ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಂಬಲ್ಡನ್ 2022: ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ನಡಾಲ್ ನಿರ್ಗಮನ

|
Google Oneindia Kannada News

ಲಂಡನ್, ಜುಲೈ 8: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಾಫೆಲ್ ನಡಾಲ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿ, ಶುಕ್ರವಾರದಂದು ತಮ್ಮ ಆಟ ಮುಂದುವರೆಸುವುದಾಗಿ ಹೇಳಿದ್ದರು.ಆದರೆ, ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ನಿಕ್ ಕರ್ಗಿಯೋಜ್ ಗೆ ವಾಕ್ ಓವರ್ ಲಭಿಸಿದ್ದು, ಸುಲಭವಾಗಿ ಫೈನಲ್ ತಲುಪಿದ್ದಾರೆ. ಇನ್ನೊಂದೆಡೆ, ವಿಂಬಲ್ಡನ್ ನಿಂದ ನಿರ್ಗಮಿಸಿದ ನಡಾಲ್ ತಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

''ನನ್ನ ಪ್ರಕಾರ ಪಂದ್ಯದ ಮಧ್ಯದಲ್ಲಿ ಹಿಂದೆ ಸರಿಯುವುದು ತೀರಾ ಕಷ್ಟದ ಕೆಲಸ, ನಾನು ಟನಿಸ್ ವೃತ್ತಿಜೀವನದಲ್ಲಿ ಈಗಾಗಲೇ ಕೆಲವು ಬಾರಿ ಪಂದ್ಯಗಳ ನಡುವೆ ರಿಟೈರ್ ಆಗಿದ್ದೇನೆ ಹಾಗೂ ಅದು ನಾನು ಹೆಚ್ಚಾಗಿ ದ್ವೇಷಿಸುವ ವಿಷಯ ಕೂಡ ಹೌದು, ಆದ್ದರಿಂದ ಪಂದ್ಯದಿಂದ ಹಿಂದೆ ಸರಿಯದೇ ಮುಂದುವರಿಸಿದೆ'' ಎಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯದ ಸಮಸ್ಯೆ ನಡುವೆ ಗೆಲುವು ಸಾಧಿಸಿದ ಬಳಿಕ ನಡಾಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಂಬಲ್ಡನ್ 2022: ಫೈನಲ್ ತಲುಪಿ ದಾಖಲೆ ಬರೆದ ಎಲೆನಾ - ಜಬೇರ್ವಿಂಬಲ್ಡನ್ 2022: ಫೈನಲ್ ತಲುಪಿ ದಾಖಲೆ ಬರೆದ ಎಲೆನಾ - ಜಬೇರ್

ಅಗ್ರಶ್ರೇಯಾಂಕಿತ ಟೆನಿಸ್ ಆಟಗಾರ, ಆವೆ ಮಣ್ಣಿನ ರಾಜ ಎಂದೆನಿಸಿಕೊಂಡಿರುವ ರಾಫೆಲ್ ನಡಾಲ್ ಈ ಬಾರಿಯ ಟೂರ್ನಿಯಲ್ಲಿ3ನೇ ಗ್ರ್ಯಾಂಡ್ ಸ್ಲ್ಯಾಮ್ ಹಾಗೂ ಒಟ್ಟಾರೆ 23ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಉತ್ಸಾಹದಲ್ಲಿದ್ದರು. ನೆದರ್ಲೆಂಡ್ಸ್ ತಂಡದ ಆಟಗಾರ ಬೊಟಿಕ್ ಜಾಂಡ್ ಶುಪ್ ಅವರನ್ನು ಮಣಿಸಿ ಅಂತಿಮ ಎಂಟರ ಘಟ್ಟವನ್ನು ಪ್ರವೇಶಿಸಿದ್ದರು.

Rafael Nadal has withdrawn from Wimbledon 2022

ಎಂಟರ ಘಟ್ಟದಲ್ಲಿ 14ನೇ ಶ್ರೇಯಾಂಕಿತ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಜುಲೈ 6ರಂದು ಎದುರಿಸಿದ ರಾಫೆಲ್ ನಡಾಲ್ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಗಾಯದ ಸಮಸ್ಯೆಯ ನಡುವೆಯೂ 24 ವರ್ಷದ ಟೇಲರ್ ಫ್ರಿಟ್ಜ್ ರನ್ನು 3-6, 7-5, 3-6, 7-5, 7-6(10-4) ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡರು.

4 ಗಂಟೆ 20 ನಿಮಿಷಗಳವರೆಗೆ ನಡೆದ ಈ ಹಣಾಹಣಿಯಲ್ಲಿ ಟೇಲರ್ ಫ್ರಿಟ್ಜ್ ವಿರುದ್ಧ 5 ಸೆಟ್‌ಗಳ ಅಂತರದಲ್ಲಿ ರಾಫೆಲ್ ನಡಾಲ್ ಗೆದ್ದರೂ ಸಾಕಷ್ಟು ಪ್ರಯಾಸ ಪಡಬೇಕಾಗಿತ್ತು. ಸೆಮಿಫೈನಲ್ ಸುತ್ತಿನಲ್ಲಿ ಆಸ್ಟ್ರೇಲಿಯದ ಆಟಗಾರ ಮೇವರಿಕ್ ನಿಕ್ ಕರ್ಗಿಯೋಸ್ ವಿರುದ್ಧ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದರು. ಆದರೆ, ಕೊನೆ ಕ್ಷಣದಲ್ಲಿ ಗಾಯದ ಸಮಸ್ಯೆ ಉಲ್ಬಣವಾಗಿದ್ದರಿಂದ ಪಂದ್ಯದಿಂದ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ.

Rafael Nadal has withdrawn from Wimbledon 2022

"ದುರದೃಷ್ಟವಶಾತ್, ನೀವು ಊಹಿಸುವಂತೆ, ನಾನು ಇಲ್ಲಿದ್ದರೆ, ನಾನು ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಗಿರುವುದರಿಂದ" ಎಂದು ಗುರುವಾರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ನಡಾಲ್ ಹೇಳಿದರು.

ನಡಾಲ್ ಗುರುವಾರ ಅಭ್ಯಾಸ ಕೋರ್ಟ್‌ಗಳಲ್ಲಿ ಸ್ಪರ್ಧಿಸುವ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಕಾಣಿಸಿಕೊಂಡರು ಆದರೆ ಪೂರ್ಣ ಶಕ್ತಿಯಲ್ಲಿ ಆಟವಾಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಪರೀಕ್ಷೆಗಳು 7 ಎಂಎಂ ಕಿಬ್ಬೊಟ್ಟೆಯ ಸೆಳೆತ, ನೋವನ್ನು ಉಲ್ಭಣಗೊಂಡಿರುವುದನ್ನು ದೃಢಪಡಿಸಿದ್ದವು.

ಭಾನುವಾರ ನಡೆಯಲಿರುವ ಚಾಂಪಿಯನ್‌ಶಿಪ್‌ಗಾಗಿ ಚೊಚ್ಚಲ ಫೈನಲ್ ಪ್ರವೇಶಿಸಿರುವ ಕರ್ಗಿಯೋಸ್ ಅವರು ನೊವಾಕ್ ಜೊಕೊವಿಕ್ ಅಥವಾ ಕ್ಯಾಮ್ ನಾರಿ ಅವರನ್ನು ಎದುರಿಸಲಿದ್ದಾರೆ. ಮಹಿಳೆಯರ ಅಂತಿಮ ಹಣಾಹಣಿಯಲ್ಲಿ ಎಲೆನಾ ರಿಬಾಕಿನಾ ಹಾಗೂ ಆನ್ಸ್ ಜಬೇರ್ ಸೆಣಸಲಿದ್ದಾರೆ.

ವಿಂಬಲ್ಡನ್ 2022 ನೋಡುವುದು ಎಲ್ಲಿ? ಹೇಗೆ?
ಟಿವಿ: ಸ್ಟಾರ್ ಸ್ಪೋರ್ಟ್ಸ್ ಸಮೂಹ ಜಾಲದಲ್ಲಿ ನೇರ ಪ್ರಸಾರವಾಗಲಿದೆ.
ಆನ್ ಲೈನ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ ಸ್ಟಾರ್
ಫೈನಲ್ ಪಂದ್ಯ: ವಿಂಬಲ್ಡನ್ 2022ರ ಫೈನಲ್ ಪಂದ್ಯ ಜುಲೈ 9(ಮಹಿಳೆ) ಹಾಗೂ ಜುಲೈ 10(ಪುರುಷ)ರಂದು ನಡೆಯಲಿದೆ.

ಆಲ್ ಇಂಗ್ಲೆಂಡ್ ಕ್ಲಬ್ ತೆಗೆದುಕೊಂಡ ನಿರ್ಣಯದಂತೆ ರಷ್ಯಾದ ಆಟಗಾರರಿಗೆ ನಿರ್ಬಂಧ ವಿಧಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದು, ಯುದ್ಧದ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಇನ್ನು ವಿಶ್ವ ನಂ.2 ಸೀಡ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಗಾಯಗೊಂಡಿದ್ದು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಜೂನ್ 27, ದಿಂದ ಅಧಿಕೃತವಾಗಿ ಪಂದ್ಯಾವಳಿಗಳು ಆರಂಭಗೊಂಡಿದ್ದು, ಸುಮಾರು 128 ಪುರುಷ ಹಾಗೂ 128 ಮಹಿಳಾ ಆಟಗಾರರು ಪಾಲ್ಗೊಂಡಿದ್ದರು.

English summary
Rafael Nadal has withdrawn from Wimbledon 2022: Nadal has an abdominal injury and says he won't play his semifinal match against Nick Kyrgios on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X