Ranji Trophy: ಮಿಂಚಿದ ಬೌಲರ್‌ಗಳು; ತಮಿಳುನಾಡು ವಿರುದ್ಧ ಮೇಲುಗೈ ಸಾಧಿಸಿದ ಕರ್ನಾಟಕ
ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 366 ರನ್‌ಗಳಿಗೆ ಆಲೌಟ್ ಆದ ಬಳಿಕ ಬ್ಯಾಟಿಂಗ್ ಆರಂಭಿಸಿದ ತಮಿಳುನಾಡು ಎರಡನೇ ದಿನದಾಟದ ಅಂತ್ಯಕ್ಕೆ 129 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದೆ.
ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿದ ದೇವದತ್ ಪಡಿಕ್ಕಲ್ 218 ಎಸೆತಗಳಲ್ಲಿ 12 ಬೌಂಡರಿ ಮತ್ತು ಸಿಕ್ಸ್ ಸಹಾಯದಿಂದ 151 ರನ್ ಗಳಿಸಿದರು, ಈ ಋತುವಿನಲ್ಲಿ ಅವರ ಮೂರನೇ ರಣಜಿ ಟ್ರೋಫಿ ಶತಕವಾಗಿದೆ. ಮೊದಲ ದಿನ 151 ರನ್ ಗಳಿಸಿದ್ದ ಅವರು, ಎರಡನೇ ದಿನ ಮತ್ತೆ ರನ್ ಗಳಿಸಲು ವಿಫಲವಾದರು.

ಮೊದಲ ದಿನದಾಟಕ್ಕೆ 5 ವಿಕೆಟ್ ಕಳೆದುಕೊಂಡು 288 ರನ್ ಗಳಿಸಿದ್ದ ಕರ್ನಾಟಕ ಬೇಗನೆ ಪಡಿಕ್ಕಲ್ ಅವರ ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ರಾಜ್ 51 ರನ್ ಗಳಿಸುವ ಮೂಲಕ ತಮ್ಮ ಚೊಚ್ಚಲ ಪ್ರಥಮ ದರ್ಜೆ ಅರ್ಧಶತಕವನ್ನು ಪೂರ್ಣಗೊಳಿಸಿದರು. ವಿಕೆಟ್‌ಕೀಪರ್ ಶ್ರೀನಿವಾಸ್ ಶರತ್ 83 ಎಸೆತಗಳಲ್ಲಿ 45 ರನ್ ಗಳಿಸಿದರು, ಕೊನೆಯ ಐದು ಕರ್ನಾಟಕ ಬ್ಯಾಟರ್‌ಗಳು ಕೇವಲ 78 ರನ್‌ಗಳನ್ನು ಸೇರಿಸುವ ಮೂಲಕ 119.4 ಓವರ್‌ಗಳಲ್ಲಿ 366 ರನ್‌ಗಳಿಗೆ ಆಲೌಟ್ ಆಯಿತು.
ಕರ್ನಾಟಕದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ನಿಯಮಿತ ಮಧ್ಯಂತರದಲ್ಲಿ ವಿಕೆಟ್‌ಗಳನ್ನು ಪಡೆದರು. ಆಫ್ ಸ್ಪಿನ್ನರ್ ಎಲ್ ಶಶಿ ಕುಮಾರ್ ಮೂರು ವಿಕೆಟ್ ಪಡೆದರೆ, ಹಾರ್ದಿಕ್ ಎರಡು ವಿಕೆಟ್ ಕಬಳಿಸಿದರು. ವಿದ್ವತ್ ಕಾವೇರಪ್ಪ ಮತ್ತು ವಿಜಯ್‌ಕುಮಾರ್ ವೈಶಾಕ್ ತಲಾ ಒಂದು ವಿಕೆಟ್ ಪಡೆದರು.
ತಮಿಳುನಾಡು ಪರ ನಾರಾಯಣ ಜಗದೀಸನ್ (56 ಎಸೆತಗಳಲ್ಲಿ 40), ಬಾಬಾ ಇಂದ್ರಜಿತ್ (ಔಟಾಗದೆ 35) ಮತ್ತು ವಿಮಲ್ ಕುಮಾರ್ (14) ಮಾತ್ರ ಎರಡಂಕಿಯ ಕೊಡುಗೆ ನೀಡಿದರು. ಎರಡನೇ ದಿನದಾಟದ ಮುಕ್ತಾಯದ ವೇಳೆಗೆ ತಮಿಳುನಾಡು ಇನ್ನೂ 237 ರನ್‌ಗಳ ಹಿನ್ನಡೆಯಲ್ಲಿದೆ. ಮೂರನೇ ದಿನ ತಮಿಳುನಾಡು ತಂಡವನ್ನು ಬೇಗನೆ ಔಟ್ ಮಾಡುವ ಮೂಲಕ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರೆ ಪಂದ್ಯದ ಮೇಲೆ ಮತ್ತಷ್ಟು ಹಿಡಿತ ಸಾಧಿಸಬಹುದು.












Click it and Unblock the Notifications