RCB: ಇಂತಹ ಅಭಿಮಾನಿಗಳು ಎಲ್ಲೂ ಇಲ್ಲ; ಕೆಕೆಆರ್ ವಿರುದ್ಧ ಗೆಲುವಿನ ಬಳಿಕ ಕೃನಾಲ್ ಪಾಂಡ್ಯ ಹೇಳಿದ್ದೇನು?
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್ ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 174/8 ಗಳಿಸಿತು. ಇದಕ್ಕೆ ಉತ್ತರವಾಗಿ, ಬೆಂಗಳೂರು ತಂಡವು 16.2 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿ ಗೆಲುವಿನ ಶುಭಾರಂಭ ಮಾಡಿತು.
ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಕೆಕೆಆರ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಇವರಿಬ್ಬರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ ಸುಲಭ ಗೆಲುವು ಸಾಧಿಸಿತು. ಆದರೆ ಇದಕ್ಕೂ ಮುನ್ನ ಕೆಕೆಆರ್ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದ ಕೃನಾಲ್ ಪಾಂಡ್ಯಗೆ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಯಿತು.

ಕೆಕೆಆರ್ ತಂಡದ ಪ್ರಮುಖ ಬ್ಯಾಟರ್ ಗಳಾದ ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರ ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡವನ್ನು 174 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೃನಾಲ್ ಪಾಂಡ್ಯ, ಆರ್ ಸಿಬಿ ಅಭಿಮಾನಿಗಳನ್ನು ಹಾಡಿ ಹೊಗಳಿದರು.
ಪಂದ್ಯದ ಬಗ್ಗೆ ಕೃನಾಲ್ ಹೇಳಿದ್ದೇನು?
ಪಂದ್ಯದ ಬಗ್ಗೆ ಮೊದಲು ಮಾತನಾಡಿದ ಅವರು ಪ್ರೇಕ್ಷಕರ ಮೇಲೆ ಅಲ್ಲ ಆಟದ ಮೇಲೆ ಗಮನ ಕೊಡುವುದು ಮುಖ್ಯವಾಗುತ್ತದೆ. ತುಂಬಾ ಹೆಚ್ಚು ಪ್ರೇಕ್ಷಕರ ಎದುರು ಆಡುವಾಗ ಆಟದ ಮೇಲೆ ಗಮನ ಕೊಡುವುದು ಮುಖ್ಯ, ನಾನು ಗಮನವನ್ನು ಆಟದ ಕಡೆ ನೀಡಬೇಕಾಗಿತ್ತು, ಉತ್ತಮವಾಗಿ ಬೌಲ್ ಮಾಡಬೇಕಿತ್ತು, ಅದನ್ನು ಮಾಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದರು. ಕ್ರಿಕೆಟ್ ಸಾಕಷ್ಟು ಬದಲಾವಣೆಯಾಗುತ್ತಿದೆ, ನಾವು ಆ ಬದಲಾವಣೆ ಜೊತೆಗೆ ಹೋಗಬೇಕು, ಬ್ಯಾಟರ್‌ಗಳು ನಿರಂತರವಾಗಿ ಸಿಕ್ಸ್ ಹೊಡೆಯುವ ಕೌಶಲ್ಯವನ್ನು ಹೊಂದಿದ್ದಾರೆ. ನೀವು ನಿಮ್ಮ ಆಟವನ್ನು ಹೆಚ್ಚಿಸಬೇಕು, ನಾನು ವೇಗವಾಗಿ ಬೌಲಿಂಗ್ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ವೇಗದ ಬದಲಾವಣೆಯು ವೇಗಿದ ಬೌಲರ್ ಗಳಿಗೆ ಸಂಬಂಧಿಸಿದೆ ಆದರೆ ನಾನು ಅದನ್ನು ಪ್ರಯತ್ನಿಸಿದೆ." ಎಂದರು.
ಪಂದ್ಯದ ನಡುವೆ ಕೃನಾಲ್ ಪಾಂಡ್ಯ ಬೌನ್ಸರ್ ಎಸೆಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಹೆಲ್ಮೆಟ್ ಧರಿಸದ ವೆಂಕಟೇಶ್ ಅಯ್ಯರ್‌ಗೆ ಅವರು ಬುದ್ಧಿವಂತ ಬೌನ್ಸರ್ ಅನ್ನು ಸಹ ಎಸೆದರು. ಶಾರ್ಟ್ ಬಾಲ್ ನೋಡಿದ ನಂತರ, ಅಯ್ಯರ್ ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ಮುಂದುವರೆಸಿದರು. ಈ ಸಣ್ಣ ಬ್ರೇಕ್ ಆಟವನ್ನು ಬದಲಾಯಿಸಿತು, ನಂತರ ಕೃನಾಲ್ ಪೂರ್ಣ ಎಸೆತವನ್ನು ವೆಂಕಟೇಶ್ ಅಯ್ಯರ್ ಅವರನ್ನು ಔಟ್ ಮಾಡಿದರು. ವಿಕೆಟ್ ಕೀಪರ್ ಜಿತೇಶ್‌ಗೆ ನಾನು ಏನು ಮಾಡುತ್ತೇನೆ ಎಂದು ಗೊತ್ತಿದೆ, ಬೌನ್ಸರ್ ಎಸೆಯಲು ಸಾಧ್ಯವಿದೆ ಎಂದರೆ ಅದನ್ನು ಯಾಕೆ ಮಾಡಬಾರದು ಎಂದರು.
ಅಭಿಮಾನಿಗಳ ಬಗ್ಗೆ
ಆರ್‌ಸಿಬಿ ತಂಡಕ್ಕೆ ಅಭಿಮಾನಿಗಲಿಂದ ಸಿಗುತ್ತಿರುವ ಬೆಂಬಲ ನೋಡಿ ಕೃನಾಲ್ ಪಾಂಡ್ಯ ಖುಷಿಯಾಗಿದ್ದಾರೆ. ಎಲ್ಲೇ ಹೋದರೂ ಅಭಿಮಾನಿಗಳ ಬೆಂಬಲ ಕಡಿಮೆಯಾಗಿಲ್ಲ. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ಗಾಗಿ ಆಡಿದ್ದಾರೆ, ಆದರೆ ಆರ್ ಸಿಬಿಗೆ ಇರುವಷ್ಟು ಕ್ರೇಜಿ ಅಭಿಮಾನಿಗಳು ಬೇರೆ ಎಲ್ಲೂ ಇಲ್ಲ ಎಂದು ಹೇಳಿದ್ದಾರೆ.
ನಾನು ತಂಡಕ್ಕೆ ಆಯ್ಕೆಯಾದಾಗಲೇ ನನಗೆ ಅನುಭವ ಆಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಕೂಡ ನಾನು ಆಡುವಾಗ ಜನ ಆರ್ ಸಿಬಿ ಆರ್ ಸಿಬಿ ಎಂದು ಕೂಗುತ್ತಿದ್ದರು, ಆಗ ನಾನು ತಂಡಕ್ಕೆ ಸೇರಿ ಕೇವಲ 10 ದಿನವಷ್ಟೇ ಆಗಿತ್ತು ಎಂದು ಹೇಳಿದ್ದಾರೆ. ಆರ್ ಸಿಬಿ ಮುಂದಿನ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಎದುರಿಸಲಿದೆ.












Click it and Unblock the Notifications