ಆರ್‌ಸಿಬಿ - ಪಿಬಿಕೆಎಸ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ?!! RCB
Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ 17 ವರ್ಷಗಳ ನಂತರ ಗೆಲುವು ಸಾಧಿಸಿದೆ. ಈ ಗೆಲುವಿನ ಸಂಭ್ರಮದಲ್ಲಿ ಇರುವಾಗಲೇ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು / ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಅಂತಿಮ ಪಂದ್ಯ ಮ್ಯಾಚ್ ಫಿಕ್ಸಿಂಗ್ ಆಗಿತ್ತೇ ಎನ್ನುವ ಗಂಭೀರ ಪ್ರಶ್ನೆ ಎದುರಾಗಿದೆ. ಐಪಿಎಲ್‌ನಲ್ಲಿ ಫಿಕ್ಸಿಂಗ್ ಎನ್ನುವುದು ಇದೇ ಮೊದಲೇನು ಅಲ್ಲ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಷ್ಟೊಂದು ವರ್ಷ ನಿಯತ್ತಿನಿಂದ ಆಡಿದೆ. ಇದೇ ಕಾರಣಕ್ಕೆ ನಮಗೆ ಕಪ್ ಇಲ್ಲದಿದ್ದರೂ ಪರವಾಗಿಲ್ಲ ನಾವು ಬೇರೆ ಅವರ ರೀತಿ ಫಿಕ್ಸಿಂಗ್ ಮಾಡಿಕೊಂಡಿಲ್ಲ ಎಂದು ಆರ್‌ಸಿಬಿ ಅಭಿಮಾನಿಗಳು ಖುಷಿಪಡುತ್ತಿದ್ದರು. ಆದರೆ, ಇದೀಗ ಕೇಂದ್ರ ಸಚಿವರೊಬ್ಬರ ಪ್ರಶ್ನೆ ಈ ಗಂಭೀರ ಚರ್ಚೆಗೆ ಕಾರಣವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲೇ ರೋಚಕ ಹಂತವನ್ನು ತಲುಪಿದ್ದವು. ಆದರೆ, ಕೊನೆಯ ಹಂತದಲ್ಲಿ ಆರ್‌ಸಿಬಿ ಕಪ್ ಗೆದ್ದಿದೆ. ಇದೊಂದು ಕನಸು ನನಸಾದಂತೆ ಆರ್‌ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಆರ್‌ಸಿಬಿ ಕಪ್ ಗೆದ್ದಿದ್ದನ್ನು ಬೀದಿ ಬೀದಿಗಳಲ್ಲಿ ರಾತ್ರೋ ರಾತ್ರಿ ಸಂಭ್ರಮಿಸಿದ್ದರು. ಆದರೆ, ಆರ್‌ಸಿಬಿ ತಂಡದ ವಿಶ್ವಾಸವನ್ನೇ ಪ್ರಶ್ನೆ ಮಾಡುವಂತೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಆರ್‌ಸಿಬಿ ತಂಡ ಗೆಲ್ಲುವುದಕ್ಕಿಂತ ಮುಂಚೆಯೇ ಮಾಡಿಕೊಂಡಿರುವ ಸಿದ್ಧತೆ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಆ ರೀತಿ ನೋಡಿದರೆ ಸೋಷಿಯಲ್ ಮೀಡಿಯಾದಲ್ಲೂ ಆರ್‌ಸಿಬಿ ತಂಡವೇ ಗೆಲ್ಲಲಿದೆ ಎನ್ನುವ ರಿಪೋರ್ಟ್‌ವೊಂದು ವೈರಲ್ ಆಗಿತ್ತು. ಆದರೆ, ಆರ್‌ಸಿಬಿ ಮ್ಯಾನೇಜ್ಮೆಂಟ್ ನಡೆದುಕೊಂಡ ರೀತಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹೌದು ಆರ್‌ಸಿಬಿ ಅಭಿಮಾನಿಗಳು ಬೆಚ್ಚಿ ಬೀಳುವಂತಹ ಸಂಗತಿಯೊಂದರ ಬಗ್ಗೆ ಇದೀಗ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆದ್ದಿರುವ ಹಿನ್ನೆಲೆಯಲ್ಲಿ ಇಡೀ ಆರ್‌ಸಿಬಿ ಅಭಿಮಾನಿಗಳೇ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಆದರೆ, ಆರ್‌ಸಿಬಿ - ಪಿಬಿಕೆಎಸ್‌ನ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿತ್ತೇ. ನಾವೇ ಗೆಲ್ಲಲಿದ್ದೇವೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೊತ್ತಾಗಿದ್ದು ಹೇಗೆ ಎನ್ನುವ ಗಂಭೀರವಾದ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಎತ್ತಿರುವ ಗಂಭೀರವಾದ ಪ್ರಶ್ನೆ.
ಗೆಲ್ಲುವುದಕ್ಕಿಂತ ಮುಂಚೆಯೇ ಗೊತ್ತಾಗಿದ್ದು ಹೇಗೆ ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯ ಗೆಲ್ಲುವುದಕ್ಕಿಂತ ಮುಂಚೆಯೇ ಆರ್‌ಸಿಬಿ ಮ್ಯಾನೇಜ್ಮೆಂಟ್ ಮಾಡಿಕೊಂಡಿರುವ ಸಿದ್ಧತೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಫೈನಲ್ ಪಂದ್ಯ ಇನ್ನೂ ಪ್ರಾರಂಭವಾಗುವುದಕ್ಕೂ ಮುಂಚೆಯೇ ಆರ್‌ಸಿಬಿ ಮ್ಯಾನೇಜ್ಮೆಂಟ್ ವಿಜಯೋತ್ಸವ ಆಚರಣೆ ಮಾಡುವುದಕ್ಕೆ ಅವಕಾಶ / ಭದ್ರತೆ ಕಲ್ಪಿಸುವಂತೆ ಬೆಂಗಳೂರು ಪೊಲೀಸರಿಗೆ ಅರ್ಜಿ ಸಲ್ಲಿಸಿದೆ ಎನ್ನುವ ಅಂಶವು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಗೆಲುವಿನ ಮೇಲೆ ಕರಿನೆರಳು ಬೀಳುವುದಕ್ಕೆ ಕಾರಣವಾಗಿದೆ.
ಇನ್ನು ಈ ತಂಡಗಳು ಇಷ್ಟು ವರ್ಷ ಯಾವುದೇ ವಿವಾದ ಅಥವಾ ಮ್ಯಾಚ್ ಫಿಕ್ಸಿಂಗ್‌ನಂತಹ ಕೃತ್ಯಗಳಿಂದ ತುಂಬಾ ದೂರವೇ ಉಳಿದಿವೆ. ಆದರೆ, ಆರ್‌ಸಿಬಿ ಮ್ಯಾನೇಜ್ಮೆಂಟ್‌ನ ನಡೆ ಅನುಮಾನಕ್ಕೆ ಕಾರಣವಾಗಿದೆ. ಇದೇ ವಿಷಯವನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದು, ಪಂದ್ಯವನ್ನು ನಾವೇ ಗೆಲ್ಲಲಿದ್ದೇವೆ ಎಂದು ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಕನಸು ಬಿದ್ದಿತ್ತೇ ಅಂತ ಪ್ರಶ್ನೆ ಮಾಡಿದ್ದಾರೆ.
IPL script is ready
— 💝🌹💖🇮🇳jaggirmRanbir🇮🇳💖🌹💝 (@jaggirm) May 30, 2025
Let's see if MI wins today
The first one is done pic.twitter.com/9knOsYys9l
ಸಂಜೆ ಆರು ಗಂಟೆಗೆ ವಿಜಯೋತ್ಸವ ಆಚರಿಸಲಿದ್ದೇವೆ ಎಂದು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ ಇದು ಹೇಗೆ ಸಾಧ್ಯ ಎಂದು ಅವರು ಕೇಳಿದ್ದು. ಇದು ಜನರಲ್ಲೂ ಅನುಮಾನಕ್ಕೆ ಕಾರಣವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಹಾಗೂ ಪಂದ್ಯ ಗೆಲ್ಲುವುದಕ್ಕಿಂತ ಮುಂಚೆಯೇ ಅರ್ಜಿ ಸಲ್ಲಿಸಿದ್ದು ಸೇರಿದಂತೆ ಹಲವು ಪ್ರಶ್ನೆಗಳಿಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಸ್ಪಷ್ಟನೆ ನೀಡಬೇಕಿದೆ. ಕ್ರಿಕೆಟ್‌ನಲ್ಲಿ ಕೊನೆಯ ಬಾಲ್ ಸಹ ಮ್ಯಾಟರ್ ಆಗುತ್ತೆ. ಇನ್ನೊಂದು ಸಿಕ್ಸಸ್ ಬಾರಿಸಿದ್ದರೆ ಆರ್‌ಸಿಬಿ ಸೋಲುತ್ತಿತ್ತು. ಈ ರೀತಿ ಇರುವಾಗ ಒಂದು ದಿನ ಮುಂಚೆಯೇ ನಾವೇ ಗೆಲ್ಲಲಿದ್ದೇವೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.
18 ವರ್ಷ ಕಾಯಬೇಕಿರಲಿಲ್ಲ: ಇನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಐಪಿಎಸ್ ಭಾಸ್ಕರ್ ರಾವ್ ಅವರು ಮಾಡಿರುವ ಮ್ಯಾಚ್ ಫಿಕ್ಸಂಗ್ ಅನುಮಾನದ ಗಂಭೀರ ಆರೋಪಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರ / ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಗೆಲ್ಲಬೇಕಾದರೆ ಬರೋಬ್ಬರಿ 18 ವರ್ಷಗಳ ಕಾಲ ಕಾಯುವ ಅನಿರ್ವಾರ್ಯತೆ ಇರುತ್ತಿರಲಿಲ್ಲ.
ಬೇರೆ ತಂಡಗಳಂತೆ ಆರ್‌ಸಿಬಿ ಎಂದೂ ಈ ರೀತಿಯ ಕೆಲಸಗಳನ್ನು ಮಾಡಿಲ್ಲ. ರಾಜಕೀಯ ಕಾರಣಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು ಈ ರೀತಿಯ ಆರೋಪಗಳನ್ನು ಮಾಡಬಾರದು ಎಂದು ಆಗ್ರಹಿಸಿದ್ದಾರೆ.












Click it and Unblock the Notifications