Get Updates
Get notified of breaking news, exclusive insights, and must-see stories!

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಸೇರಿದಂತೆ ಇತರ ಕ್ರಿಕೆಟ್‌ ಪಂದ್ಯಗಳು ಬ್ಯಾನ್‌ ಸಾಧ್ಯತೆ

Chinnaswamy Stadium: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಗಲ್ಲುವ ಮೂಲಕ ಆರ್‌ಸಿಬಿ 17 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿ ಟ್ರೋಫಿಗೆ ಮುತ್ತಿಟ್ಟಿತು. ಆದರೆ, ಮಾರನೇ ದಿನ ಜೂನ್‌ 4ರಂದು ಇದೇ ಖುಷಿಯಲ್ಲಿ ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡಿದ್ದರು. ಈ ದುರಂತವೇ ಇದೀಗ ಚಿನ್ನಸ್ವಾಮಿಗೆ ದೊಡ್ಡ ಮುಳುವಾಗುವ ಪರಿಸ್ಥಿಗೆ ತಂದಿಟ್ಟಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ ಈ ಕೊರಗನ್ನು 18ನೇ ಸೀಸನ್‌ನಲ್ಲಿ ನೀಗಿಸಿತು. ಆದರೆ, ಕಾಲ್ತುಳಿತ ದುರಂತದಿಂದ ಆರ್‌ಸಿಬಿಗೆ ಕಪ್ಪುಚುಕ್ಕೆ ಆಗುವುದಲ್ಲದೆ, ಇದೀಗ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಮುಳುವಾಗುವ ಪರಿಸ್ಥಿತಿ ಎದುರಾಗಿದೆ.

Possibility of Relocating IPL and Other Matches from Chinnaswamy Stadium

ಹೌದು..ಎಂ.ಚಿನ್ನಸ್ವಾಮಿ ಬಳಿಕ ಸಂಭವಿಸಿದ ಕಾಲ್ತುಳಿತದಿಂದ ಇಲ್ಲಿ ಯಾವ ಪಂದ್ಯಗಳನ್ನು ಆಡಿಸುವುದು ಸೂಕ್ತವಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಹ ಈ ಕ್ರೀಡಾಂಗಣ ದೊಡ್ಡ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಹಾಗೂ ಅಸುರಕ್ಷಿತ ಎಂದು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಆಯೋಗದ ವರದಿಗಳು ತಿಳಿಸಿವೆ.

ಐಪಿಎಲ್‌ ಫೈನಲ್‌ ಪಂದ್ಯ ಅಹಮದಬಾದ್‌ನಲ್ಲಿರುವ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜೂನ್‌ 3ರಂದು ನಡೆದಿದ್ದು, ಈ ವೇಳೆ ಆರ್‌ಸಿಬಿ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಈ ಹಿನ್ನೆಲೆ ಮಾರನೇ ದಿನ ಜೂನ್‌ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಬಳಿ ಕಾಲ್ತುಳಿತ ದುರಂತ ನಡೆದಿತ್ತು.

ಮಾಹಿತಿ ಪ್ರಕಾರ, ಆಯೋಗದ ವರದಿಯು ಸ್ಥಳದ ವಿನ್ಯಾಸ ಮತ್ತು ರಚನೆ ದೊಡ್ಡ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ಹೇಳಿದೆ. ಇಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಾರ್ವಜನಿಕ ಸುರಕ್ಷತೆ, ನಗರದ ಟ್ರಾಫಿಕ್‌ ಮತ್ತು ತುರ್ತು ಸಿದ್ಧತೆಗೆ ಸ್ವೀಕಾರಾರ್ಹವಲ್ಲದ ಅಪಾಯಗಳನ್ನು ತಂದೊಡ್ಡುತ್ತದೆ ಎಂದು ಅದು ಎಚ್ಚರಿಕೆ ನೀಡಿದೆ.

ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಳ್ಳಲ್ಪಟ್ಟ ವರದಿಯಲ್ಲಿ, ಜುಲೈ 4ರಂದು ನಡೆದ ಕಾಲ್ತುಳಿತದಲ್ಲಿ ಆರ್‌ಸಿಬಿ, ಫ್ರಾಂಚೈಸಿಯ ಈವೆಂಟ್ ಪಾಲುದಾರರಾದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಮತ್ತು ಕೆಎಸ್‌ಸಿಎ ಅವರ ಪಾತ್ರವಿದೆ ಎಂದು ಆರೋಪ ಮಾಡಲಾಗಿದೆ. ಆರ್‌ಸಿಬಿ 18 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಟ್ರೋಫಿ ಗೆದ್ದ ಮರುದಿನವೇ ಈ ದುರಂತ ಸಂಭವಿಸಿತ್ತು.

ವರದಿಯು ವ್ಯವಸ್ಥಿತ ಮಿತಿಗಳನ್ನು ಉಲ್ಲೇಖಿಸಿದೆ ಮತ್ತು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಅವುಗಳಿಗೆ ಉತ್ತಮವಾಗಿ ಸೂಕ್ತವಾದ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಶಿಫಾರಸು ಮಾಡಿದೆ. ಮುಂದಿನ ದಿನಗಳಲ್ಲಿ ಯಾವುದೇ ಸ್ಥಳವು ಅಂತಾರರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಬೇಕೆಂದು ESPNCricinfo ಉಲ್ಲೇಖಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಇಲ್ಲಿ ಪಂದ್ಯಗಳು ನಡೆಯೋದೇ ಡೌಟ್‌: ಸೆಪ್ಟೆಂಬರ್ 30ರಿಂದ ನವೆಂಬರ್ 2ರ ವರೆಗೆ ನಡೆಯಲಿರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ಮತ್ತು ಸೆಮಿಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವುದು ಅನುಮಾನ ಆಗಿದೆ. ಜೊತೆಗೆ ಕೆಎಸ್‌ಸಿಎ ತನ್ನ ರಾಜ್ಯ ಟಿ-20 ಲೀಗ್, ಮಹಾರಾಜ ಟ್ರೋಫಿಯನ್ನು ಆಗಸ್ಟ್ 11ರಿಂದ ಇದೇ ಮೈದಾನದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದು, ಇದಕ್ಕೆ ಪ್ರೇಕ್ಷಕರಿಗೆ ಪ್ರವೇಶ ಇರುವುದಿಲ್ಲ.

1974ರಲ್ಲಿ ನಿರ್ಮಾಣ ಮಾಡಲಾದ ಚಿನ್ನಸ್ವಾಮಿ ಕ್ರೀಡಾಂಗಣವು, ಸಾರ್ವಜನಿಕ ರಸ್ತೆಗಳಿಂದ ಬೇರ್ಪಟ್ಟ ಉದ್ದೇಶಿತ ಸರತಿ ಸಾಲು ಮತ್ತು ಸಂಚಾರ ಪ್ರದೇಶಗಳು, ಸಾಮೂಹಿಕ ಪ್ರವೇಶ ಮತ್ತು ನಿರ್ಗಮನವನ್ನು ನಿರ್ವಹಿಸಲು ಸಾಕಷ್ಟು ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಸಾರ್ವಜನಿಕ ಸಾರಿಗೆ ಮತ್ತು ಹತ್ತಿರದ ಪ್ರವಾಸಿ ಕೇಂದ್ರಗಳಿಗೆ ಸಮಗ್ರ ಪ್ರವೇಶ, ಜಾಗತಿಕ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಸಮಗ್ರ ತುರ್ತು ಸ್ಥಳಾಂತರಿಸುವ ಯೋಜನೆಗಳು ಮತ್ತು ಹೆಚ್ಚಿನ ಸಂಖ್ಯೆಯ ಪಾಲ್ಗೊಳ್ಳುವವರಿಗೆ ಅವಕಾಶ ಕಲ್ಪಿಸಲು ಸಾಕಷ್ಟು ಪಾರ್ಕಿಂಗ್ ಮತ್ತು ಡ್ರಾಪ್-ಆಫ್ ಸೌಲಭ್ಯಗಳುನಂತಹ ವ್ಯವಸ್ಥೆಗಳನ್ನು ಹೊಂದಿಲ್ಲ ಎಂದು ತಿಳಿಸಿದೆ.

ಇದನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಆರಂಭ ಆಗುವ ಯಾವುದೇ ಕ್ರಿಕೆಟ್‌ ಪಂದ್ಯಗಳು ಇಲ್ಲಿ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಅಲ್ಲದೆ, ಒಂದು ವೇಳೆ ಹೀಗಾದ್ರೆ, ಮುಂದಿನ ಆವೃತ್ತಿಯಿಂದ ಆರ್‌ಸಿಬಿಗೆ ಬೇರೆ ಕಡೆ ತವರು ಮೈದಾನದ ವ್ಯವಸ್ಥೆ ಮಾಡಲಾಗುತ್ತದೆ. ಮತ್ತೊಂದೆಡೆ ಎಂ.ಚಿನ್ನಸ್ವಾಮಿ ಮೈದಾನ ತುಂಬಾ ನಷ್ಟ ಎದುರಿಸಲಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+