Get Updates
Get notified of breaking news, exclusive insights, and must-see stories!

Ind vs NZ: ಪಂತ್ ಹೋರಾಟ ವ್ಯರ್ಥ; ಭಾರತಕ್ಕೆ ಹೀನಾಯ ಸೋಲು

ಮುಂಬೈ ಟೆಸ್ಟ್‌ನಲ್ಲಿ ಕೂಡ ಭಾರತ ಸೋಲು ಕಂಡಿದ್ದು ಭಾರಿ ಮುಖಭಂಗ ಅನುಭವಿಸಿದೆ. ಭಾರತ ಟೆಸ್ಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 3 ಪಂದ್ಯಗಳ ಸರಣಿಯನ್ನು ಎದುರಾಳಿ ತಂಡವೊಂದು ವೈಟ್ ವಾಶ್ ಮಾಡಿದೆ. ಮುಂಬೈನಲ್ಲಿ ನಡೆದ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ 25 ರನ್‌ಗಳಿಂದ ಸೋಲು ಕಂಡಿದ್ದು, 0-3 ಅಂತರದಲ್ಲಿ ಸರಣಿಯಲ್ಲಿ ಸೋಲು ಕಂಡಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು 174 ರನ್‌ಗಳಿಗೆ ಆಲೌಟ್ ಮಾಡಿದ ಭಾರತದ ಗೆಲುವಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ 147 ರನ್‌ಗಳ ಅಗತ್ಯವಿತ್ತು. ಆದರೆ ನ್ಯೂಜಿಲೆಂಡ್ ಬಿಗಿ ಬೌಲಿಂಗ್ ಎದುರು ಭಾರತದ ಬ್ಯಾಟಿಂಗ್ ಮತ್ತೆ ವಿಫಲವಾಯಿತು. ರಿಷಬ್ ಪಂತ್ ಮಾತ್ರ ಏಕಾಂಗಿಯಾಗಿ ಹೋರಾಡಿದರೂ, ಭಾರತವನ್ನು ಗೆಲ್ಲಿಸಲು ಆಗಲಿಲ್ಲ, ಕೊನೆಗೆ ಭಾರತ 121 ರನ್‌ಗಳಿಗೆ ಆಲೌಟ್ ಆಗುವ ಮೂಲಕ 25 ರನ್‌ಗಳಿಂದ ಸೋಲೊಪ್ಪಿಕೊಂಡಿತು.

New Zealand Defeats India in 3rd Test to Whitewash Series 3-0

ಕೈಕೊಟ್ಟ ಅನುಭವಿಗಳು

147 ರನ್‌ಗಳನ್ನು ಬೆನ್ನಟ್ಟುವುದು ಈ ಪಿಚ್‌ನಲ್ಲಿ ಸುಲಭವೇನೂ ಆಗಿರಲಿಲ್ಲ. ಆದರೆ ತವರಿನಲ್ಲಿ ಆಡಿದ ಅಪಾರ ಅನುಭವ ಹೊಂದಿದ್ದರೂ ತಂಡದ ಹಿರಿಯ ಆಟಗಾರರು ಜವಾಬ್ದಾರಿಯುತ ಆಟ ಆಡಲೇ ಇಲ್ಲ. ನಾಯಕ ರೋಹಿತ್ ಶರ್ಮಾ 11 ರನ್‌ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾದರು. ಯಶಸ್ವಿ ಜೈಸ್ವಾಲ್ 5 ರನ್ ಗಳಿಸಿ ಔಟಾದರು, ಶುಭಮನ್ ಗಿಲ್ ಕೂಡ 1 ರನ್ ಗಳಿಸಿ ಔಟಾದರು.

ಸರ್ಫರಾಜ್ ಖಾನ್ 1 ರನ್ ಗಳಿಸಿ ಔಟಾಗುವ ಮೂಲಕ ಭಾರತ ಸಂಕಷ್ಟಕ್ಕೆ ಸಿಲುಕಿತು. 29 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ರಿಷಬ್ ಪಂತ್ ಅಸರೆಯಾದರು. ರಿಷಬ್ ಪಂತ್ ಮಾತ್ರ 57 ಎಸೆತಗಳಲ್ಲಿ 64 ರನ್ ಗಳಿಸುವ ಮೂಲಕ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಅವರು ಔಟಾದ ಬಳಿಕ ಭಾರತ ಹೆಚ್ಚು ಹೊತ್ತು ಹೋರಾಟ ಕೊಡಲು ಆಗಲಿಲ್ಲ.

ಮ್ಯಾಟ್ ಹೆನ್ರಿ 1 ವಿಕೆಟ್ ಪಡೆದರೆ, ಅಜಾಝ್ ಪಟೇಲ್ 6 ವಿಕೆಟ್ ಪಡೆಯುವ ಮೂಲಕ ಭಾರತದ ಸೋಲಿಗೆ ಪ್ರಮುಖ ಕಾರಣವಾದರು. ಗ್ಲೆನ್ ಫಿಲಿಪ್ಸ್ 3 ವಿಕೆಟ್ ಪಡೆದು ಮಿಂಚಿದರು. ಅಝಾಜ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಇಡೀ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ವಿಲ್ ಯಂಗ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ಈ ಸೋಲಿನ ಮೂಲಕ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್‌ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಶುರುವಾಗಲಿದ್ದು ಈ ಸರಣಿಯಲ್ಲಿ ಕನಿಷ್ಠ 4 ಪಂದ್ಯ ಗೆದ್ದರೆ ಮಾತ್ರ ಭಾರತ ಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+