RCB vs CSK: ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅದೃಷ್ಟ ದೇವತೆ; ನಿಂದಿಸಿದವರಿಗೆ ಅಪ್ಪು ಫ್ಯಾನ್ಸ್ ತಿರುಗೇಟು

ಐಪಿಎಲ್ ಇತಿಹಾಸದಲ್ಲೇ ಇದು ಚಿನ್ನದ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಮೊದಲು ಎಂಟು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿಕ ಆರು ಪಂದ್ಯಗಳನ್ನು ಸತತವಾಗಿ ಗೆದ್ದು ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ.

ಆರ್ ಸಿಬಿ ಮೊದಲು ಸತತವಾಗಿ ಸೋತಾಗ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಸತತ ಸೋಲುಗಳು ಬಂದಾಗ ಕೋಪ ಬಂದು, ಟೀಕಿಸುವುದು ಸಹಜ. ಆದರೆ ಕೆಲವು ಕಿಡಿಗೇಡಿಗಳು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ನಿಂದಿಸಿದ್ದರು.

Puneeth Rajkumar Fans Respond to Trolls Abusing Ashwini Puneeth After RCB Qualifies for Playoffs

ಅಶ್ವಿನಿ ಪುನೀತ್ ರಾಜ್‌ಕುಮಾರ್ ಐಪಿಎಲ್‌ ಆರಂಭಕ್ಕೆ ಮುನ್ನ ನಡೆದ ಆರ್ ಸಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರ್ ಸಿಬಿ ಜೆರ್ಸಿ ಬಿಡುಗಡೆ ವೇಳೆ ಅಶ್ವಿನಿ ಪುನೀತ್ ಹಾಜರಿದ್ದರು. ಅಶ್ವಿನಿ ಪುನೀತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಆರ್ ಸಿಬಿ ಸೋಲಿಗೆ ಕಾರಣ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಕೆಲವರ ಇಂತಹ ಹೀನ ವರ್ತನೆ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅಪ್ಪು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರು ಕೂಡ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದರು. ಚಿತ್ರರಂಗದ ಅನೇಕರು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಇವಾಗ ಎಲ್ಲಿದ್ದೀರಪ್ಪಾ ನೀವು?

ಟೂರ್ನಿಯಿಂದಲೇ ಹೊರಬಿದ್ದರು ಎನ್ನುವಾಗ ಆರ್‌ಸಿಬಿ ಫೀನಿಕ್ಸ್‌ನಂತೆ ಮೇಲೆದ್ದು ಬಂದಿದೆ. ಸತತವಾಗಿ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಐಪಿಎಲ್ ಇತಿಹಾಸದಲ್ಲೇ ಇದು ಶ್ರೇಷ್ಠ ಕಮ್‌ಬ್ಯಾಕ್‌ ಎಂದು ಹೇಳಲಾಗಿದೆ.

ಆರ್‌ಸಿಬಿ ಸತತವಾಗಿ ಗೆದ್ದಿದೆ, ಶನಿವಾರ ಸಿಎಸ್‌ಕೆ ವಿರುದ್ಧ 27 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಈಗ ಅಪ್ಪು ಅಭಿಮಾನಿಗಳು ಹಳೆಯದನ್ನು ನೆನಪಿಸಿಕೊಂಡಿದ್ದಾರೆ.

ಅಂದು ಅತ್ತಿಗೆಯನ್ನು ಬೈದವರು ಎಲ್ಲಿದ್ದೀರಾ ಎಂದು ಕೇಳಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅದೃಷ್ಟ ದೇವತೆ. ಅದಕ್ಕೆ ಆರ್ ಸಿಬಿ ಸತತವಾಗಿ ಗೆದ್ದು ಪ್ಲೇಆಫ್‌ಗೆ ಪ್ರವೇಶಿಸಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+