ಆರ್‌ಸಿಬಿ: ಸಂಭ್ರಮಾಚರಣೆಯ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಕಿಂಗ್ ಕೊಹ್ಲಿ! Virat Kohli
Virat Kohli: ಪ್ರತಿ ಪಂದ್ಯ ಗೆದ್ದ ಮೇಲೂ ವಿರಾಟ್ ಕೊಹ್ಲಿ ವಿರಾಟ್ ಪರ್ವ ಮೈದಾನದಲ್ಲಿ ಕಾಣಿಸುತ್ತಿತ್ತು. ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಗೆಲುವನ್ನು ಸಂಭ್ರಮಿಸುವ ಪರಿಯೇ ಭಿನ್ನ - ವಿಭಿನ್ನ. ಪ್ರತಿಯೊಂದು ವಿಕೆಟ್ ಬಿದ್ದಾಗಲೂ ತಾವೇ ತೆಗೆದಂತೆ ಸಂಭ್ರಮಿಸುತ್ತಾರೆ ಅಂತ ಕ್ರಿಕೆಟ್ ಅಭಿಮಾನಿಗಳು ತಮಾಷೆ ಮಾಡುವುದೂ ಇದೆ. ಆದರೆ, ಸುದೀರ್ಘ 17 ವರ್ಷಗಳ ಕನಸು ಮಂಗಳವಾರ ಜೂನ್ 03ಕ್ಕೆ ನನಸಾಗಿದೆ. ಆದರೆ ಈ ಗೆಲುವನ್ನು ವಿರಾಟ್ ಕೊಹ್ಲಿ ಅವರು ಸಂಭ್ರಮಿಸಿದ್ದ ಪರಿ ತುಂಬಾ ಭಿನ್ನವಾಗಿತ್ತು. ವಿರಾಟ್ ಕೊಹ್ಲಿ ಅವರು ಇನ್ನೇನು ಗೆಲ್ಲಲ್ಲಿದ್ದೇವೆ. ಈ ಸಲ ಕಪ್ ನಮ್ದೇ ಎನ್ನುವಾಗ ಭಾವುಕರಾದರು. ಅವರ ಕಣ್ಣೀರಧಾರೆಯೇ ಈ ಸುದೀರ್ಘ ಪಯಣದ ನೋವು - ಹತಾಶೆ ಹಾಗೂ ನಿರೀಕ್ಷೆಗಳ ಚಿತ್ರಣದಂತಿತ್ತು. ವಿರಾಟ್‌ನ ಹೊಸ ವಿನಮ್ರ ವಿರಾಟ ಪರ್ವವನ್ನು ಅಭಿಮಾನಿಗಳು ಮೈದಾನದಲ್ಲಿ ನೋಡುವಂತಾಯಿತು. ಇದೇ ಗೆಲುವಿನಲ್ಲಿ ವಿರಾಟ್ ಅವರು ನಾನು ವಿನಮ್ರನಾಗಿ ಇರಲಿದ್ದೇನೆ ಎಂದಿದ್ದಾರೆ.
ಆಟವೋ - ಬದುಕೋ ಎರಡರಲ್ಲೂ ಸೋತಾಗ ಮತ್ತು ಗೆದ್ದಾಗ ನಾವು ಯಾವ ರೀತಿ ಇರುತ್ತೇವೆ. ನಮ್ಮ ವರ್ತನೆ ಹಾಗೂ ನಾವು ಸೋಲು ಹಾಗೂ ಗೆಲುವುಗಳನ್ನು ಯಾವ ರೀತಿ ಸ್ವೀಕರಿಸುತ್ತೇವೆ ಎನ್ನುವುದು ತುಂಬಾನೇ ಮ್ಯಾಟರ್ ಆಗುತ್ತದೆ. ಅದೇ ರೀತಿ ನೆನ್ನೆಯ ಗೆಲುವು ಒಂದೆರಡು ದಿನಗಳ ಅಥವಾ ಒಂದೆರಡು ವರ್ಷಗಳ ಕನಸು ಸಹ ಅಲ್ಲ. ಈಗಾಗಲೇ ಹೇಳಿದಂತೆ ಇದು ಸುದೀರ್ಘ 17 ವರ್ಷಗಳ ಕನಸು. ಇದನ್ನು ವಿರಾಟ್ ಸಂಭ್ರಮಿಸಿದ ಪರಿ ಅತ್ಯಂತ ಭಿನ್ನ ಹಾಗೂ ಸುದಂರ ಅಷ್ಟೇ ಅಲ್ಲ ಭಾವನಾತ್ಮಕವಾಗಿಯೂ ಇತ್ತು. ವಿರಾಟ್ ಈ ಗೆಲುವಿನ ನಂತರ ನಾನು ವಿನಮ್ರವಾಗಿ ಇರಲಿದ್ದೇನೆ ಅಂತ ಹೇಳಿದ್ದಾರೆ.

ನಾನು ವಿನಮ್ರವಾಗಿ ಇರಲಿದ್ದೇನೆ ಎಂದ ಕೊಹ್ಲಿ: ಇನ್ನು ಆರ್‌ಸಿಬಿಯ ಗೆಲುವಿನ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ಅವರು, ಈ ಗೆಲುವಿಗೆ ನಾನು ದೇವರಿಗೆ ಕೃತಜ್ಞನಾಗಿರುತ್ತೇನೆ. ಕೊನೆಗೂ ಈ ಸುಂದರ ರಾತ್ರಿ ಟ್ರೋಫಿನನ್ನು ನನ್ನ ಮಡಿಲಿಗೆ ನೀಡಿರುವುದಕ್ಕೆ ನಾನು ದೇವರಿಗೆ ಕೃತಜ್ಞನಾಗಿರುತ್ತೇನೆ. ಈ ಸಂದರ್ಭದಲ್ಲಿ ನಾನು ಸಾಧ್ಯವಾದಷ್ಟು ವಿನಮ್ರನಾಗಿರಲು ಬಯಸುತ್ತೇನೆ. ನನ್ನಿಂದ ಸಾಧ್ಯವಾದಷ್ಟು ಶ್ರಮಿಸುತ್ತೇನೆ ಅಂತ ಹೇಳಿದ್ದಾರೆ.
ಪ್ರತಿಯೊಬ್ಬರು ಈ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ. ಇಡೀ ತಂಡ ಒಂದಾಗಿ ಶ್ರಮಿಸಿದೆ. ಅತ್ಯುತ್ತಮ ಆಟಗಾರರು, ಪಂದ್ಯವನ್ನು ಗೆಲ್ಲಿಸಿ ಕೊಡಬಲ್ಲವರು ನಮ್ಮ ತಂಡದಲ್ಲಿ ಇದ್ದಾರೆ. ಇನ್ನು ಮೆಗಾ ಹರಾಜಿನ ಸಂದರ್ಭದಲ್ಲಿ ಮ್ಯಾನೇಜ್ಮೆಂಟ್ ಆಯ್ಕೆಯನ್ನು ಪ್ರಶ್ನೆ ಮಾಡಲಾಗಿತ್ತು. ತಪ್ಪಾಗಿದೆ ಎಂದು ಟೀಕೆಯನ್ನೂ ನಾವು ಎದುರಿಸಿದ್ದೆವು. ಆದರೆ, ಹರಾಜಿನ ಎರಡೇ ದಿನಗಳಲ್ಲಿ ತಂಡದೊಂದಿಗೆ ಸೇರಿದ ಆಟಗಾರರ ಬಗ್ಗೆ ನನಗೆ ಸಂತೋಷವಿದೆ. ಈ ತಂಡದ ಬಗ್ಗೆ ನನಗೆ ಅಂದಿನಿಂದಲೇ ವಿಶ್ವಾಸವಿತ್ತು ಅಂತ ಅವರು ಹೇಳಿದ್ದಾರೆ.
ಮ್ಯಾನೇಜ್ಮೆಂಟ್ ಸಕಾರಾತ್ಮಕವಾಗಿ ನಡೆದುಕೊಂಡಿದೆ. ಈ ಯಶಸ್ಸಿನಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇದೆ. ಇಲ್ಲದಿದ್ದರೆ ಈ ಗೆಲುವು ನಮಗೆ ಸಿಗುತ್ತಿರಲಿಲ್ಲ ಎಂದು ವಿರಾಟ್ ಕೊಹ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. ನಾನಿಲ್ಲಿ ನಿಂತುಕೊಂಡು ನನ್ನ ಬಗ್ಗೆ ಮಾತನಾಡುವುದಕ್ಕೆ ಬಯಸುವುದಿಲ್ಲ ಅಂತಲೂ ಅವರು ಹೇಳಿದ್ದಾರೆ.
ನಿಮ್ಮ ಗೆಲುವು ಹೌದು: ಇನ್ನು ಆರ್‌ಸಿಬಿಯ ಈ ಗೆಲುವು ನಿಮ್ಮ ಗೆಲವು ಅಂತ ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ. ಇದು ನಮ್ಮ ತಂಡಕ್ಕೆ ಸಿಕ್ಕ ಗೆಲುವು ಮಾತ್ರವಲ್ಲ. ಆರ್‌ಸಿಬಿ ಅಭಿಮಾನಿಗಳ ಗೆಲುವೂ ಸಹ ಆಗಿದೆ. ಸುದೀರ್ಘ 18 ವರ್ಷಗಳ ಕನಸು ಇದು. ನನ್ನ ಯೌವನವನ್ನು ಇಲ್ಲೇ ಕಳೆದಿದ್ದೇನೆ. ಉತ್ತಮ ಆಟ ಹಾಗೂ ಅನುಭವವನ್ನೂ ಇಲ್ಲಿ ಬಳಸಿದ್ದೇನೆ. ಪ್ರತಿ ವರ್ಷವೂ ಐಪಿಎಲ್‌ನಲ್ಲಿ ಗೆಲುವುದಕ್ಕೆ ನನ್ನಿಂದ ಏನೆಲ್ಲಾ ಸಾಧ್ಯವಾಗಿದೆಯೋ ಅದನ್ನೆಲ್ಲವನ್ನೂ ಕೊಟ್ಟಿದ್ದೇನೆ. ಕೊನೆಗೂ ಗೆದ್ದಿರುವುದು ನಂಬಲು ಸಾಧ್ಯವಾಗದಂತಹ ವಿಭಿನ್ನ ಅನುಭವ. ಈ ರೀತಿಯ ಸುದಿನವೊಂದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಅಂತಲೂ ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ.












Click it and Unblock the Notifications