುತ್ತದೆ. ಆದರೆ ಇಷ್ಟೇ ಗೆಲುವಿನ ಅಂತರ 18 ಅಷ್ಟೇ ಇರುವುದಿಲ್ಲ. ಗೆಲುವಿನ ಅಂತರ ಹೆಚ್ಚಾಗುತ್ತದೆ. ಚೇಸ್ ಮಾಡುವಾಗ ಓವರ್‌ಗಳ ಸಂಖ್ಯೆ ಕಡಿಮೆ ಆಗುತ್ತದೆ.












Click it and Unblock the Notifications