Karnataka vs Baroda: ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿರುವ ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್

ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವ ಕರ್ನಾಟಕ, ಜನವರಿ 11ರಂದು ಶನಿವಾರ ಬರೋಡಾ ವಿರುದ್ಧ ಆಡಲಿದೆ. ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ಗೆಲುವಿನ ವಿಶ್ವಾಸದಲ್ಲಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಮತ್ತಷ್ಟು ಬಲ ಬಂದಿದ್ದು ಮತ್ತಿಬ್ಬರು ಪ್ರಮುಖ ಆಟಗಾರರು ತಂಡವನ್ನು ಸೇರಿಕೊಂಡಿದ್ದಾರೆ.

ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಫಾರ್ಮ್‌ನಲ್ಲಿದ್ದು ಕರ್ನಾಟಕದ ಬ್ಯಾಟಿಂಗ್ ಬಲಿಷ್ಠವಾಗಿದೆ. ಮಯಾಂಕ್ ಮಾತ್ರವಲ್ಲದೆ ಸ್ಮರಣ್ ರವಿಚಂದ್ರನ್, ಅನೀಶ್ ಕೆವಿ, ಅಭಿನವ್ ಮನೋಹರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

Prasidh and devdutt karnataka vijay hazare trophy quarter final

ಪ್ರಸಿದ್ಧ್, ಪಡಿಕ್ಕಲ್ ಸೇರ್ಪಡೆ

ಬಲಿಷ್ಠವಾಗಿರುವ ಕರ್ನಾಟಕ ತಂಡಕ್ಕೆ ಮತ್ತಷ್ಟು ಬಲ ತುಂಬಲು ಮತ್ತಿಬ್ಬರು ಸ್ಟಾರ್ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಡಿದ್ದ ಪ್ರಸಿದ್ಧ್ ಕೃಷ್ಣ ಮತ್ತು ದೇವದತ್ ಪಡಿಕ್ಕಲ್ ಭಾರತಕ್ಕೆ ವಾಪಸಾಗಿದ್ದು ಈಗಾಗಲೇ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಂಡದ ಬಲ ಮತ್ತಷ್ಟು ಹೆಚ್ಚಾಗಿದೆ. ವೈಶಾಖ್ ವಿಜಯ್ ಕುಮಾರ್ ಗಾಯಗೊಂಡಿದ್ದು ಪ್ರಸಿದ್ಧ್ ಕೃಷ್ಣ ವಾಪಸಾಗಿರುವುದು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.

ದೇವದತ್ ಪಡಿಕ್ಕಲ್ ಕೂಡ ತಂಡವನ್ನು ಸೇರಿಕೊಂಡಿದ್ದು ಬ್ಯಾಟಿಂಗ್‌ಗೆ ಮತ್ತಷ್ಟು ಬಲ ತಂದಿದೆ. ಆದರೆ ದೇವದತ್ ಪಡಿಕ್ಕಲ್‌ಗೆ ಯಾರು ಸ್ಥಾನ ಬಿಟ್ಟುಕೊಡುತ್ತಾರೆ ಎನ್ನುವ ಪ್ರಶ್ನೆ ಎದುರಾಗಿದೆ.

ಕರ್ನಾಟಕ ತಂಡ: ನಿಕಿನ್ ಜೋಸ್, ಮಯಾಂಕ್ ಅಗರ್ವಾಲ್ (ನಾಯಕ), ಅನೀಶ್ ಕೆವಿ, ಸ್ಮರಣ್ ರವಿಚಂದ್ರನ್, ಕೆ ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಶ್ರೇಯಸ್ ಗೋಪಾಲ್, ಅಭಿಲಾಶ್ ಶೆಟ್ಟಿ, ವಿದ್ಯಾಧರ್ ಪಾಟೀಲ್, ವಾಸುಕಿ ಕೌಶಿಕ್, ಪ್ರವೀಣ್ ದುಬೆ, ಮನೋಜ್ ಭಾಂಡಗೆ, ಲವ್ನಿತ್ ಸಿಸೋಡಿಯಾ, ಕಿಶನ್ ಬೆದರೆ, ವಿಜಯ್ ಕುಮಾರ್ ವೈಶಾಖ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್.

ಬರೋಡಾ ತಂಡ: ಶಾಶ್ವತ್ ರಾವತ್, ನಿನಾದ್ ಅಶ್ವಿನ್‌ಕುಮಾರ್ ರಥ್ವಾ, ಅತಿತ್ ಶೇಠ್, ಕೃನಾಲ್ ಪಾಂಡ್ಯ (ನಾಯಕ), ಹಾರ್ದಿಕ್ ಪಾಂಡ್ಯ, ವಿಷ್ಣು ಸೋಲಂಕಿ (ವಿಕೆಟ್ ಕೀಪರ್), ಶಿವಾಲಿಕ್ ಶರ್ಮಾ, ಮಹೇಶ್ ಪಿಥಿಯಾ, ಭಾರ್ಗವ್ ಭಟ್, ರಾಜ್ ಲಿಂಬಾನಿ, ಲುಕ್ಮಾನ್ ಮೇರಿವಾಲಾ, ಬಾಬಾಶಾಫಿ ಪಠಾಣ್, ಆಕಾಶ್ ಕೋಹ್ಲಿ, ಪಠಾಣ್, ಆಕಾಶ್ ಮಹಾರಾಜ್ ಸಿಂಗ್, ಪಾರ್ಥ್ ಕೊಹ್ಲಿ, ಜ್ಯೋತ್‌ಸ್ನಿಲ್ ಸಿಂಗ್, ಅಮಿತ್ ಪಾಸ್ಸಿ, ಲಕ್ಷಿತ್ ಟೋಕ್ಸಿಯಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+