RCB: ಆರ್‌ಸಿಬಿಯಿಂದ ಸ್ಟಾರ್‌ ಆಟಗಾರರೇ ಔಟ್‌..

RCB: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಟ್ರೋಫಿ ಇಲ್ಲ ಎಂಬ ಕೊರಗಿಗೆ ತೆರೆ ಎಳೆಯಿತು. ಇದಾದ ಬಳಿಕ ರಾಯಲ್‌ ತಂಡಕ್ಕೆ ಒಂದಲ್ಲ ಒಂದು ಅಡೆತಡೆಗಳು ಬರುತ್ತಲಿವೆ. ಈ ನಡುವೆಯೇ ಸ್ಫೋಟಕ ಆಟಗಾರರು ಟೀಂನಿಂದ ಹೊರಬೀಳಲಿದ್ದಾರೆ ಎನ್ನುವ ಆತಂಕದ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಹಾಗಾದ್ರೆ ಯಾರೆಲ್ಲ ಹೊರಬೀಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ತಿಳಿಯಿರಿ..

18ನೇ ಆವೃತ್ತಿಯ ಐಪಿಎಲ್‌ ಫೈನಲ್ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸದಿದ್ದು, ಈ ವೇಳೆ ಬಲಿಷ್ಠ ಪಂಜಾಬ್‌ ಕಿಂಗ್ಸ್ದ ತಂಡವನ್ನು ಬಗ್ಗುಬಡಿಯುವ ಮೂಲಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಟ್ರೋಫಿ ಏನೋ ಕೊನೆಗೂ ಗೆದ್ದುಕೊಂಡಿತು. ಇದರ ಬೆನ್ನಲ್ಲೇ ಆಘಾತಗಳು ಎದುರಾಗುತ್ತಲಿವೆ. ಇದೀಗ ಸ್ಟಾರ್ ಆಟಗಾರರನ್ನು ಕೈಬಿಡುವ ತೀರ್ಮಾನವನ್ನು ಪ್ರಾಂಚೈಸಿ ಮಾಡಿದೆ ಎನ್ನುವ ಗದ್ದಲ ಅಭಿಮಾನಿಗಳಲ್ಲಿ ಭಾರೀ ಆತಂಕ ಸೃಷ್ಟಿಸಿದೆ..

RCB This Star Players Likely to Be Dropped Including Yash Dayal

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಆಡಿದ 17 ಸೀಸನ್‌ಗಳಲ್ಲಿ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, ಈ ಕೊರಗನ್ನು 18ನೇ ಸೀಸನ್‌ನಲ್ಲಿ ನೆರೆವೇರಿಸಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಆರ್‌ಸಿಬಿ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣಕರ್ತನಾದ ಯಶ್‌ ದಯಾಳ್‌ ಸೇರಿ ಕೆಲ ಆಟಗಾರರಿಗೆ ಗೇಟ್‌ಪಾಸ್‌ ನೀಡುವ ಸಾಧ್ಯತೆಯಿದೆ ಎನ್ನುವ ಸುದ್ದಿಯೊಂದು ಭಾರೀ ವೈರಲ್‌ ಆಗುತ್ತಿದೆ.

ಹೌದು.. ಐಪಿಎಲ್‌ ಸೀಸನ್-19 ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡದಿಂದ ಪ್ರಮುಖ ವೇಗಿ ಯಶ್‌ ದಯಾಳ್‌ ಹೊರಬೀಳುವುದು ಖಚಿತ ಎನ್ನಲಾಗುತ್ತಿದೆ. ಅವರ ವಿರುದ್ಧ ಅತ್ಯಾಚಾರದ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಆರ್‌ಸಿಬಿ ಕೈಬಿಡುವ ಸಾಧ್ಯತೆಯಿದೆ ಎನ್ನುವ ಮಾಹಿತಿಯೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಉತ್ತರ ಪ್ರದೇಶದ ಗಾಝಿಯಾಬಾದ್​ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ಕೂಡ ದಾಖಲು ಆಗಿದೆ. ಈ ಹಿನ್ನೆಲೆ ಅವರನ್ನು ಬಂಧಿಸುವ ಸಾಧ್ಯತೆ ಇದ್ದು, ಆರ್‌ಸಿಬಿಯಲ್ಲಿ ಮುಂದಿನ ಸೀಸನ್‌ನಿಂದ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಯಶ್ ದಯಾಳ್ ಅವರು ವಿವಾಹ ಆಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೆ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆಂದು ಇತ್ತೀಚೆಗಷ್ಟೇ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಈ ಸಂಬಂಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೂ ಪತ್ರ ಬರೆದಿರುವುದಾಗಿ ಹೇಳಿದ್ದರು.

ಅಲ್ಲದೆ, 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಸಹ ಯಶ್ ದಯಾಳ್ ವಿರುದ್ಧ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಅವರು ಬಂಧನದ ಭೀತಿಯಲ್ಲಿದ್ದು, ಅವರನ್ನು ಯುಪಿಸಿಎ ಮುಂಬರುವ ಯುಪಿ ಟಿ-20 ಲೀಗ್​ನಿಂದ ಬ್ಯಾನ್ ಮಾಡಲಾಗಿದೆ. ಹಾಗೆಯೇ ಆರ್‌ಸಿಬಿಯಿಂದಲೂ ಕೂಡ ಬ್ಯಾನ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಐಪಿಎಲ್‌ 2026ರಿಂದ ಆರ್‌ಸಿಬಿ ಕೆಲ ಆಟಗಾರರನ್ನು ಕೈಬಿಡಲಿದೆ ಎನ್ನುವ ಮಾಹಿತಿ ಲಭ್ಯ ಆಗಿದೆ. ಯಾಕಂದ್ರೆ ಪ್ರತಿ ಬಾರಿಯೂ ಗೊಂದಲದಲ್ಲಿರುತ್ತಿದ್ದ ತಂಡಕ್ಕೆ ಈ ಬಾರಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಎದುರಾಳಿ ತಂಡಗಳಿಗೆ ಅಕ್ಷರಸಃ ನಡುಕ ಹುಟ್ಟಿಸಿವೆ.

ಅಲ್ಲದೆ, ಯಾರನ್ನು ಯಾವ ಸ್ಥಾನದಲ್ಲಿ ಆಡಿಸಿದರೆ, ಉತ್ತಮ ಎನ್ನುವ ಐಡಿಯಾವೂ ಸಿಕ್ಕಿದ್ದು, ಅಂದುಕೊಂಡಿದ್ದಕ್ಕಿಂತ ಉತ್ತಮ ಆಟಗಾರರನ್ನೇ ಹೊಂದಿದ್ದು, ಕೆಲ ಆಟಗಾರರನ್ನು ಕೈಬಿಡುವ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಇದೆ. ಯಶ್‌ ದರಯಶ್‌ ಸೇರಿದಂತೆ ಲಿಯಾಮ್ ಲಿವಿಂಗ್​ಸ್ಟೋನ್, ಅಭಿನಂದನ್ ಸಿಂಗ್, ರಾಸಿಖ್ ಸಲಾಂ ದಾರ್, ಮೋಹಿತ್ ರಾಥಿ, ಬ್ಲೆಸ್ಸಿಂಗ್ ಮುಜರಬಾನಿ, ಟಿಮ್ ಸೀಫರ್ಟ್ ಅನ್ನು ಕೈಬಿಡಲು ನಿರ್ಧರಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

2026ರಲ್ಲಿ ತಂಡದಲ್ಲಿ ಆಡುವ ಆಟಗಾರರು

* ವಿರಾಟ್ ಕೊಹ್ಲಿ
* ರಜತ್ ಪಾಟಿದಾರ್ (ನಾಯಕ)
* ಫಿಲ್ ಸಾಲ್ಟ್
* ಜಿತೇಶ್ ಶರ್ಮಾ
* ಜೋಶ್ ಹೇಜಲ್​ವುಡ್
* ಸುಯಶ್ ಶರ್ಮಾ
* ಕೃನಾಲ್ ಪಾಂಡ್ಯ
* ಭುವನೇಶ್ವರ್ ಕುಮಾರ್
* ಟಿಮ್ ಡೇವಿಡ್
* ರೊಮಾರಿಯೋ ಶೆಫರ್ಡ್
* ಜೇಕಬ್ ಬೆಥೆಲ್
* ದೇವದತ್​ ಪಡಿಕ್ಕಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+