ಡೈಮಂಡ್‌ಲೀಗ್ ಮೀಟ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ನೀರಜ್ ಚೋಪ್ರಾ: ಗಣ್ಯರಿಂದ ಅಭಿನಂದನೆ
ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು, ಲೌಸಾನ್ ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್‌ಲೀಗ್ ನಲ್ಲಿ ಭಾಗವಹಿಸಿ ಡೈಮಂಡ್‌ಲೀಗ್ ಮೀಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರ ಮೂಲಕ ಈ ಸಾಧನೆಗೈದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರ ಈ ಸಾಧನೆಗೆ ನಾಡಿನ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಅಭಿನಂದನೆಗಳು ಚಾಂಪಿಯನ್ ನೀರಜ್ ಚೋಪ್ರಾ ಅವರು 89.08 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಲೌಸಾನ್‌ನಲ್ಲಿ ಪ್ರತಿಷ್ಠಿತ #ಡೈಮಂಡ್‌ಲೀಗ್ ಮೀಟ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 'ಕೂ' ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
'ಒಲಿಂಪಿಕ್ ಹೀರೋ #ನೀರಜ್ ಚೋಪ್ರಾ #ಲೌಸನ್ನೆ ಲೆಗ್ ಅನ್ನು ಗೆಲ್ಲುವ ಮೂಲಕ ಡೈಮಂಡ್‌ಲೀಗ್ ಮೀಟ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಶತಕೋಟಿ ಹೃದಯದಿಂದ ಅಭಿನಂದನೆಗಳು ಮತ್ತು ಆಶೀರ್ವಾದಗಳು' ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಗರಿ ಅಭಿನಂದಿಸಿದ್ದಾರೆ.

89.08ಮೀ.ಗಳ ಅತ್ಯುತ್ತಮ ಎಸೆತದೊಂದಿಗೆ ಲೌಸನ್ನೆ ಡೈಮಂಡ್ ಲೀಗ್ ಅನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ನೀರಜ್ ಛೋಪ್ರಾ ಅವರಿಗೆ ಅಭಿನಂದನೆಗಳು. ನಿಮ್ಮ ಈ ವಿಜಯದ ಓಟ ಮುಂದುವರಿಯಲಿ!' ಎಂದು ಶಾಸಕ ಅರವಿಂದ್ ಲಿಂಬಾವಳಿ 'ಕೂ' ಮಾಡುವ ಮೂಲಕ ಶುಭ ಕೋರಿದ್ದಾರೆ.

ಭಾರತದ ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ತಮ್ಮ ಬತ್ತಳಿಕೆಯಲ್ಲಿ ಮತ್ತೊಂದು ದಾಖಲೆಯನ್ನು ಸೇರಿಸಿಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟ ನೀರಜ್ ಚೋಪ್ರಾ ಶುಕ್ರವಾರ ಮತ್ತೊಮ್ಮೆ ಇತಿಹಾಸವನ್ನು ಸೃಷ್ಟಿಸಿದರು. ಡೈಮಂಡ್ ಲೀಗ್ ಮೀಟ್‌ನ ಲಾಸಾನ್ನೆ ಸ್ಟೇಜ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೀರಜ್ ಚೋಪ್ರಾ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದಿದ್ದಾರೆ. 24ರ ಹರೆಯದ ನೀರಜ್ ಚೋಪ್ರಾ ಅವರು ಈ ಪ್ರಶಸ್ತಿಯ ಮೊದಲ ಪ್ರಯತ್ನದಲ್ಲಿ 89.08 ಮೀಟರ್ ದೂರ ಜಾವೆಲಿನ್ ಎಸೆದರು. ಇದು ಅವರ ವೃತ್ತಿ ಜೀವನದಲ್ಲಿ ಮೂರನೇ ಅತ್ಯುತ್ತಮ ಪ್ರಯತ್ನವಾಗಿದೆ. ನೀರಜ್ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ಮೂರನೇ ಯತ್ನದಲ್ಲಿ ಭಾಗವಹಿಸದೇ ನಾಲ್ಕನೇ ಯತ್ನ ವಿಫಲವಾಯಿತು. ಅವರು ಮೊದಲ ಪ್ರಯತ್ನದಲ್ಲಿಯೇ ಲೌಸನ್ನೆ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದರು. ಪ್ರಶಸ್ತಿ ಗೆಲ್ಲುವುದರೊಂದಿಗೆ ನೀರಜ್ ಚೋಪ್ರಾ ಸೆ.7 ಮತ್ತು 8ರಂದು ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್‌ನ ಫೈನಲ್ ತಲುಪಿದ್ದಾರೆ. ಇದರೊಂದಿಗೆ 2023ರಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆದಿದ್ದಾರೆ. ನೀರಜ್ ಚೋಪ್ರಾ ಮತ್ತೊಮ್ಮೆ ಭಾರತೀಯರಿಗೆ ಖುಷಿಯಾಗುವ ಅವಕಾಶ ನೀಡಿದ್ದಾರೆ.












Click it and Unblock the Notifications