PBKS Vs RR: ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್; ರಾಜಸ್ಥಾನ್ ರಾಯಲ್ಸ್‌ಗೆ ರೋಚಕ ಜಯ

ಐಪಿಎಲ್ 2024ರ ಪಂಜಾಬ್ ಕಿಂಗ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 3 ವಿಕೆಟ್‌ಗಳ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತಿದ್ದ ರಾಜಸ್ಥಾನ ಮತ್ತೆ ಗೆಲುವಿನ ಹಾದಿಗೆ ಮರಳಿದೆ.

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಾಯದ ಕಾರಣ ಜೋಸ್ ಬಟ್ಲರ್ ಮತ್ತು ರವಿಚಂದ್ರನ್ ಅಶ್ವಿನ್ ತಂಡದಿಂದ ಹೊರಗುಳಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಕಲೆಹಾಕಿತು.

PBKS Vs RR Hetmyer Leads Rajasthan Royals to Last-Over Victory Against Punjab Kings

ಶಿಖರ್ ಧವನ್ ಗಾಯಗೊಂಡಿದ್ದ ಕಾರಣ ಸ್ಯಾಮ್ ಕರನ್ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆಶುತೋಷ್ ಶರ್ಮಾ 16 ಎಸೆತಗಳಲ್ಲಿ 31 ರನ್ ಗಳಿಸಿದ್ದೆ ಅವರ ತಂಡದ ದೊಡ್ಡ ಸ್ಕೋರ್ ಆಗಿತ್ತು. ಜಿತೇಶ್ ಶರ್ಮಾ 29, ಲಿಯಾಮ್ ಲಿವಿಂಗ್‌ ಸ್ಟೋನ್ 21 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಅಥರ್ವ ಟೈಡೆ 15 ರನ್, ಜಾನಿ ಬೈರ್ ಸ್ಟೋ 15 ರನ್, ಪ್ರಭ್‌ಸಿಮ್ರನ್ ಸಿಂಗ್ 10 ರನ್ ಗಳಿಸಿದರು. ಆವೇಶ್ ಖಾನ್, ಕೇಶವ್ ಮಹಾರಾಜ್ ತಲಾ ಎರಡು ವಿಕೆಟ್ ಪಡೆದು ಪಂಜಾಬ್ ಕಿಂಗ್ಸ್ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್ ಮತ್ತು ಚಾಹಲ್ ತಲಾ 1 ವಿಕೆಟ್ ಪಡೆದರು.

ರೋಚಕ ಗೆಲುವು ಪಡೆದ ರಾಜಸ್ಥಾನ

148 ರನ್‌ಗಳ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಸಾಧಾರಣ ಆರಂಭ ಪಡೆಯಿತು. ಯಶಸ್ವಿ ಜೈಸ್ವಾಲ್ 28 ಎಸೆತಗಳಲ್ಲಿ 39 ರನ್ ಗಳಿಸಿದರೆ, ತನುಷ್ ಕೊಟ್ಯಾನ್ 31 ಎಸೆತಗಳಲ್ಲಿ 24 ರನ್ ಗಳಿಸಿದರು. ನಾಯಕ ಸಂಜು ಸ್ಯಾಮ್ಸನ್ 14 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು.

ರಿಯಾನ್ ಪರಾಗ್ 28 ರನ್, ಧ್ರುವ್ ಜುರೆಲ್ 6 ರನ್ ಗಳಿಸಿ ಔಟಾದ ಬಳಿಕ ರಾಜಸ್ಥಾನ್ ರಾಯಲ್ಸ್ ಪಾಳಯದಲ್ಲಿ ಸೋಲಿನ ಆತಂಕ ಶುರುವಾಗಿತ್ತು. ಆದರೆ ರೋವ್ಮನ್ ಪೊವೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ತಂಡದ ಆತಂಕ ದೂರ ಮಾಡಿದರು.

ಪೊವೆಲ್ 5 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ಕೇಶವ್ ಮಹಾರಾಜ್ 1 ರನ್ ಗಳಿಸಿ ಔಟಾದರು. ಕೊನೆಯ 4 ಎಸೆತಗಳಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 10 ರನ್ ಬೇಕಿತ್ತು. ಶಿಮ್ರಾನ್ ಹೆಟ್ಮೆಯರ್ 6, 2, 6 ರನ್ ಗಳಿಸುವ ಮೂಲಕ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದ ರಾಜಸ್ಥಾನ ರಾಯಲ್ಸ್ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಭದ್ರಪಡಿಸಿಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+