Paris Olympics: ಸೆಮೀಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡ ಇಂದು ಕಣಕ್ಕೆ: ಮಂಗಳವಾರದ ವೇಳಾ ಪಟ್ಟಿ
ಪ್ಯಾರಿಸ್ ಅಂಗಳದಲ್ಲಿ ಸೋಮವಾರ ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಸೆ ಕಾದಿತ್ತು. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಪದಕದ ಸುತ್ತಿನ ಪಂದ್ಯದಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಲಕ್ಷ್ಯ ಸೇನ್ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಮಲೇಷ್ಯಾ ಆಟಗಾರನ ವಿರುದ್ಧ ಸೋಲು ಕಂಡರು. ಈ ಮೂಲಕ ಪದಕ ಗೆಲ್ಲುವ ಅವರ ಆಸೆ ಮಣ್ಣು ಪಾಲಾಯಿತು. ಆದರೆ ಮುಂದಿನ ದಿನಗಳಲ್ಲಿ ಪದಕ ಗೆಲ್ಲುವ ಕ್ಷಮತೆ ಇದೆ ಎಂದು ಅವರು ಸಾಬೀತು ಪಡಿಸಿದ್ದಾರೆ.
ಮಂಗಳಾರ ಎಲ್ಲರ ಚಿತ್ತ ಭಾರತದ ಪುರುಷರ ಹಾಕಿ ತಂಡದ ಮೇಲೆ ನೆಟ್ಟಿರುತ್ತದೆ. ಮಂಗಳವಾರ ರಾತ್ರಿ 10.30ಕ್ಕೆ ಭಾರತ ಸೆಮಿಫೈನಲ್ಸ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಕಾದಾಟ ನಡೆಸಲಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾ, ಒಂದು ಗೆಲುವು ಸಾಧಿಸಿ ಪದಕಕ್ಕೆ ಹತ್ತಿರವಾಗುವ ಕನಸನ್ನು ಹರ್ಮನ್ ಪ್ರೀತ್ ಸಿಂಗ್ ಪಡೆ ಕಾಣುತ್ತಿದೆ.

ಭಾರತದ ಸ್ಟಾರ್ ಅಥ್ಲಿಟ್ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ವಿಜೇತ ನಿರಜ್ ಚೋಪ್ರಾ ಇಂದು ಅಖಾಡ ಪ್ರವೇಶಿಸಲಿದ್ದಾರೆ. 140 ಕೋಟಿ ಭಾರತೀಯರ ಕನಸನ್ನು ಹೊತ್ತು ಪ್ಯಾರಿಸ್‌ನ ಅಂಗಳದಲ್ಲಿ ಇಳಿಯಲಿದ್ದಾರೆ. ಜಾವೆಲಿನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಿರಜ್ ಅಮೋಘ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸುವ ಆಸೆಯನ್ನು ಹೊಂದಿದ್ದಾರೆ.
ಭಾರತದ ಅಥ್ಲಿಟ್‌ಗಳು ಭಾಗವಹಿಸುವ ಕ್ರೀಡೆಗಳ ವೇಳಾ ಪಟ್ಟಿ
- 1.30 PM, ಟೆಬಲ್ ಟೆನಿಸ್, ಪುರುಷರ ತಂಡ (ಭಾರತ/ ಚೀನಾ)
- 1.50 PM, ಅಥ್ಲಿಟಿಕ್ಸ್, ಪುರುಷರ ಜಾವೆಲಿನ್ ಥ್ರೋ ಅರ್ಹತೆ (ಕಿಶೋರ್ ಜೆನಾ)
- 2.30 PM, ಕುಸ್ತಿ, ಮಹಿಳೆಯರ 68 ಕೆಜಿ ಫ್ರಿ ಸ್ಟೈಲ್ (ನಿಶಾ ದಹಿಯಾ)
- 2.50 PM, ಅಥ್ಲಿಟಿಕ್ಸ್, ಮಹಿಳೆಯರ 400 ಮೀಟರ್ (ಕಿರಣ್ ಪಹಲ್)
- 3.00 PM, ಕುಸ್ತಿ, ಮಹಿಳೆಯರ 50 ಕೆಜಿ (ವಿನಿಶ್ ಪೋಗಟ್)
- 3.20 PM, ಅಥ್ಲಿಟಿಕ್ಸ್, ಪುರುಷರ ಜಾವೆಲಿನ್ ಥ್ರೋ ಅರ್ಹತೆ (ನಿರಜ್ ಚೋಪ್ರಾ)
- 4.20 PM, ಕುಸ್ತಿ, ಮಹಿಳೆಯರ 50 ಕೆ.ಜಿ ಫ್ರಿ ಸ್ಟೈಲ್
- 6.30 PM, ಟೆಬಲ್ ಟೆನಿಸ್, ಮಹಿಳೆಯರ ತಂಡ (ಭಾರತ / ಅಮೆರಿಕ)
- 10.25 PM,ಕುಸ್ತಿ, ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್
- 10.30 PM, ಹಾಕಿ, ಪುರುಷರ ಸೆಮಿಫೈನಲ್, ಭಾರತ/ ಜರ್ಮನಿ
- 12.20 AM, ಕುಸ್ತಿ, ಮಹಿಳೆಯರ 68 ಕೆಜಿ ಫ್ರಿ ಸ್ಟೈಲ್
- 12.45 AM, ಕುಸ್ತಿ, ಮಹಿಳೆಯರ 68 ಕೆಜಿ ಫ್ರಿ ಸ್ಟೈಲ್












Click it and Unblock the Notifications