ಏಷ್ಯನ್ ಚಾಂಪಿಯನ್ ಚಿನ್ನ ಗೆದ್ದು ಕರ್ನಾಟಕದ ಕುಸ್ತಿ ಪವರ್ ತೋರಿಸಿದ ಮೊಧೋಳದ ನಿಂಗಪ್ಪ
ಬಾಗಲಕೋಟೆ, ಜೂನ್ 26: ಭಾರತ ಕುಸ್ತಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಕೆಲವು ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದಲ್ಲಿ ಹೆಸರಾದ ಕುಸ್ತಿಪಟುಗಳು ಈಗಾಗಲೇ ವಿಶ್ವಮಟ್ಟದಲ್ಲಿ ಮಿಂಚಿದ್ದಾರೆ. ಆದರೆ ಕರ್ನಾಟಕದಿಂದ ದೇಶದ ಮಟ್ಟಿಗೆ ಹೆಸರುವಾಸಿಯಾದ ಕುಸ್ತಿಪಟುಗಳ ಸಂಖ್ಯೆ ಬೆರಳೆಣಿಕೆಯಷ್ಟು ಜನ ಮಾತ್ರ. ಇದೀಗ 17 ವರ್ಷದ ಕುಸ್ತಿಪಟು ನಿಂಗಪ್ಪ ಗೆನೆಣ್ಣವರ ಕರ್ನಾಟಕದ ಕುಸ್ತಿ ಕೇಂದ್ರ ಮುಧೋಳದ ಹೆಸರನ್ನು ಇಡೀ ದೇಶಕ್ಕೆ ಪರಿಚಯಿಸಿದ್ದಾನೆ.
ಕಳೆದ ಗುರುವಾರ ನಿಂಗಪ್ಪ, ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ ಅಂಡರ್ 17 ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಬಲಿಷ್ಠ ಡಿಫೆನ್ಸ್ ಮತ್ತು ಅದ್ಭುತ ಲೆಗ್ ಅಟಾಕ್ಸ್ ಮೂಲಕ ಇರಾನ್‌ನ ಅಮಿರ್ ಮೊಹಮ್ಮದ್ ಸಲೆ ಯನ್ನು 45 ಕೆಜಿ ವಿಭಾಗದ ಫ್ರೀಸ್ಟೈಲ್‌ನಲ್ಲಿ ಬಗ್ಗಬಡಿದು ಸ್ವರ್ಣ ಗೆದ್ದರು. ಇವರ ಪದಕದ ನೆರವಿನಿಂದ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಚಾಂಪಿಯನ್ ಆಗಿ ದೇಶಕ್ಕೆ ಕೀರ್ತಿ ನಿಂಗಪ್ಪ, ಪಂಜಾಬ್, ಹರ್ಯಾಣ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶಕ್ಕೆ ಸೀಮಿತವಾಗಿ ಉಳಿದಿರುವ ಕುಸ್ತಿಯನ್ನು ಕರ್ನಾಟಕದ ಕಡೆಗೆ ತಿರುಗಿಸಿದ್ದಾರೆ.
ಕುಸ್ತಿ ಕರ್ನಾಟಕ್ಕೆ ಹೊಸದೇನಲ್ಲ. ಉತ್ತರ ಕರ್ನಾಟಕದಲ್ಲಿ ಇಂದಿಗೂ ಕುಸ್ತಿ ಆಟ ಚಾಲ್ತಿಯಲ್ಲಿದೆ. ಬಾಗಲಕೋಟೆ ಜಿಲ್ಲಿಯ ಮುಧೋಳ ಕರ್ನಾಟಕದ ಕುಸ್ತಿ ಕೇಂದ್ರವಾಗಿದೆ. ರಾಜಾ ಮಾಲೋಜಿರಾವ್ ಘೊರ್ಪಡೆ ಕಾಲದಿಂದಲೂ ಮುಧೋಳ ಭಾಗದಲ್ಲಿ ಕುಸ್ತಿ ಪ್ರಸಿದ್ದವಾಗಿದೆ. ಘೋರ್ಪಡೆ ಮಹಾರಾಜರು ತಮ್ಮ ಅವಧಿಯಲ್ಲಿ ಕುಸ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ ಪರಿಣಾಮ ಮುಧೋಳ ಭಾಗದಲ್ಲಿ ಹೆಚ್ಚು ಕಡಿಮೆ ಮನೆ ಮನೆಗೊಬ್ಬ ಕುಸ್ತಿಪಟು ಹುಟ್ಟಿಕೊಂಡಿದ್ದಾರೆ. ಪ್ರಸ್ತುತ ಅಲ್ಲಿ ಕುಸ್ತಿ ಗರಡಿ ಮನೆ, ವ್ಯಾಯಾಮಶಾಲೆಗಳ ಮೂಲಕ ಕುಸ್ತಿ ತರಬೇತಿ ನೀಡಲಾಗುತ್ತಿದೆ.

ದೇಶ ಪ್ರತಿನಿಧಿಸಿರು ಕುಸ್ತಿಪಟುಗಳು
ಸುನಿಲ್ ಪಡತಾರೆ, ಅನಿಲ್ ಘೋರ್ಪಡೆ ಅಂತಹ ಕುಸ್ತಿಪಟುಗಳು ಅಂತಾರಾಷ್ಟ್ರೀಯ ,ರಾಷ್ಟ್ರಮಟ್ಟದಲ್ಲಿ ಮಿಂಚಿರುವುದೇ ಮುಧೋಳ ಕುಸ್ತಿ ಕ್ರೀಡೆಗೆ ಪ್ರಸಿದ್ದಿ ಪಡದಿರುವುದಕ್ಕೆ ಸಾಕ್ಷಿಯಾಗಿದೆ, ಇದೀಗ ಮುಧೋಳ ನಗರದ ನಿಂಗಪ್ಪ ವಿದೇಶದಲ್ಲಿ ತೊಡೆ ತಟ್ಟಿ ತ್ರಿವರ್ಣ ಧ್ವಜ ಹಾರಿಸಿ ಬಂದಿದ್ದಾನೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಜೈ ಹನುಮಾನ ವ್ಯಾಯಾಮಶಾಲೆ ಕುಸ್ತಿ ವಿದ್ಯಾರ್ಥಿ ನಿಂಗಪ್ಪ.

ಕೂಲಿಮಾಡಿ ಮಗನ ಪ್ರತಿಭೆ ಪ್ರೋತ್ಸಾಹಿಸುತ್ತಿರುವ ಪೋಷಕರು
ನಿಂಗಪ್ಪ ಗೆನೆಣ್ಣವರ ಕಡುಬಡತನದಲ್ಲಿ ಬೆಳೆದ ಕುಸ್ತಿಪಟು, ತಂದೆ ತಾಯಿ ಈಗಲೂ ಬೇರೊಬ್ಬರ ಹೊಲದಲ್ಲಿ ಕೃಷಿಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಹಳಿಂಗಳಿ ಗ್ರಾಮದವರಾದ ನಿಂಗಪ್ಪ ಅವರ ತಂದೆ ತಾಯಿ ಅವರು ಹೊಟ್ಟೆಪಾಡಿಗಾಗಿ ಮುಧೋಳ ನಗರಕ್ಕೆ ಬಂದು ನೆಲೆಸಿದ್ದಾರೆ. ಬೇರೊಬ್ಬರ ಜಮೀನಿನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಮಗನ ಕುಸ್ತಿ ಮೇಲಿನ ಪ್ರೀತಿ ಕಂಡುತಮ್ಮ ಕಷ್ಟವನ್ನು ಲೆಕ್ಕಿಸದೇ ಪ್ರೋತ್ಸಾಹ ನೀಡುತ್ತಿದ್ದಾರೆ. ನಿಂಗಪ್ಪ ಗೆನೆಣ್ಣವರ ಮುಧೋಳ ನಗರದ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ ಏಳು ವರ್ಷಗಳ ಕಾಲ ಕುಸ್ತಿ ತರಬೇತಿ ಪಡೆದಿದ್ದಾರೆ.

ಕರ್ನಾಟಕದ ಏಕೈಕ ಸ್ಪರ್ಧಿ
ಕಿರ್ಗಿಸ್ತಾನದಲ್ಲಿ ನಡೆದ ಅಂಡರ್ 17 ಏಷಿಯನ್ ಚಾಂಪಿಯನ್ಸ್ ಭಾರತದಿಂದ 35 ಕುಸ್ತಿಪಟುಗಳು ಆಯ್ಕೆಯಾಗಿದ್ದರು. ಆದರೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕುಸ್ತಿಪಟು ನಿಂಗಪ್ಪ ಮಾತ್ರ. ಕೊನೆಗೂ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶದ ಕ್ರೀಡಾಪ್ರೇಣಿಗಳಿಂದ ಮೆಚ್ಚುಗೆ ಪಡೆದಿದ್ದಾರೆ. ಜೊತೆಗೆ ಕರ್ನಾಟಕದ ಮುಧೋಳ ಪಟ್ಟಣದ ಹೆಸರನ್ನು ದೇಶಾದ್ಯಂತ ಕೇಳುವಂತೆ ಮಾಡಿದ್ದಾರೆ.

ನನ್ನ ಜೀವನದ ಅತ್ಯುತ್ತಮ ಕ್ಷಣ
ಏಷಿಯನ್ ಚಾಂಪಿಯನ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದು ನನಗೆ ಬಹಳ ಖುಷಿ ತಂದಿದೆ. ಫೈನಲ್‌ನಲ್ಲಿ ಗೆದ್ದ ತಕ್ಷಣ ಭಾರತ ತ್ರಿವರ್ಣ ಧ್ವಜವನ್ನು ಹಿಡಿದು ಮೈದಾನದಲ್ಲಿ ಓಡಾಡಿ ಸಂಭ್ರಮಪಟ್ಟ ಸಂದರ್ಭವನ್ನು ನನ್ನ ಜೀವನದಲ್ಲಿ ಎಂದೂ ಮರೆಯೋಕೆ ಆಗೋದಿಲ್ಲ. ನನ್ನ ಈ ಗೆಲುವಿಗೆ ಜೈ ಹನುಮಾನ್ ವ್ಯಾಯಾಮ ಶಾಲೆಯ ಕೋಚ್ ಅರುಣ ಕುಮಕಾಲೆ, ಹರಿಯಾಣಾದ ಇಂಡಿಯನ್ ಕ್ಯಾಂಪ್ ನ ತರಬೇತುದಾರರು, ನಮ್ಮ ತಂದೆತಾಯಿ, ಸ್ನೇಹಿತರು,ನಾನು ಓದುತ್ತಿರುವ ಅರ್‌ಎಂಜ ಶಾಲೆ ಸಿಬ್ಬಂದಿಯ ಪ್ರೋತ್ಸಾಹ ಕಾರಣ ಎಂದು ಗೆಲುವಿನ ಶ್ರೇಯವನ್ನು ಅರ್ಪಿಸಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications