IPL 2025 RCB: ಆರ್‌ಸಿಬಿಯಿಂದ ಇಬ್ಬರು ಸ್ಫೋಟಕ ಆಟಗಾರರು ತೊರೆಯುವ ಸಾಧ್ಯತೆ

IPL 2025 RCB: ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಅರ್ಧಕ್ಕೆ ನಿಂತಿದ್ದ ಐಪಿಎಲ್ 2025 ಮತ್ತೆ ಮೇ 17ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯಲಿದೆ. ಈ ನಡುವೆಯೇ ಸ್ಟಾರ್ ಆಟಗಾರರು ಕೈ ಕೊಡುವ ಸಾಧ್ಯತೆಯಿದ್ದು, ಇದರಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾದಂತಾಗಲಿದೆ. ಹಾಗಾದ್ರೆ ಯಾವ್ಯಾವ ಆಟಗಾರರು ಅಲಭ್ಯರಾಗುವ ಹಂತದಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇದುವರೆಗೂ ಆಡಿರುವ 17 ಸೀನನ್‌ಗಳಲ್ಲಿ ಆರ್‌ಸಿಬಿ ಒಂದೇ ಒಂದು ಟ್ರೋಫಿ ಕೂಡ ಗೆದ್ದಿಲ್ಲ. ಆದರೂ ಅಭಿಮಾನಿಗಳೇನು ಕಡಿಮೆಯಾಗಿಲ್ಲ. ಬದಲಾಗಿದೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದಾರೆ. ಎಷ್ಟು ಬಾರಿ ಸೋತ್ರೂ ಆರ್‌ಸಿಬಿನೇ ನಮ್ಮ ಫೆವರಿಟ್‌ ಟೀಂ ಅಂತಿದ್ದಾರೆ. ಇನ್ನು ಈ ಬಾರಿ ಟ್ರೋಫಿ ಎತ್ತುವ ಭರವಸೆಯನ್ನು ತಂಡ ಮೂಡಿಸಿದೆ.

RCB Two Big Stars Players Likely to Exit from Squad

ಯಾಕೆಂದ್ರೆ, ಈ ಸೀಸನ್‌ ಆರಂಭದಿಂದಲೂ ಆರ್‌ಸಿಬಿ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಇದುವರೆಗೂ ಆಇಡಿದ 11 ಪಂದ್ಯಗಳಲ್ಲಿ ಮೂರರಲ್ಲಿ ಸೋತು ಉಳಿದ 8ರಲ್ಲಿ ಗೆಲುವು ಸಾಧಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳೊಂದಿದೆ 2ನೇ ಸ್ಥಾನದಲ್ಲಿದೆ.

ಐಪಿಎಲ್​ನ ಮುಂದಿನ ಪಂದ್ಯಗಳಿಗೆ ದಿನಾಂಕ ನಿಕ್ಕಿ ಆಗಿದೆ. ಯುದ್ಧ ಬಿಕ್ಕಟ್ಟು ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಪಂದ್ಯಗಳು, ಮೇ 17 ರಿಂದ ಆರಂಭಗೊಳ್ಳುತ್ತಿವೆ. ಅಂತೆಯೇ ಮೇ 17 ರಂದು ಆರ್​ಸಿಬಿ ಮತ್ತು ಕೋಲ್ಕತ್ತ ನೈಟ್​ ರೈಡರ್ಸ್​ ತಂಡಗಳು ಬೆಂಗಳೂರಿನಲ್ಲಿ ಸೆಣಸಾಟ ನಡೆಸಲಿವೆ. ಇನ್ನೂ ಈ ಬಾರಿಯ ಐಪಿಎಲ್‌ ಟೂರ್ನಿ ಅರ್ಧಕ್ಕೆ ನಿಂತಿದ್ದು, ಇದೀಗ ಮತ್ತೆ ಆರಂಭವಾಗಲಿದೆ. ಇದರ ಬೆನ್ನಲ್ಲೇ ಸ್ಟಾರ್ ಆಟಗಾರರು ಕೈಕೊಡುವ ಸಾಧ್ಯತೆಯಿದ್ದು, ಇದರಿಂದ ತಂಡ ಪ್ರಾಂಚೈಸಿಗೆ ದೊಡ್ಡ ಹೊಡೆತ ಬಿದ್ದಂತಾಗಲಿದೆ.

ಮೇ 29ರಿಂದ ಆರಂಭ ಆಗಲಿರುವ ಇಂಗ್ಲೆಂಡ್‌- ವೆಸ್ಟ್ ಇಂಡೀಸ್ ಪಂದ್ಯ ನಡೆಯಲಿದೆ. ಅದರಲ್ಲಿ ಐಪಿಎಲ್ ಆಡುತ್ತಿರುವ ಇಂಗ್ಲೆಂಡ್ ಆಟಗಾರ ತಂಡದಲ್ಲಿದ್ದು, ಅವರು ಐಪಿಎಲ್​ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆರ್‌ಸಿಬಿ ಸ್ಟಾರ್ ಆಟಗಾರ ಜೊಕೊಬ್ ಬೆಥಲ್ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದು, ಇದರಿಂದ ಆರ್‌ಸಿಬಿಗೆ ದೊಡ್ಡ ಪ್ರಮಾಣದಲ್ಲಿ ಆಘಾತ ಆಗಲಿದೆ. ಇನ್ನು ಲಿಯಾಮ್ ಲಿವಿಂಗ್​ಸ್ಟೋನ್ ಇಂಗ್ಲೆಂಟ್‌ ತಂಡಕ್ಕೆ ಆಯ್ಕೆ ಆಗಿಲ್ಲ. ಇವರು ಆರ್‌ಸಿಬಿಯಲ್ಲೇ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ.

Take a Poll

ಮೇ 29ರಿಂದ ಜೂನ್ 3ವರೆಗೆ ಏಕದಿನ ಪಂದ್ಯ ನಡೆಯಲಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಐಪಿಎಲ್​ನ ಅಂತಿಘಟ್ಟದ ಪಂದ್ಯಗಳು ನಡೆಯಲಿವೆ. ಇನ್ನು ಟಿ-20 ತಂಡಕ್ಕೆ ಫಿಲ್​ ಸಾಲ್ಟ್ ಕೂಡ ಆಯ್ಕೆ ಆಗಿದ್ದು, ಅವರು ಕೂಡ ಇಂಗ್ಲೆಂಡ್‌ ಮರಳಿದ್ದಾರೆ ಎಂದು ತಿಳಿದುಬಂದಿದ್ದು, ಆರ್‌ಸಿಬಿಗೆ ಇದೊಂದು ಹೊಡೆತ ಬೀಳಿದೆ. ಈಗಾಗಲೇ ಬೌಲಿಂಗ್ ವಿಭಾಗದಲ್ಲಿ ಹೇಜಲ್‌ವುಡ್‌ ಗಾಯದಿಂದ ಹೊರಗುಳಿದಿದ್ದು, ಇದು ಕೂಡ ಹೊಡೆತ ಬಿದ್ದಂತಾಗಲಿದೆ. ಆದರೂ ಇವರ ಸ್ಥಾನವನ್ನು ಭುವನೇಶ್ವರ್ ಕುಮಾರ್ ಹಾಗೂ ಯಶ ದಯಾಳ್‌ ತುಂಬಲಿದ್ದಾರೆ.

ಆದರೆ ಬ್ಯಾಟಿಂಗ್‌ ವಿಭಾಗದಲ್ಲಿ ಸ್ಟಾರ್ ಆಟಗಾರರಾದ ಜೋಕಬ್, ಬೆಥೆಲ್‌ ಹಾಗೂ ಫಿಲ್‌ ಸಾಲ್ಟ್‌ ಕೈ ಕೊಟ್ಟರೆ ಇವರ ಸ್ಥಾವನ್ನು ಯಾರು ತುಂಬಲಿದ್ದಾರೆ ಎನ್ನುವುದೇ ಇದೀಗ ಯಕ್ಷಪ್ರಶ್ನೆಯಾಗಿದೆ. ಈಗಾಗಲೇ ದೇವದತ್‌ ಪಡಿಕ್ಕಲ್‌ ಕೂಡ ಹೊರಗುಳಿದಿದ್ದು, ಇವರ ಸ್ಥಾನ ತುಂಬಲು ಕನ್ನಡಿಗ ಮಯಾಂಕ್ ಅಗರ್ವಾಲ್‌ ಅವರು ರೆಡಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+