RCB: ಆರ್‌ಸಿಬಿ ಮ್ಯಾಚ್ ಮೊದಲು ಮದುವೆ ಆಮೇಲೆ! ಕಲ್ಯಾಣ ಮಂಟಪದಲ್ಲೂ ಕಾವೇರಿದ ಐಪಿಎಲ್ ಜ್ವರ!

ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್‌ ಅಂದರೆ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಮಾತ್ರ. ಅದರಲ್ಲೂ ಆರ್‌ಸಿಬಿ ಇದುವರೆಗೂ ಒಂದು ಕಪ್‌ ಗೆಲ್ಲದಿದ್ದರೂ ಕೂಡ ವಿಶ್ವಾದಾದ್ಯಂತ ಎಲ್ಲಾ ಟೀಂಗಳಿಗಿಂತಲೂ ಅತೀ ಹೆಚ್ಚು ಅಭಿಮಾನಿ ಬಳಗವನ್ನೇ ಹೊಂದಿದೆ. ಇನ್ನು ಯಾವುದೇ ಟೀಂಗಳ ಮೇಲೆ ಆರ್‌ಸಿಬಿ ಬಿದ್ದರೆ, ಆ ಪಂದ್ಯವನ್ನು ಏನೇ ಮುಖ್ಯ ಕೆಲಸಗಳು ಇರಲಿ ಮಿಸ್‌ ಮಾಡಿಕೊಳ್ಳುವುದಿಲ್ಲ. ಹಾಗೆಯೇ ನಿನ್ನೆ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯವನ್ನು ಮದುವೆ ಮಂಟಪವೊಂದಲ್ಲಿ ಫೋಟೋ ಶೂಟ್‌ ಬಿಟ್ಟು ವೀಕ್ಷಣೆ ಮಾಡಿದ್ದಾರೆ.

ನಿನ್ನೆ (ಮೇ 18) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಆರ್‌ಸಿಬಿ ಪಂದ್ಯವನ್ನು ಎಲ್ಲಾ ಮನೆಗಳಲ್ಲೂ ಟಿವಿಗಳಲ್ಲಿ ವೀಕ್ಷಣೆ ಮಾಡಿ ಎಂಜಾಯ್‌ ಮಾಡಿರುವ ವಿಡಿಯೋಗಳು ಇದೀಗ ಎಲ್ಲೆಡೆ ಹರಿದಾಡುತ್ತಿವೆ. ಅದೇ ರೀತಿ, ಮದುವೆ ಮಂಟಪವೊಂದರಲ್ಲಿ ಟಿವಿ ಹಾಕಿಸಿಕೊಂಡು ಆರ್‌ಸಿಬಿ ಮ್ಯಾಚ್‌ ವೀಕ್ಷಣೆ ಮಾಡಿ, ಆಮೇಲೆ ಮದುವೆಯ ಫೋಟೋಶೂಟ್ ಮಾಡಿಸಿಕೊಂಡ ಘಟನೆ ನಡೆದಿದ್ದು, ಈ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

RCB vs CSK A groom watched match with friends at wedding hall video viral

ಮಂಟಪದಲ್ಲೇ ಟಿವಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್ ವೀಕ್ಷಣೆ ಮಾಡಿ ಚಿಯರ್ಸ್‌ ಮಾಡಿದ ಘಟನೆ ನಡೆದಿದೆ. ನೀವು ಇಲ್ಲೇ ತಿಳಿದುಕೊಳ್ಳಬೇಕು ನಮ್ಮ ರಾಯಲ್‌ ಟೀಂಗೆ ಅಭಿಮಾನಿಗಳ ಬಳಗ ಹೀಗೆಲ್ಲಾ ಇದ್ದಾರಾ ಅಂತಾ. ಅಷ್ಟರ ಮಟ್ಟಿಗೆ ಈ ಟೀಂ ಜನರ ಹೃದಯದ ಒಳಗೆ ಅಚ್ಚಳಿಯದಂತೆ ಕುಳಿತಿದೆ. ‌

ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಟೀಂ ಆರ್‌ಸಿಬಿ ಆಗಿದೆ. ಬರೀ ಬೆಂಗಳೂರು, ಕರ್ನಾಟಕ, ಭಾರತ ಅಲ್ಲದೇ, ವಿದೇಶಗಳಲ್ಲೂ ಕೂಡ ಅಭಿಮಾನಿಗಳನ್ನು ಹೊಂದಿರುವ ಟೀಂ ಇದಾಗಿದೆ. ಕಪ್‌ ಗೆಲ್ಲದಿದ್ದರೂ, ಅಷ್ಟರ ಮಟ್ಟಿಗೆ ಅಭಿಮಾನಿಗಳನ್ನು ಹೊಂದಿದೆ. ಅದರಲ್ಲೂ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮ್ಯಾಚ್‌ ಇದ್ದರೆ ಸಾಕು ಮುಗಿಯುವವರೆಗೂ ಮನೆ, ಕಂಪನಿ, ರೆಸ್ಟೋರೆಂಟ್‌ಗಳಲ್ಲಿ ಟಿವಿಗಳು ಮಾತ್ರ ಆಫ್‌ ಆಗುವುದೇ ಇಲ್ಲ.

ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧ ಗೆದ್ದು ಗೆಲುವಿನ ನಗೆ ಬೀರಿದಾಗ, ರಾಜ್ಯಾದ್ಯಂತ ಅಭಿಮಾನಿಗಳು ತಮ್ಮ ಮನೆ, ಕಂಪನಿ, ರೆಸ್ಟೋರೆಂಟ್‌ಗಳಲ್ಲಿ ಟಿವಿ ಮುಂದೆಯೇ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ಮಾಡಿ ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+