RCB WPL: ಆರ್‌ಸಿಬಿ ಮಹಿಳೆಯರ ತಂಡದಲ್ಲಿ ಯಾರೆಲ್ಲಾ ಉಳಿದುಕೊಳ್ಳಲಿದ್ದಾರೆ?
RCB WPL: ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್ 3 ಮುಕ್ತವಾಗಿದೆ. ಇದೀಗ ಎಲ್ಲರ ಚಿತ್ತ ನಾಲ್ಕನೇ ಆವೃತ್ತಿಯತ್ತ ನೆಟ್ಟಿದೆ. ಈ ನಡುವೆಯೇ ಬೆಂಗಳೂರು ಪ್ರಾಂಚೈಸಿ ಎಷ್ಟು ಆಟಗಾರ್ತಿಯನ್ನು ಉಳಿಸಿಕೊಂಡಿದೆ ಎನ್ನುವ ಮಹತ್ವದ ಅಪ್ಡೇಟ್‌ವೊಂದು ಹೊರಬಿದ್ದಿದೆ. ಹಾಗಾದ್ರೆ, ಯಾರೆಲ್ಲಾ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು ಮಹಿಳೆಯರ ತಂಡ 2024ರಲ್ಲಿ ಟ್ರೋಫಿ ಗೆದ್ದಿದೆ. 2025ರಲ್ಲಿ ಕೈತಪ್ಪಿತ್ತು, ಬಲಿಷ್ಠ ಆಟಗಾರ್ತಿಯರನ್ನು ಹೊಂದಿರುವ ಈ ತಂಡ ಮುಂದಿನ ಬಾರಿ 2026ರಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಇದಕ್ಕೂ ಮುಂಚೆ ಯಾರೆಲ್ಲಾ ಮುಂದಿನ ಬಾರಿ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನುವ ಮಾಹಿತಿಯೊಂದು ಬಹಿರಂಗಗೊಂಡಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ನ 4ನೇ ಆವೃತ್ತಿಗೆ ಸಕಲ ಸಿದ್ಧತೆಗಳು ಆರಂಭವಾಗಿವೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ರಿಟೈನ್ ಪಟ್ಟಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದೆ. ಅದರಂತೆಯೇ ನವೆಂಬರ್ 5ರ ಇಳಗೆ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿಯನ್ನು ಕೊಡಬೇಕಾಗುತ್ತದೆ.
ಇಲ್ಲಿ ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಳ್ಳಲು 5 ಆಯ್ಕೆಗಳನ್ನು ಕೊಡಲಾಗಿದೆ. ಅಂದರೆ, ಒಂದು ಫ್ರಾಂಚೈಸಿ ಒಟ್ಟು ಐವರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ರಿಟೈನ್ ಮಾಡಿಕೊಳ್ಳುವ ಮೊದಲ ಆಟಗಾರ್ತಿಗೆ 3.50 ಕೋಟಿ ರೂಪಾಯಿ, ಎರಡನೇ ಆಟಗಾರ್ತಿಗೆ 2.50 ಕೋಟಿ ರೂಪಾಯಿ, ಮೂರನೇ ಆಟಗಾರ್ತಿಗೆ 1.75 ಕೋಟಿ ರೂಪಾಯಿ, ನಾಲ್ಕನೇ ಆಟಗಾರ್ತಿಗೆ 1 ಕೋಟಿ ರೂಪಾಯಿ ಹಾಗೂ 5ನೇ ಆಟಗಾರ್ತಿಗೆ 50 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.
ಅಂದರೆ, ಒಟ್ಟು 9.25 ಕೋಟಿ ರೂಪಾಯಿ ವ್ಯಯಿಸಿ ಗರಿಷ್ಠ 5 ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು. ಅದರಂತೆಯೇ ಈ ಬಾರಿ ಆರ್‌ಸಿಬಿ ಫ್ರಾಂಚೈಸಿ ಒಟ್ಟು 5 ಆಟಗಾರ್ತಿಯರನ್ನು ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಯಾರೆಲ್ಲಾ ಇರಬಹುದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಸ್ಮೃತಿ ಮಂಧಾನ: ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರನ್ನು ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಯಾಕಂದ್ರೆ, ಆರ್‌ಸಿಬಿ ಪರ ಈವರೆಗೆ 26 ಪಂದ್ಯಗಳನ್ನಾಡಿರುವ ಅವರು ಒಟ್ಟು 646 ರನ್‌ಗಳನ್ನು ಕಲೆಹಾಕಿದ್ದಾರೆ. 2024ರಲ್ಲಿ ಸ್ಮೃತಿ ನಾಯಕತ್ವದಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದ್ದರಿಂದ 3.50 ಕೋಟಿ ರೂಪಾಯಿ ನೀಡಿ ಅವರನ್ನು ರಿಟೈನ್ ಮಾಡಿಕೊಳ್ಳುವುದು ಖಚಿತ ಅಂತಲೇ ಹೇಳಬಹುದಾಗಿದೆ.
ಎಲ್ಲಿಸ್ ಪೆರ್ರಿ: ಇನ್ನೂ ಆಸ್ಟ್ರೇಲಿಯನ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಅವರನ್ನು ಕೂಡ ಉಳಿಸಿಕೊಳ್ಳಲಿದೆ. 2024ರಲ್ಲಿ ಆರ್‌ಸಿಬಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪೆರ್ರಿ ಪ್ರಮುಖ ಪಾತ್ರವಹಿಸಿದ್ದರು. ಆರ್‌ಸಿಬಿ ಪರ ಆಡಿದ 25 ಪಂದ್ಯಗಳಲ್ಲಿ 972 ರನ್ ಕಲೆಹಾಕಿದ್ದಾರೆ. ಅಲ್ಲದೇ, 14 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಜೊತೆಗೆ ಈ ಬಾರಿ ಸಹ ಆರ್‌ಸಿಬಿ ಪರ ಸಖತ್ ಆಗೇ ಪ್ರದರ್ಶನ ತೋರಿದ್ದರು. ಆದ್ದರಿಂದ ಎಲ್ಲಿಸ್ ಪೆರ್ರಿ ಅವರನ್ನು ಸಹ ಉಳಿಸಿಕೊಳ್ಳುವುದು ಬಹುತೇಕ ಖಚಿತ ಅಂತಲೇ ಹೇಳಲಾಗುತ್ತದೆ.
ರಿಚಾ ಘೋಷ್: ಆರ್‌ಸಿಬಿ ತಂಡವು ಮೂರನೇ ರಿಟೈನ್ ಆಗಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅವರನ್ನು ಆಯ್ಕೆಯಾಗಲಿದ್ದಾರೆ. ಕಳೆದ ಮೂರು ಸೀಸನ್ಗಳಿಂದ ಆರ್‌ಸಿಬಿ ಪರ ಕಣಕ್ಕಿಳಿಯುತ್ತಿರುವ ರಿಚಾ ಘೋಷ್ ಈವರೆಗೆ 26 ಪಂದ್ಯಗಳನ್ನಾಡಿದ್ದು, 625 ರನ್ ಕಲೆಹಾಕಿದ್ದಾರೆ. ಅಲ್ಲದೆ, ಉತ್ತಮ ವಿ.ಕೀಪರ್ ಕೂಡ ಆಗಿದ್ದು, ಅವರನ್ನು ಪ್ರಾಂಚೈಸಿ ಕೈಬಿಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ರೇಣುಕಾ ಸಿಂಗ್ ಠಾಕೂರ್: ಪ್ರಮುಖ ವೇಗಿ ರೇಣುಕಾ ಠಾಕೂರ್ ಅವರನ್ನು ಸಹ ಈ ಬಾರಿ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ತಂಡದ ಪ್ರಮುಖ ಬೌಲರ್ ಆಗಿರುವ ಕಾರಣ ಅವರನ್ನು ಮುಂದಿನ ಆವೃತ್ತಿಗೂ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಇನ್ನೂ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಅವರನ್ನು ಕೂಡ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ. 2024ರಲ್ಲಿ ಆರ್‌ಸಿಬಿ ಕಪ್ ಎತ್ತಿ ಹಿಡಿಯುವಲ್ಲಿ ಶ್ರೇಯಾಂಕಾ ಅವರ ಕೊಡುಗೆ ತುಂಬಾ ಇದೆ. ಆದ್ದರಿಂದ ಇವರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇವರೆಲ್ಲೂ ಸಹ ಉತ್ತಮ ಪ್ರದರ್ಶನ ತೋರಿ ಅಭಿಮಾನಿಗಳ ಮನಸನ್ನು ಗದ್ದಿರುವುದಲ್ಲದೆ, ತಂಡಕ್ಕೆ ಅಚ್ಚುಮೆಚ್ಚಿನ ಆಟಗಾರ್ತಿಯರಾಗಿದ್ದಾರೆ.
-
ಮೈದಾನಕ್ಕೆ ಬರ್ತಾರಾ ಆರ್‌ಸಿಬಿ ಅಭಿಮಾನಿಗಳ ಹೊಸ ಕ್ರಶ್ ಬಿರ್ಲಾ ಕುಡಿ ಅನನ್ಯಾ?; ಕಾವ್ಯಾ ಮಾರನ್ ಬಗ್ಗೆ ಹೊಸ ಚರ್ಚೆ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್‌ಸಿಬಿ.. ಆರ್‌ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್‌ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ










Click it and Unblock the Notifications