• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಈ ಜನಪ್ರಿಯ ನಟ

|
Google Oneindia Kannada News

ನವದೆಹಲಿ, ನವೆಂಬರ್‌ 2: ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾದ ರಣವೀರ್ ಸಿಂಗ್ ಅವರು ಕತಾರ್‌ನಲ್ಲಿ ನಡೆಯಲಿರುವ ಫೀಫಾ ಪುಟ್‌ಬಾಲ್‌ ವಿಶ್ವಕಪ್ ಫೈನಲ್‌ನಲ್ಲಿ ಭಾಗವಹಿಸಲು ಮತ್ತು ಭಾರತವನ್ನು ಪ್ರತಿನಿಧಿಸಲು ಆಹ್ವಾನಿತರಾಗಿದ್ದಾರೆ.

ಡಿಸೆಂಬರ್ 18 ರಂದು ಕತಾರ್‌ನಲ್ಲಿ ನಡೆಯಲಿರುವ ಅತಿದೊಡ್ಡ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ರಣವೀರ್ ತೆರಳಲಿದ್ದಾರೆ. ಇಲ್ಲಿ ಅವರು ವಿಶ್ವಕಪ್‌ ಫುಟ್‌ಬಾಲ್‌ನ ಎರಡು ಅತ್ಯುತ್ತಮ ರಾಷ್ಟ್ರಗಳು ಸೆಣಸಾಡಿ ಒಂದು ರಾಷ್ಟ್ರ ವಿಶ್ವಕಪ್ ಅನ್ನು ಗೆಲ್ಲುವುದನ್ನು ವೀಕ್ಷಿಸಲು ಸಾಕ್ಷಿಯಾಗಲಿದ್ದಾರೆ. ರಣವೀರ್ ಅವರು ಜಾಗತಿಕವಾಗಿ ಭಾರತದ ಮಹತ್ವಾಕಾಂಕ್ಷೆಯ ಯುವಕರನ್ನು ಪ್ರತಿನಿಧಿಸುತ್ತಾರೆ. ಫೀಫಾ ವಿಶ್ವಕಪ್ ಫೈನಲ್‌ನಲ್ಲಿ ಪರಿಪೂರ್ಣ ರಾಯಭಾರಿಯಾಗಿರುತ್ತಾರೆ. ಅವರು ಒಂದು ದಿನ ಅಲ್ಲಿ ಇರುತ್ತಾರೆ ಮತ್ತು ಅನೇಕ ಜಾಗತಿಕ ಫುಟ್‌ಬಾಲ್ ಗಣ್ಯರೊಂದಿಗೆ ಪ್ರಮುಖ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಫೀಫಾ ವಿಶ್ವಕಪ್‌: ಯುಎಇಗೂ ವೀಸಾ ಲಭ್ಯ: ಪಂದ್ಯಗಳ ವೀಕ್ಷಣೆ, ವೀಸಾಗೆ ಅರ್ಜಿ ಸಲ್ಲಿಕೆ ಹೇಗೆ?ಫೀಫಾ ವಿಶ್ವಕಪ್‌: ಯುಎಇಗೂ ವೀಸಾ ಲಭ್ಯ: ಪಂದ್ಯಗಳ ವೀಕ್ಷಣೆ, ವೀಸಾಗೆ ಅರ್ಜಿ ಸಲ್ಲಿಕೆ ಹೇಗೆ?

ಇತ್ತೀಚೆಗೆ ಫ್ರೆಂಚ್ ಫುಟ್ಬಾಲ್ ಐಕಾನ್ ಜಿನೆದಿನ್ ಜಿದಾನೆ ನಂತರ, ರಣವೀರ್ ಪ್ರತಿಷ್ಠಿತ ಅಡಿಡಾಸ್ ಎಕ್ಸ್‌ ಯೋಜಿ ಯಮಾಮೊಟೊ (ವೈ-3) ಅಭಿಯಾನದ ಮುಖ್ಯಸ್ಥರಾಗಿದ್ದರು. ರಣವೀರ್ ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಎನ್‌ಬಿಎ ಗೇಮ್ಸ್‌ನಲ್ಲಿ ಬಾಸ್ಕೆಟ್‌ಬಾಲ್ ಐಕಾನ್‌ಗಳಾದ ಶಾಕ್ವಿಲ್ಲೆ ಓ'ನೀಲ್ ಮತ್ತು ವಿನ್ಸ್ ಕಾರ್ಟರ್ ಅವರನ್ನು ಭೇಟಿಯಾಗಿದ್ದರು. ಅಲ್ಲದೆ ಹೊಸ ತಾರೆಗಳಾದ ಟ್ರೇ ಯಂಗ್ ಮತ್ತು ಗಿಯಾನಿಸ್ ಆಂಟೆಟೊಕೌನಂಪೊ ಅವರೊಂದಿಗೆ ಸಂವಾದ ನಡೆಸಿದ್ದರು. ಈಗ ಪ್ರತಿಷ್ಠಿತ ಮಾರಾಕೇಶ್ ಚಲನಚಿತ್ರೋತ್ಸವದಲ್ಲಿ ಎಟೊಯಿಲ್ ಡಿ'ಓರ್ ಪ್ರಶಸ್ತಿಯೊಂದಿಗೆ ಗೌರವಕ್ಕೆ ಸಿದ್ಧರಾಗಿದ್ದಾರೆ. ಈ ಪ್ರಶಸ್ತಿಯನ್ನು ಈ ಹಿಂದೆ ಭಾರತೀಯ ಶ್ರೇಷ್ಠರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಮುಂತಾದವರು ಸ್ವೀಕರಿಸಿದ್ದಾರೆ.

ಈ ಹಿಂದೆ ಮರ್ಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆಯೋಜಕರು ಈ ಸಮಾರಂಭದಲ್ಲಿ 83 ಸ್ಟಾರ್‌ಗಳ ಜೊತೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವಿಶೇಷ ಗೌರವವನ್ನು ನೀಡಲಾಗುತ್ತದೆ ಎಂದು ಘೋಷಿಸಿದ್ದರು. ಸ್ಕಾಟಿಷ್ ನಟಿ ಟಿಲ್ಡಾ ಸ್ವಿಂಟನ್, ಅಮೇರಿಕನ್ ಚಲನಚಿತ್ರ ನಿರ್ಮಾಪಕ ಜೇಮ್ಸ್ ಗ್ರೇ ಮತ್ತು ಮೊರೊಕನ್ ನಿರ್ದೇಶಕಿ ಫರಿದಾ ಬೆನ್ಲ್ಯಾಜಿಡ್ ಅವರನ್ನು 2022ರ ಮ್ಯಾರಕೆಚ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೌರವಿಸಲಾಗುತ್ತದೆ.

ಸೂಪರ್ ಮಾರ್ಕೆಟ್‌ನಲ್ಲಿ ಹಲ್ಲೆ ಓರ್ವ ಸಾವು, ಜನಪ್ರಿಯ ಫುಟ್ಬಾಲರ್‌ಗೆ ಗಾಯಸೂಪರ್ ಮಾರ್ಕೆಟ್‌ನಲ್ಲಿ ಹಲ್ಲೆ ಓರ್ವ ಸಾವು, ಜನಪ್ರಿಯ ಫುಟ್ಬಾಲರ್‌ಗೆ ಗಾಯ

ರಣವೀರ್‌ ಅವರ ವೃತ್ತಿಯನ್ನು ಗುರುತಿಸಿ ಮೊರೊಕನ್ ನಗರದಲ್ಲಿ ನವೆಂಬರ್ 11 ರಿಂದ 19 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕ್ವಾರ್ಟೆಟ್ ಎಟೊಯಿಲ್ ಡಿ'ಓರ್ (ಗೋಲ್ಡನ್ ಸ್ಟಾರ್) ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಗೌರವವನ್ನು ಸ್ವೀಕರಿಸುವದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಣವೀರ್, ನನ್ನ ಕೆಲಸವನ್ನು ಗುರುತಿಸಿ ಈ ವಿಶೇಷವಾದ ಗೌರವವಾದ ಎಟೊಯಿಲ್ ಡಿ'ಓರ್ ಸ್ವೀಕರಿಸಲು ನಾನು ತುಂಬಾ ಸಂತಸಗೊಂಡಿದ್ದೇನೆ ಎಂದು ಹೇಳಿದ್ದಾರೆ.

English summary
One of the popular actors of India, Ranveer Singh has been invited to participate in the FIFA Football World Cup finals in Qatar and represent India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X