ODI World Cup 2023: ಉದ್ಘಾಟನಾ ಸಮಾರಂಭ ರದ್ದು? ಅತ್ಯಂತ ಕೆಟ್ಟ ವಿಶ್ವಕಪ್‌ ಎಂದ ಅಭಿಮಾನಿಗಳು

ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಗೆ ಮುನ್ನ ಹಲವು ವಿಘ್ನಗಳು ಎದುರಾಗಿವೆ. ಭದ್ರತೆಯ ಕಾರಣಗಳಿಂದ ಮೊದಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಯಿತು. ಟಿಕೆಟ್ ಮಾರಾಟ ವಿವಾದಕ್ಕೆ ಕಾರಣವಾಯಿತು. ಪಾಕಿಸ್ತಾನ ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯ ಭದ್ರತಾ ಕಾರಣದಿಂದ ಪ್ರೇಕ್ಷಕರೇ ಇಲ್ಲದೆ ನಡೆಯಿತು. ಇಂಗ್ಲೆಂಡ್ ಆಟಗಾರರು ಪ್ರಯಾಣದ ಬಗ್ಗೆ ಅಸಮಾಧಾನ ಹೊರಹಾಕಿರುವುದು ಈ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.

ಅಕ್ಟೋಬರ್ 5 ರಂದು ಏಕದಿನ ವಿಶ್ವಕಪ್‌ ಉದ್ಘಾಟನಾ ಪಂದ್ಯ ನಡೆಯಲಿದ್ದು, ಅಕ್ಟೋಬರ್ 4ರಂದು ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಸುವುದಾಗಿ ಬಿಸಿಸಿಐ ಹೇಳಿತ್ತು, ಆದರೆ ಈಗ ವಿಶ್ವಕಪ್‌ ಉದ್ಘಾಟನಾ ಸಮಾರಂಭ ನಡೆಯುವುದು ಅನುಮಾನ ಎಂದು ವರದಿಯಾಗಿದ್ದು ಅಭಿಮಾನಿಗಳನ್ನು ಕೆರಳಿಸಿದೆ.

ODI World Cup 2023: No Opening Ceremony on October 4 Frustrates Fans

ಈ ಮೊದಲು ಬಿಸಿಸಿಐ ಅದ್ಧೂರಿಯಾಗಿ ಉದ್ಘಾಟನಾ ಸಮಾರಂಭ ಆಯೋಜಿಸಿದೆ. ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ ಎಂದು ವರದಿಯಾಗಿತ್ತು, ಆದರೆ ಈಗ ದೈನಿಕ್ ಜಾಗರಣ್ ವರದಿ ಮಾಡಿರುವ ಪ್ರಕಾರಣ ಉದ್ಘಾಟನಾ ಸಮಾರಂಭ ರದ್ದು ಮಾಡಲಾಗಿದೆ.

ನಾಳೆ ಎಲ್ಲಾ ತಂಡಗಳ ನಾಯಕರ ಸಮಾಗಮ

ಅಕ್ಟೋಬರ್ 4ರಂದು ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಲಿರುವ ಎಲ್ಲಾ 10 ತಂಡಗಳ ನಾಯಕರು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇರಲಿದ್ದಾರೆ. ನಂತರ ಲೇಸರ್ ಶೋ ನಡೆಯಲಿದೆ ಎಂದು ಹೇಳಲಾಗಿದೆ.

ಅದ್ದೂರಿ ಉದ್ಘಾಟನಾ ಸಮಾರಂಭದ ಬಲದಾಗಿ ಬಿಸಿಸಿಐ ನವೆಂಬರ್ 19ರಂದು ಸಮಾರೋಪ ಸಮಾರಂಭ ಅಥವಾ ಅಕ್ಟೋಬರ್ 14ರಂದು ಭಾರತ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮೊದಲು ಅದ್ಧೂರಿ ಸಮಾರಂಭ ನಡೆಸುವ ಯೋಜನೆ ಹೊಂದಿದೆ ಎನ್ನಲಾಗಿದೆ.

ಬಿಸಿಸಿಐ, ಜಯ್ ಶಾ ವಿರುದ್ಧ ಆಕ್ರೋಶ

ಐಸಿಸಿ ವಿಶ್ವಕಪ್‌ ಆಯೋಜನೆಯಲ್ಲಿ ಬಿಸಿಸಿಐ ಮತ್ತು ಕಾರ್ಯದರ್ಶಿ ಜಯ್‌ ಶಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬಿಸಿಸಿಐಗೆ ಹುಚ್ಚು ಹಿಡಿದಿದೆಯಾ, ಇದೊಂದು ಕೆಟ್ಟ ವಿಶ್ವಕಪ್ ಪಂದ್ಯಾವಳಿ" ಎಂದು ಕಿಡಿಕಾರಿದ್ದಾರೆ.

"ಇದೊಂದು ಕೆಟ್ಟ ವಿಶ್ವಕಪ್ ಪಂದ್ಯಾವಳಿ ಆಗಲಿದೆ. ಟಿಕೆಟ್ ಹಗರಣ ನಡೆಯಿತು, ದಿನಾಂಕ ಬದಲಾವಣೆ ಮಾಡಲಾಯಿತು, ಜಯ್‌ ಶಾ ಅವರಿಗೆ ಏನು ಹುಚ್ಚು ಹಿಡಿದಿದೆಯಾ?" ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಕ್ಟೋಬರ್ 4ರಂದು ಎಲ್ಲಾ 10 ತಂಡಗಳ ನಾಯಕರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇರಲಿದ್ದಾರೆ. ಅಭಿಮಾನಿಗಳ ಹೊರತಾಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಬಿಸಿಸಿಐನ ಉನ್ನತ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಿಸಿಸಿಐ ಮತ್ತು ಐಸಿಸಿ ಎಲ್ಲಾ ಕ್ರಿಕೆಟ್ ಮಂಡಳಿಗಳ ಉನ್ನತ ನಿರ್ವಾಹಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+