ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್ ಆಘಾತ, ಸ್ಟಾರ್ ಪ್ಲೇಯರ್ ಟೂರ್ನಿಯಿಂದ ಔಟ್... RCB Fans
ಆರ್‌ಸಿಬಿ ಅನ್ನೋದು ನಮ್ಮ ರಕ್ತದ ಕಣ ಕಣದಲ್ಲೂ ಬೆರೆತು ಹೋಗಿದೆ ಅನ್ನೋದು ಅಭಿಮಾನಿಗಳ ಮಾತು, ಆದರೆ ಇದೆಲ್ಲಾ ಅತಿರೇಕ ಅನ್ನೋರು ಕೂಡ ಇದ್ದಾರೆ. ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಇಡೀ ಜಗತ್ತಿನಲ್ಲೇ ಅತಿಹೆಚ್ಚು ಅಭಿಮಾನಿ ಬಳಗ ಹೊಂದಿದ ತಂಡವಾಗಿದೆ ಎಂಬುದು ಅಭಿಮಾನಿಗಳ ವಾದ. ಹೀಗೆಲ್ಲಾ ಕಣ ಕಣದಲ್ಲೂ ಆರ್‌ಸಿಬಿ ಅಂತಾ ಎದೆ ತಟ್ಟಿಕೊಂಡು ಹೇಳುವ ಅಭಿಮಾನಿಗಳು ಇದೀಗ ಮತ್ತೆ ಆರ್‌ಸಿಬಿ ಬೆಂಬಲಕ್ಕೆ ನಿಂತು, ಮ್ಯಾಚ್ ನೋಡಲು ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್ ಆಘಾತ, ಸ್ಟಾರ್ ಪ್ಲೇಯರ್ ಟೂರ್ನಿಯಿಂದ ಔಟ್...
ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಮಹಿಳಾ ತಂಡ ಹಾಗೂ ಪುರುಷರ ತಂಡಗಳು ಕಪ್ ಗೆದ್ದ ನಂತರ ಇಡೀ ಜಗತ್ತಿನಾದ್ಯಂತ ಕನ್ನಡಿಗರ ತಂಡದ ಹವಾ ಜೋರಾಗಿದೆ. ಬೆಂಗಳೂರು ತಂಡಕ್ಕೆ ಇರುವ ಅಭಿಮಾನಿಗಳ ಬೆಂಬಲ ನೋಡಿ ಸ್ವತಃ ಕ್ರಿಕೆಟ್ ಜಗತ್ತು ಸುಸ್ತಾಗಿ ಹೋಗಿದೆ. ಈ ಸಮಯದಲ್ಲಿ 2026 ಐಪಿಎಲ್ & ಡಬ್ಲ್ಯೂಪಿಎಲ್ ಟೂರ್ನಿ ಆರಂಭವಾಗಲು ಕೌಂಟ್‌ಡೌನ್ ಶುರು ಮಾಡಿದ್ದರು ಅಭಿಮಾನಿಗಳು. ಈ ಸಮಯದಲ್ಲಿ ಆರ್‌ಸಿಬಿ ತಂಡದಿಂದ ಹೊರ ಬಿದ್ದಿರುವ ಆ ಸ್ಟಾರ್ ಪ್ಲೇಯರ್ ಯಾರು ಗೊತ್ತೆ?

ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್ ಆಘಾತ...
ಅಂದಹಾಗೆ ಆರ್‌ಸಿಬಿ ಮಹಿಳಾ ತಂಡಕ್ಕೆ ಕನ್ನಡಿಗರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿ ಒಂದು ಕಪ್ ಗೆಲ್ಲುವಂತೆ ಮಾಡಿದ್ದರು. ಪುರುಷರ ತಂಡಕ್ಕಿಂತ ಮೊದಲು ಆರ್‌ಸಿಬಿ ಮಹಿಳೆಯರ ತಂಡ ನಮ್ಮ ಬೆಂಗಳೂರಿಗೆ ಕಪ್ ತಂದಿದ್ದು ಸಂಭ್ರಮ ತಂದಿತ್ತು. ಹೀಗಿದ್ದಾಗ 2025 ಐಪಿಎಲ್ ಗೆದ್ದು ಪುರುಷರ ತಂಡ ಕೂಡ ಬೆಂಗಳೂರಿಗೆ ಕಪ್ ತಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಮಹಿಳೆಯರ ಪ್ರಿಮಿಯರ್ ಲೀಗ್ ಶುರುವಾಗಲಿದೆ. ಇಷ್ಟೆಲ್ಲದರ ನಡುವೆ ಆರ್‌ಸಿಬಿ ಮಹಿಳಾ ತಂಡದಿಂದ ದಿಢಿರ್ ಅಂತಾ ಸ್ಟಾರ್ ಆಟಗಾರ್ತಿ ಹೊರ ಬಿದ್ದಿದ್ದಾರೆ...
ಪೆರ‍್ರಿ ಇಲ್ಲದೆ ನಡೆಯಲಿದೆ ಟೂರ್ನಿ!
2026 ಜನವರಿ 9 ಶುಕ್ರವಾರ ಶುರುವಾಗಲಿರುವ ಈ ಬಾರಿಯ ಮಹಿಳೆಯರ ಪ್ರಿಮಿಯರ್ ಲೀಗ್ ಅಂದ್ರೆ ಡಬ್ಲ್ಯುಪಿಎಲ್ ಟೂರ್ನಿಗೆ ಭರ್ಜರಿ ತಯಾರಿ ಸಾಗಿದೆ. ಜನವರಿ 9 ಟು ಫೆಬ್ರವರಿ 5 ತನಕ ಟೂರ್ನಿ ನಡೆಯಲಿದೆ. ಆದರೆ ಟೂರ್ನಿ ಆರಂಭವಾಗುವ ಮೊದಲೇ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ‍್ರಿ ಈಗ ಟೂರ್ನಿ ಬಿಟ್ಟು ಹೊರ ನಡೆಯುತ್ತಿದ್ದಾರೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಭಾರಿ ಆಘಾತವನ್ನೇ ನೀಡಿದ್ದು, ಪೆರ‍್ರಿ ಅನುಪಸ್ಥಿತಿ ಅಭಿಮಾನಿಗಳಿಗೆ ಕಾಡಲಿದೆ ಎಂದು ಅಭಿಮಾನಿಗಳು ಬೇಸರವನ್ನು ಹೊರ ಹಾಕಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹೊರ ಬಿದ್ದಿರುವ ಹಿನ್ನೆಲೆ, ಅಭಿಮಾನಿಗಳಿಗೆ ಇನ್ನಷ್ಟು ನೋವು ತರಿಸಿದೆ.












Click it and Unblock the Notifications