ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಆರೋಪಿ ಕ್ರಿಕೆಟಿಗ ಸಂದೀಪ್ ಲಾಮಿಛಾನೆ ಪೊಲೀಸ್ ಕಸ್ಟಡಿಗೆ

|
Google Oneindia Kannada News

ಕಠ್ಮಂಡು, ಅ. 6: ರೇಪ್ ಅರೋಪ ಎದುರಿಸುತ್ತಿರುವ ನೇಪಾಳದ ಸ್ಟಾರ್ ಕ್ರಿಕೆಟಿಗ ಸಂದೀಪ್ ಲಾಮಿಛಾನೆಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಕಳೆದ ತಿಂಗಳು ಲಾಮಿಛಾನೆಗೆ ಅರೆಸ್ಟ್ ವಾರೆಂಟ್ ಹೊರಡಿಸಲಾಗಿತ್ತು. ಆದರೆ, ನೇಪಾಳದ ಹೊರಗಿದ್ದು ಬಂಧನದಿಂದ ತಪ್ಪಿಸಿಕೊಂಡಿದ್ದ ಸಂದೀಪ್ ಇಂದು ಗುರುವಾರ ನೇಪಾಳಕ್ಕೆ ಮರಳಿದ್ದರು.

ಲಾಮಿಛಾನೆ ಆಗಮಿಸುತ್ತಿದ್ದಂತೆಯೇ ಪೊಲೀಸರು ಕೂಡಲೇ ಕಸ್ಟಡಿಗೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಕಠ್ಮಂಡು ಜಿಲ್ಲಾ ಪೊಲೀಸ್ ವಕ್ತಾರ ದಿನೇಶ್ ರಾಜ್ ಮೈನಾಲಿ ತಿಳಿಸಿದ್ದಾರೆ. ನೇಪಾಳಕ್ಕೆ ಬರುವ ಮುನ್ನ ಸಂದೀಪ್ ಲಾಮಿಛಾನೆ ತಮ್ಮ ಫೇಸ್‌ಬುಕ್‌ನಲ್ಲಿ ತಾನು ಅಪರಾಧಿಯಲ್ಲ, ಅಮಾಯಕ ಎಂದು ಬರೆದುಕೊಂಡಿದ್ದರು.

ಕುಲದೀಪ್ ಸೇನ್- ಶೇಷ ಭಾರತಕ್ಕೆ ಸ್ಟಾರ್; ವಿಶ್ವಕಪ್ ಟೀಮ್‌ಗೆ ನೆಟ್ ಬೌಲರ್ಕುಲದೀಪ್ ಸೇನ್- ಶೇಷ ಭಾರತಕ್ಕೆ ಸ್ಟಾರ್; ವಿಶ್ವಕಪ್ ಟೀಮ್‌ಗೆ ನೆಟ್ ಬೌಲರ್

"ತನಿಖೆಗೆ ನಾನು ಪೂರ್ಣ ಸಹಕಾರ ನೀಡುತ್ತೇನೆ. ನಾನು ನಿರಪರಾಧಿ ಎಂದು ಸಾಬೀತು ಮಾಡಲು ಕಾನೂನು ಹೋರಾಟ ನಡೆಸುತ್ತೇನೆ. ಸತ್ಯ ಹೊರಬರಲಿ ಎಂದು ಆಶಿಸುತ್ತೇನೆ," ಎಂದು ನೇಪಾಳದ ಸ್ಪಿನ್ ಬೌಲರ್ ಆದ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು.

17 ವರ್ಷದ ಹುಡುಗಿ ರೇಪ್

17 ವರ್ಷದ ಹುಡುಗಿ ರೇಪ್

22 ವರ್ಷದ ಸಂದೀಪ್ ಲಾಮಿಚಾನೆ ಇದೇ ಆಗಸ್ಟ್ ತಿಂಗಳಲ್ಲಿ ಕಠ್ಮಂಡುವಿನ ಹೋಟೆಲ್‌ವೊಂದರ ರೂಮಿನಲ್ಲಿ 17 ವರ್ಷದ ಹುಡುಗಿಯನ್ನು ಅತ್ಯಾಚಾರ ಎಸಗಿದ ಆರೋಪ ಇದೆ. ಆ ಅಪ್ರಾಪ್ತೆಯೇ ಮಾಡಿರುವ ಆರೋಪ ಇದಾಗಿದೆ.

ಆಗ ನೇಪಾಳ ಕ್ರಿಕೆಟ್ ತಂಡದ ನಾಯಕರಾಗಿದ್ದ ಸಂದೀಪ್ ಲಾಮಿಛಾನೆಯನ್ನು ಕ್ಯಾಪ್ಟನ್ಸಿಯಿಂದ ಕಿತ್ತುಹಾಕಲಾಗಿತ್ತು. ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ ಸೆಪ್ಟೆಂಬರ್ 8ರಂದು ಬಂಧನದ ವಾರಂಟ್ ಹೊರಡಿಸಲಾಗಿತ್ತು.

ಫ್ಲೈಟ್ ಮಿಸ್; ಟಿ20 ವಿಶ್ವಕಪ್ ಟೀಮ್‌ನಿಂದ ಈ ಆಟಗಾರ ಔಟ್ಫ್ಲೈಟ್ ಮಿಸ್; ಟಿ20 ವಿಶ್ವಕಪ್ ಟೀಮ್‌ನಿಂದ ಈ ಆಟಗಾರ ಔಟ್

ಮಾನಸಿಕವಾಗಿ ಘಾಸಿ

ಮಾನಸಿಕವಾಗಿ ಘಾಸಿ

ಅರೆಸ್ಟ್ ವಾರೆಂಟ್ ಹೊರಡಿಸಿದಾಗ ಲಾಮಿಛಾನೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ನೇಪಾಳಕ್ಕೆ ಬರುವುದು ತಡವಾಯಿತು ಎಂದು ಹೇಳಲಾಗುತ್ತಿದೆ. ಹಾಗೆಯೇ, ತನ್ನ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪ ನಿರಾಧಾರವಾದುದು ಎಂದು ಹೇಳಿದ್ದ ಅವರು ತಾನು ಮಾನಸಿಕವಾಗಿ ಘಾಸಿಕೊಂಡಿರುವುದರಿಂದ ನೇಪಾಳಕ್ಕೆ ಮರಳುವುದು ತಡವಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದರು.

"ನನಗೆ ಅರೆಸ್ಟ್ ವಾರೆಂಟ್ ಹೊರಡಿಸಿರುವ ಸುದ್ದಿ ಕೇಳಿ ಮಾನಸಿಕವಾಗಿ ಆಘಾತ ತಂದಿತು. ಏನು ಮಾಡಬೇಕು, ಏನು ಮಾಡಬಾರದು ಎಂದು ದಿಕ್ಕು ತೋಚದಂತಾಗಿದೆ" ಎಂದು ಒಮ್ಮೆ ಅವರು ಬರೆದಿದ್ದರು.

"ನನ್ನ ಆರೋಗ್ಯ ಸ್ಥಿತಿ ಕ್ರಮೇಣ ಉತ್ತಮಗೊಳ್ಳುತ್ತಿದೆ. ಆದಷ್ಟು ಬೇಗ ನೇಪಾಳಕ್ಕೆ ಮರಳಿ ನನ್ನ ವಿರುದ್ಧದ ಪ್ರಕರಣದಲ್ಲಿ ಹೋರಾಡುತ್ತೇನೆ" ಎಂದೂ ಅವರು ಹೇಳಿಕೊಂಡಿದ್ದರು.

ಅದೇ ವೇಳೆ, ನೇಪಾಳ ಪೊಲೀಸರು ಸಂದೀಪ್ ಲಾಮಿಛಾನೆಯನ್ನು ಬಂಧಿಸಲು ಇಂಟರ್‌ಪೋಲ್ ಸಹಾಯವನ್ನೂ ಯಾಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಂದೀಪ್ ನೇಪಾಳಕ್ಕೆ ಮರಳುವುದು ಅನಿವಾರ್ಯವಾಗಿತ್ತು. ಇಲ್ಲದೇ ಹೋಗಿದ್ದರೆ ಇಂಟರ್‌ಪೋಲ್ ಸಹಾಯದಿಂದ ಕೆರಿಬಿಯನ್ ನಾಡಿನಲ್ಲಿಯೇ ಲಾಮಿಛಾನೆಯ ಬಂಧನವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ನೇಪಾಳದಲ್ಲಿ ಮೀಟೂ

ನೇಪಾಳದಲ್ಲಿ ಮೀಟೂ

ನೇಪಾಳದಲ್ಲಿ 2021ರ ವರ್ಷದಲ್ಲಿ 2300 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು. ಇದು ಪೊಲೀರು ಕೊಟ್ಟಿರುವ ಅಧಿಕೃತ ಮಾಹಿತಿ. ಅಥವಾ ಪ್ರಕರಣ ದಾಖಲಾದ ಅತ್ಯಾಚಾರ ಘಟನೆಗಳು. ಆದರೆ, ಬೆಳಕಿಗೆ ಬಾರದೇ ಉಳಿದ ಅದೆಷ್ಟೋ ಅತ್ಯಾಚಾರ ಪ್ರಕರಣಗಳು ನೇಪಾಳದಲ್ಲಿ ಸಂಭವಿಸಿವೆ ಎಂಬುದು ಅಲ್ಲಿನ ಮಾನವ ಹಕ್ಕು ಕಾರ್ಯಕರ್ತರ ಅನಿಸಿಕೆ.

ಭಾರತದಲ್ಲಿ ಕೆಲ ವರ್ಷಗಳ ಹಿಂದೆ ಕೇಳಿಬಂದ ಮೀಟೂ ಅಭಿಯಾನ ನೇಪಾಳದಲ್ಲೂ ಮಾರ್ದನಿಸಿತ್ತಾದರೂ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ತಮಗಾದ ಅತ್ಯಾಚಾರದ ಬಗ್ಗೆ ಬಾಯಿ ತೆಗೆದಿದ್ದರು.

ನೇಪಾಳದ ಖ್ಯಾತ ನಟ ಪೌಲ್ ಶಾ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿತ್ತು. ನ್ಯಾಯಾಲಯವೊಂದು ಪೌಲ್ ಶಾಗೆ ಎರಡೂವರೆ ವರ್ಷ ಸೆರೆಮನೆ ಸಜೆ ಶಿಕ್ಷೆ ವಿಧಿಸಿತು. ಜೊತೆಗೆ ಅತ್ಯಾಚಾರ ಸಂತ್ರಸ್ತೆಗೆ ಪರಿಹಾರ ಒದಗಿಸುವಂತೆ ಆದೇಶಿಸಿತು.

ಇದಾದ ಬಳಿಕ ಸಂದೀಪ್ ಲಾಮಿಛಾನೆ ವಿರುದ್ಧ ಅಪ್ರಾಪ್ತೆ ಹುಡುಗಿಯೊಬ್ಬಳು ಅತ್ಯಾಚಾರ ಆರೋಪ ಮಾಡಿದ್ದಳು.

ಸಂದೀಪ್ ಲಾಮಿಛಾನೆ ಪ್ರತಿಭಾನ್ವಿತ ಕ್ರಿಕೆಟಿಗ

ಸಂದೀಪ್ ಲಾಮಿಛಾನೆ ಪ್ರತಿಭಾನ್ವಿತ ಕ್ರಿಕೆಟಿಗ

22 ವರ್ಷದ ಸಂದೀಪ್ ಲಾಮಿಛಾನೆ ನೇಪಾಳದ ಅಸಾಮಾನ್ಯ ಕ್ರಿಕೆಟಿಗರ. ನೇಪಾಳ ಕ್ರಿಕೆಟ್‌ನ ಬೆಳವಣಿಗೆಯಲ್ಲಿ ಮತ್ತು ಜನಬೆಂಬಲ ಪಡೆಯುವಲ್ಲಿ ಸಂದೀಪ್ ಪಾತ್ರ ಬಹಳ ಮಹತ್ವದ್ದು. ಐಪಿಎಲ್, ಬಿಗ್ ಬ್ಯಾಷ್ ಸೇರಿದಂತೆ ವಿಶ್ವದ ಅನೇಕ ಟೂರ್ನಿಗಳಲ್ಲಿ ಅವರು ಆಡಿದ್ದಾರೆ.

ನೇಪಾಳ ಪರವಾಗಿ 30 ಓಡಿಐ, 43 ಟಿ20 ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 69 ಮತ್ತು 83 ವಿಕೆಟ್‌ಗಳನ್ನು ಪಡೆದಿರುವುದು ಸಾಮಾನ್ಯ ಸಂಗತಿಯಲ್ಲ. ಇನ್ನು ಐಪಿಎಲ್‌ನಂತಹ ಟ್ವೆಂಟಿ20 ಟೂರ್ನಿಗಳಲ್ಲಿ ಅವರು 136 ಪಂದ್ಯಗಳನ್ನು ಆಡಿ 193 ವಿಕೆಟ್ ಪಡೆದಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Nepal cricketer and former captain Sadeep Lamichhane is taken to custody by Nepal Police after he returns to Nepal on Oct 6th, Thursday. The star leg spinner Lamichhane is accused of raping 17 year old girl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X