RCB Victory Parade: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಸಾರ್ವಜನಿಕರಿಗೆ ಫ್ರೀ ಎಂಟ್ರಿ ?

ಬೆಂಗಳೂರು, ಜೂನ್‌ 04: ‌ಕ್ರೀಡಾ ಜಗತ್ತಿಗೆ ನಿಷ್ಠೆ, ತಾಳ್ಮೆಯಿಂದ ಪಾಠ ಮಾಡಿರುವ ಕನ್ನಡಿಗರ ಮನೆಮಗ ವಿರಾಟ್‌ ಕೊಹ್ಲಿ, ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ ಬೆಂಗಳೂರಿಗೆ ಆಗಮಿಸಿದೆ. ಇಂದು ಸಂಜೆ ಬೆಂಗಳೂರಿನ ವಿಧಾನಸೌಧದಲ್ಲಿ ಗ್ರಾಂಡ್ ಸ್ಟೆಪ್ಸ್ ಮೇಲೆ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ಆದರೆ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ವರೆಗೂ ತೆರೆದ ವಾಹನದಲ್ಲಿ ಆರ್‌ಸಿಬಿ ಆಟಗಾರರಿಗೆ ಮೆರವಣಿಗೆ ಇರುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.

ಸ್ಟೇಡಿಯಂನಲ್ಲಿ ಭಾವುಕರಾಗಿದ್ದ ವಿರಾಟ್ ಕೊಹ್ಲಿ ಪಡೆ ಬೆಂಗಳೂರಲ್ಲಿ ವಿಜಯಯಾತ್ರೆ ನಡೆಸಲಿದೆ. ಅಹಮದಾಬಾದ್‌ನಲ್ಲಿ ಸ್ಟೇಡಿಯಂನಲ್ಲಿ ಭಾವುಕರಾಗಿದ್ದ ವಿರಾಟ್ ಕೊಹ್ಲಿ ಪಡೆ ಬೆಂಗಳೂರಲ್ಲಿ ವಿಜಯಯಾತ್ರೆ ನಡೆಸಲಿದೆ ಎಂದು ಹೇಳಿದ್ದರು. ಕನ್ನಡಿಗರು ಆರ್‌ಸಿಬಿ ಬರುವಿಕೆಯನ್ನೇ ಕಾಯುತ್ತಿದೆ ಎಂದು ವಿರಾಟ್‌ ಕೊಹ್ಲಿ ಅವರು ಹೇಳಿದ್ದರು. ಪಂಜಾಬ್ ಕಿಂಗ್ ವಿರುದ್ಧ ಅಹಮದಾಬಾದ್‌ನಲ್ಲಿ ಗೆದ್ದ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಇಂದು(ಜೂನ್04)‌ ಬೆಂಗಳೂರಿಗೆ ಬಂದಿದ್ದು, ಆರ್‌ಸಿಬಿ ಚೊಚ್ಚಲ ಕಪ್ ಅನ್ನು ಚಿನ್ನಸ್ವಾಮಿ ಸ್ಟೇಡಿಯಂಗೆ ತರಲಿದೆ.

RCB Victory Parade Today Free Passes Available for Celebrations at Chinnaswamy Stadium

ಇಂದು ಬೆಂಗಳೂರಿಗೆ ವಿರಾಟ್ ಕೊಹ್ಲಿ ಪಡೆಯು ಆಗಮಿಸಲಿದ್ದು, ಸಂಭ್ರಮಾಚರಣೆಗೆ ಭರ್ಜರಿ ವೇದಿಕೆ ಸಜ್ಜಾಗುತ್ತಿದೆ. ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಜಯಯಾತ್ರೆ ನಡೆಯಲಿದೆ. ಈಗಾಗಲೇ ಬೆಂಗಳೂರಿಗೆ ಬಂದಿರುವ ಆರ್‌ಸಿಬಿ ತಂಡ ಸಂಜೆ 4 ರಿಂದ 5 ಗಂಡೆಗೆ ವಿಧಾನಸೌಧದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಆರ್‌ಸಿಬಿ ತಂಡ ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದಿಂದ ಆರ್‌ಸಿ ಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಇನ್ನೂ ವಿಧಾನಸೌಧದಿಂದ ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂದ ಹೊರಟು ಕ್ರೀಡಾಂಗಣದಲ್ಲಿ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಆಚರಣೆ ನಡೆಯಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಇಂದು ಸಾರ್ವಜನಿಕರಿಗೆ ಫ್ರೀ ಎಂಟ್ರಿ ನೀಡಲಿದ್ದಾರೆ ಎನ್ನಲಾಗಿತ್ತು. ಜನಸಂದಣಿ ನಿರ್ವಹಣೆ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಬೆಂಗಳೂರು ಪೊಲೀಸರು ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದಾರೆ. ಅಭಿಮಾನಿಗಳ ಸುರಕ್ಷತೆಗಾಗಿ ಹಾಗೂ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚೆರಿಕೆ ಕ್ರಮವನ್ನ ಕೈಗೊಂಡಿದೆ. ಹೀಗಾಗಿ ಪಾಸ್‌ಗಳನ್ನು ಹೊಂದಿರುವವರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಕ್ಕೆ ಅವಕಾಶವಿರುತ್ತದೆ.

ಸೀಮಿತ ಉಚಿತ ಪಾಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಮಾನ್ಯ ಪಾಸ್ ಇಲ್ಲದೆ ಪ್ರವೇಶವಿಲ್ಲ. ಅಭಿಮಾನಿಗಳು ಪ್ರವೇಶ ದ್ವಾರಗಳಲ್ಲಿ ಕಾದುಕುಳಿತ್ತಿದ್ದಾರೆ. ಅಭಿಮಾನಿಗಳು ಜನದಟ್ಟಣೆಯನ್ನು ತಪ್ಪಿಸಬೇಕು ಮತ್ತು ಸಂಚಾರ ಸಲಹೆಗಳನ್ನು ಪಾಲಿಸಬೇಕು. ಕ್ರೀಡಾಂಗಣ ಪ್ರದೇಶದಲ್ಲಿ ಪಾರ್ಕಿಂಗ್ ನಿರ್ಬಂಧಿಸಲಾಗಿರುವುದರಿಂದ ಸಾರ್ವಜನಿಕ ಸಾರಿಗೆಯನ್ನು ಬಳಸಿ ಎಂದು ಪೋಲಿಸರು ಸೂಚನೆಗಳನ್ನ ನೀಡಿದ್ದಾರೆ. ಅಲ್ಲದೇ ಕಬ್ಬನ್ ಉದ್ಯಾನ, ಲಾಲ್ ಬಾಗ್, ಅಂಬೇಡ್ಕರ್ ಬೀದಿ, ಎಂಜಿ ರಸ್ತೆ, ಬಿಬಿಎಂಪಿ ವೃತ್ತ ಸೇರಿದಂತೆ ಚಿನ್ನಸ್ವಾಮಿ ಸ್ಟೇಡಿಯಂದ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+