RCB: ಭಾರತ ತಂಡದ ನಾಯಕನಾಗಿ ಆರ್‌ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಆಯ್ಕೆ..

Bhuvneshwar Kumar: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸ್ಟಾರ್ ಬೌಲರ್ ಭುವನೇಶ್ವರ್ ಅವರಿಗೆ ಭಾರತ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಯಾವ ಪಂದ್ಯಾವಳಿಗೆ ಎನ್ನುವ ಪ್ರಶ್ನೆಗೆ ಬಹುತೇಕ ಮಂದಿಯ ತಲೆಯಲ್ಲಿ ಕಾಡುತ್ತಿರುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕ್ರಿಕೆಟ್‌ನ ಅತ್ಯಂತ ವೇಗದ ಹಾಗೂ ಮನರಂಜನಾತ್ಮಕ ಮಾದರಿಯ ಪಂದ್ಯಾವಳಿಯಾದ 'ಹಾಂಗ್ ಕಾಂಗ್ ಸಿಕ್ಸಸ್' ಅಕ್ಟೋಬರ್ 30ರಿಂದ ನವೆಂಬರ್ 1ರ ವರೆಗೆ ನಡೆಯಲಿದೆ. ಈ ವಿಶಿಷ್ಟ ಟೂರ್ನಿಗಾಗಿ ಐಪಿಎಲ್‌ನ ಸ್ಟಾರ್ ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಘೋಷಿಸಲಾಗಿದ್ದು, ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಲಿದ್ದಾರೆ.

RCB Star Bowler Bhuvneshwar Kumar Named India Captain for Hong Kong Sixes 2026 Check Full Squad

ತಂಡದ ನಾಯಕನಾಗಿ ಭುವನೇಶ್ವರ್ ಕುಮಾರ್ ಆಯ್ಕೆ..

ಭುವನೇಶ್ವರ್ ಕುಮಾರ್ ನಾಯಕತ್ವದ ಈ ತಂಡದಲ್ಲಿ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ, ರಾಹುಲ್ ತೆವಾಟಿಯಾ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶಶಾಂಕ್ ಸಿಂಗ್, ಟಿ.ನಟರಾಜನ್ ಸ್ಥಾನ ಪಡೆದಿದ್ದಾರೆ. ಶಶಾಂಕ್ ಸಿಂಗ್ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ಮೈದಾನದಲ್ಲಿ ಕೇವಲ ಆರು ಜನರು ಮಾತ್ರ ಇರಲಿದ್ದು, ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ನೆಲೆಯೂರಿ ಆಡಲು ಆಟಗಾರರಿಗೆ ಹೆಚ್ಚಿನ ಕಾಲಾವಕಾಶ ಸಿಗುವುದಿಲ್ಲ.

ಯಾರು ಯಾವ ಜವಾಬ್ದಾರಿ ನಿಭಾಯಿಸಲಿದ್ದಾರೆ?

ಡೆತ್ ಓವರ್‌ಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸುವ ಸಾಮರ್ಥ್ಯವಿರುವ ರಾಹುಲ್ ತೆವಾಟಿಯಾ ಮತ್ತು ಶಶಾಂಕ್ ಸಿಂಗ್ ತಂಡದ ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಆಟ ಪ್ರಮುಖವಾಗಿದ್ದರೆ, ಭುವನೇಶ್ವರ್ ಮತ್ತು ನಟರಾಜನ್ ಬೌಲಿಂಗ್ ವಿಭಾಗವನ್ನು ಸರಿದೂಗಿಸಲಿದ್ದಾರೆ.

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ಪ್ರಮುಖ ಲಕ್ಷಣಗಳು

* ಪ್ರತಿಯೊಂದು ತಂಡದಲ್ಲಿ ಮೈದಾನದಲ್ಲಿ ಕೇವಲ 6 ಜನ ಆಟಗಾರರು ಮಾತ್ರ ಇರುತ್ತಾರೆ.

* ವಿಕೆಟ್‌ ಕೀಪರ್ ಹೊರತುಪಡಿಸಿ ಉಳಿದ ಐದೂ ಜನ ಆಟಗಾರರು ತಲಾ ಒಂದೊಂದು ಓವರ್ ಬೌಲಿಂಗ್ ಮಾಡುವುದು ಕಡ್ಡಾಯ.

* ಪಂದ್ಯಾವಳಿಯ ಸ್ವರೂಪ ಅತ್ಯಂತ ಕಿರಿದಾಗಿರುವುದರಿಂದ ಕ್ರಿಸ್‌ನಲ್ಲಿ ನೆಲೆಯೂರಿ ಆಡಲು ಬ್ಯಾಟರ್‌ಗಳಿಗೆ ಸಮಯವಿರುವುದಿಲ್ಲ. ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆಡಬೇಕಾಗುತ್ತದೆ.

* ವೇಗದ ಕ್ರಿಕೆಟ್ ಇಷ್ಟಪಡುವ ಅಭಿಮಾನಿಗಳಿಗೆ ಈ ಐಪಿಎಲ್ ತಾರೆಗಳ ಉಪಸ್ಥಿತಿ ಭರಪೂರ ಮನರಂಜನೆ ನೀಡಲಿದ್ದು, ಭಾರತ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಡಬ್ಲ್ಯೂಪಿಎಲ್‌ ಆರಂಭ ಯಾವಾಗ?

ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಮುಂದಿನ ವರ್ಷ ಜನವರಿ 14ರಿಂದ ಫೆಬ್ರವರಿ 7ರ ವರೆಗೆ ನಡೆಯಲಿರುವ ಲೀಗ್‌ನಲ್ಲಿ ಅವರು ಲಭ್ಯವಿರುವುದನ್ನು ಖಚಿತಪಡಿಸಿದೆ. ಇದು ಬೆಂಗಳೂರು ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸಿದೆ.

ಅಚ್ಚರಿ ಸಂಗತಿ ಎಂದರೆ ಸತತ ಮೂರು ಆವೃತ್ತಿಗಳಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಯುಪಿ ವಾರಿಯರ್ಸ್ ಈ ಬಾರಿ ಅತ್ಯಂತ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಬರೋಬ್ಬರಿ 9 ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದೆ. ಇದರಲ್ಲಿ ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್ ಸೇರಿದಂತೆ ಭಾರತದ ಪ್ರಮುಖ ಆಟಗಾರ್ತಿಯರಾದ ಕಿರಣ್ ನವ್‌ಗಿರೆ, ಆಶಾ ಶೋಭನಾ ಮತ್ತು ಶ್ವೇತಾ ಸೆಹ್ರಾವತ್ ಕೂಡ ಇದ್ದಾರೆ.

ಆರ್‌ಸಿಬಿ ಉಳಿಸಿಕೊಂಡ ಆಟಗಾರ್ತಿಯರು

ಸ್ಮೃತಿ ಮಂಧನಾ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಎಲೀಸ್ ಪೆರ್ರಿ, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲೌರೆನ್ ಬೆಲ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪ್ರತ್ಯೂಷಾ ಕುಮಾರ್.

ಆರ್‌ಸಿಬಿ ಬಿಡುಗಡೆಗೊಳಿಸಿದ ಆಟಗಾರ್ತಿಯರು

ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್, ಗೌತಮಿ ನಾಯಕ್, ದಯಾಲನ್ ಹೇಮಲತಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+