Rishabh Pant: ರಿಷಬ್ ಪಂತ್‌ಗೆ ಅದೇ ದೊಡ್ಡ ಸಮಸ್ಯೆಯಾಗಿದೆ ಎಂದ ಮಾಜಿ ಕ್ರಿಕೆಟಿಗ
2025ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಈವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದಿದ್ದು ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಬರೋಬ್ಬರಿ 27 ಕೋಟಿ ರೂಪಾಯಿಗೆ ಎಲ್‌ಎಸ್‌ಜಿ ತಂಡಕ್ಕೆ ಹರಾಜಾಗಿರುವ ರಿಷಬ್ ಪಂತ್ ಈ ಬಾರಿ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದು, ನಾಯಕರಾಗಿ ಅವರ ಮೇಲಿದ್ದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ಈವರೆಗೆ ವಿಫಲವಾಗಿದ್ದಾರೆ.
ಮೂರು ಪಂದ್ಯಗಳಲ್ಲಿ ಪಂತ್ ನಾಯಕತ್ವದಲ್ಲಿ ಮಾತ್ರವಲ್ಲ ಕೀಪಿಂಗ್‌ನಲ್ಲಿ ಹಾಗೂ ಬ್ಯಾಟಿಂಗ್‌ನಲ್ಲೂ ವಿಫಲವಾಗಿದ್ದರು. ಮೊದಲ ಪಂದ್ಯದಲ್ಲಿ ರನ್ ಗಳಿಸುವ ಮುನ್ನವೇ ಔಟ್ ಆಗಿದ್ದ ಅವರು, ಎರಡನೇ ಪಂದ್ಯದಲ್ಲಿ 15 ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 2 ರನ್ ಗಳಿಸಿ ಔಟಾಗಿದ್ದಾರೆ. ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ ವಿಫಲವಾಗುತ್ತಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ.

ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೀನಾಯ ಸೋಲಿನ ಬಳಿಕ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಪಂತ್ ಅವರೊಂದಿಗೆ ತೀವ್ರವಾದ ಫ್ರಾಂಚೈಸಿಯ ನಿಧಾನಗತಿಯ ಆರಂಭದ ನಂತರ ಪಂತ್ ಅವರ ಆಟದ ಬಗ್ಗೆ ಟೀಕಿಸಿದರು.
ಪಂತ್‌ಗೆ ದುಬಾರಿ ಮೊತ್ತವೇ ಸಮಸ್ಯೆಯಾ?
ಐಪಿಎಲ್ 2025 ರಲ್ಲಿ ಪಂತ್ ಅವರನ್ನು ಎಲ್‌ಎಸ್‌ಜಿ 27 ಕೋಟಿ ರೂಪಾಯಿಗೆ ಖರೀದಿಸುವ ಮೂಲಕ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಆದರೂ, ಭಾರತದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ಪ್ರಕಾರ ಪಂತ್ ಕಳಪೆ ಪ್ರದರ್ಶನಕ್ಕೆ ಅವರು ದುಬಾರಿ ಮೊತ್ತಕ್ಕೆ ಹರಾಜಾಗಿದ್ದು ಕಾರಣವಲ್ಲ ಎಂದಿದ್ದಾರೆ.
ರಿಷಬ್ ಪಂತ್ ಅವರ ಬಗ್ಗೆ ಗೊತ್ತಿದೆ, ಅವರ ಮೇಲೆ ದುಬಾರಿ ಹರಾಜು ಪರಿಣಾಮ ಬೀರುತ್ತಿದೆ ಎಂದು ನಾನು ಭಾವಿಸುವುದಿಲ್ಲ. ಆದರೂ, ಅವರು ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿಲ್ಲ. ಅವರು ಭಾರತೀಯ ವೈಟ್-ಬಾಲ್ ತಂಡದಿಂದ ಹೊರಗಿದ್ದಾರೆ ಮತ್ತು ಈ ಪಂದ್ಯಾವಳಿಗೆ ಫ್ರಾಂಚೈಸಿಯ ನಾಯಕನಾಗಿ ಬಂದಿರುವುದರಿಂದ, ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಕಳೆದ ವರ್ಷ ಸಾಕಷ್ಟು ಸಂಭವಿಸಿದೆ, ಈ ಆವೃತ್ತಿಯಲ್ಲಿ ಅವರಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಲಾಗಿತ್ತು ಎಂದು ಪಿಯೂಷ್ ಚಾವ್ಲಾ ಜಿಯೋಸ್ಟಾರ್‌ನಲ್ಲಿ ಹೇಳಿದರು.
"ದುರದೃಷ್ಟವಶಾತ್, ಅವರ ತಂಡದ ಅಭಿಯಾನ ಮತ್ತು ಅವರ ವೈಯಕ್ತಿಕ ಫಾರ್ಮ್ ಎರಡೂ ಉತ್ತಮವಾಗಿ ಆರಂಭವಾಗಿಲ್ಲ. ಪಂಜಾಬ್ ವಿರುದ್ಧ ಅವರು ಔಟಾದ ರೀತಿ ನಿರಾಶಾಯದಾಯಕಾಗಿತ್ತು." ಎಂದು ಹೇಳಿದರು.
ಮೂರು ಪಂದ್ಯಗಳಲ್ಲಿ ಎರಡು ಸೋಲುಗಳ ನಂತರ ಎಲ್‌ಎಸ್‌ಜಿ ಪಾಯಿಂಟ್‌ಗಳಲ್ಲಿ 6 ನೇ ಸ್ಥಾನದಲ್ಲಿದೆ. ಅವರು ಈಗ ಶುಕ್ರವಾರ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಸೆಣಸಲಿದ್ದಾರೆ.












Click it and Unblock the Notifications