IPL Auction 2024: ಈ ಇಬ್ಬರು ಆಟಗಾರರು ₹14 ಕೋಟಿಗಿಂತ ಹೆಚ್ಚು ಬೆಲೆ ಪಡೆಯಲಿದ್ದಾರೆ: ಅಶ್ವಿನ್
ಡಿಸೆಂಬರ್ 19ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಹರಾಜಿನಲ್ಲಿ ಆಸ್ಟ್ರೇಲಿಯಾದ ಬೌಲಿಂಗ್ ಜೋಡಿ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ₹14 ಕೋಟಿಗಿಂತ ಹೆಚ್ಚಿನ ಬೆಲೆ ಪಡೆಯಬಹುದು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಪೇಸ್ ಜೋಡಿ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಹರಾಜಿನಲ್ಲಿ 14 ಕೋಟಿ ರೂ. ಪಡೆಯಬಹುದು ಎಂದು ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗ ಅಶ್ವಿನ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಾಜಿನ ಬಗ್ಗೆ ವಿವಿಧ ಮುನ್ಸೂಚನೆಗಳನ್ನು ನೀಡಿದ್ದಾರೆ. ಸ್ಟಾರ್ಕ್ ಮತ್ತು ಕಮ್ಮಿನ್ಸ್ ಇಬ್ಬರೂ ತಮ್ಮ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾರತದಲ್ಲಿ ಚಾಂಪಿಯನ್ ಆದ ಬಳಿಕ ಭಾರಿ ಹಣ ಪಡೆಯಬಹುದು ಎಂದು ಹೇಳಿದರು. ಆಲ್‌ರೌಂಡರ್ ಶಾರುಖ್ ಖಾನ್ ಕೂಡ 10-14 ಕೋಟಿ ರೂ. ಪಡೆಯಬಹುದು ಎಂದು ಹೇಳಿದ್ದಾರೆ. 2024ರ ಮಿನಿ ಹರಾಜಿಗೆ ಮುನ್ನ ಪಂಜಾಬ್ ಕಿಂಗ್ಸ್ ಅವರನ್ನು ಬಿಡುಗಡೆ ಮಾಡಿದೆ.
ಹಲವು ಆಟಗಾರರ ಬೆಲೆ ಅಂದಾಜಿಸಿದ ಅಶ್ವಿನ್
ಉಳಿದ ಪ್ರಮುಖ ಆಟಗಾರರ ಹರಾಜಿನ ಬೆಲೆಯನ್ನು ಕೂಡ ಅಶ್ವಿನ್ ಅಂದಾಜಿಸಿದ್ದಾರೆ. ನ್ಯೂಜಿಲೆಂಡ್‌ನ ಆಲ್‌ರೌಂಡರ್ ಬೆಂಗಳೂರು ಮೂಲಕ ಆಟಗಾರ ರಚಿನ್ ರವೀಂದ್ರ ₹4-₹7 ಕೋಟಿ ರೂ. ಪಡೆಯಬಹುದು ಎಂದು ಅಂದಾಜಿಸಿದ್ದಾರೆ.
ಆರ್ ಸಿಬಿ ಬಿಡುಗಡೆ ಮಾಡಿರುವ ವೇಗಿ ಹರ್ಷಲ್ ಪಟೇಲ್ ಅವರು 7-10 ಕೋಟಿ ರೂ.ಗೆ ಹರಾಜಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವೇಗಿ ಗೆರಾಲ್ಡ್ ಕೋಟ್ಜಿ ಕೂಡ 7-10 ಕೋಟಿ ರೂಪಾಯಿ ಪಡೆಯವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ವೆಸ್ಟ್ ಇಂಡೀಸ್‌ನ ರೋವ್ಮನ್ ಪೊವೆಲ್ 4 ರಿಂದ 7 ಕೋಟಿಗಳನ್ನು ಪಡೆಯುತ್ತಾರೆ ಎಂದು ಅಶ್ವಿನ್ ಅಂದಾಜಿಸಿದ್ದಾರೆ.
ಅಚ್ಚರಿ ಎನ್ನುವಂತೆ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ 4 ಕೋಟಿ ರೂಪಾಯಿ ಪಡೆದರೆ ಹೆಚ್ಚು ಎನ್ನುವಂತೆ ಹೇಳಿದ್ದಾರೆ. ಭಾರತದ ಅನುಭವಿ ವೇಗದ ಬೌಲರ್ ಉಮೇಶ್ ಯಾದವ್ ಕೂಡ 4-7 ಕೋಟಿ ರೂಪಾಯಿ ಪಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಇನ್ನು ಆರ್ ಸಿಬಿ ತಂಡ ಬಿಡುಗಡೆ ಮಾಡಿದ ಶ್ರೀಲಂಕಾದ ಬೌಲಿಂಗ್ ಆಲ್‌ರೌಂಡರ್ ವನಿಂದು ಹಸರಂಗ ಕೂಡ 10-14 ಕೋಟಿ ರೂಪಾಯಿಗೆ ಹರಾಜಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.












Click it and Unblock the Notifications