• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ind vs SA 2nd T20I : ಸ್ಟ್ರೈಕ್ ತೆಗೆದುಕೊಳ್ಳುವಂತೆ ಕೇಳಿದ ದಿನೇಶ್ ಕಾರ್ತಿಕ್‌ಗೆ ಕೊಹ್ಲಿ ಕೊಟ್ಟ ಉತ್ತರ ಇದು

|
Google Oneindia Kannada News

ಗುವಾಹಟಿ, ಅ. 3: ಇದೇ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಮುನ್ನ ಭಾರತಕ್ಕೆ ಸಿಕ್ಕಿರುವ ಅತಿ ಆಶಾದಾಯಕ ಸಂಗತಿಗಳಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ಗೆ ಮರಳಿರುವುದೂ ಒಂದು. ವಿರಾಟ್ ಕೊಹ್ಲಿ ನಿರ್ಭೀಡೆಯಿಂದ ಬ್ಯಾಟ್ ಮಾಡುತ್ತಿರುವುದನ್ನು ಕಂಡು ವರ್ಷಗಳೇ ಆಗಿದ್ದವು. ಕೊನೆಗೂ ಕೊಹ್ಲಿ ಲಯ ಕಂಡುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಎಂದರೆ ಆಕ್ರಮಣಕಾರಿ ಆಟಗಾರನೆಂಬ ಚಿತ್ರಣ ಮೊದಲು ಕಣ್ಮುಂದೆ ಬರುತ್ತಾರೆ. ಬ್ಯಾಟ್ ಹಿಡಿದಾಗಲೇ ಆಗಲೀ, ಫೀಲ್ಡಿಂಗ್ ಮಾಡುವಾಗಲೇ ಆಗಲೀ, ಕ್ಯಾಪ್ಟನ್ಸಿಯಲ್ಲಾಗಲೀ ಅವರದ್ದು ಅಗ್ರೆಸಿವ್ ಅವತಾರ. ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸವೇ ಪ್ರಧಾನ. ಇದರ ಜೊತೆಗೆ ಅವರು ತಂಡಕ್ಕಾಗಿ ಆಡುವ ಗುಣ. ಇವರ ಈ ಗುಣ ನಿನ್ನೆ ಭಾನುವಾರ ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸ್ಪಷ್ಟವಾಗಿ ವೇದ್ಯವಾಯಿತು.

India squad for SA ODI series: ಶಿಖರ್ ಧವನ್ ಟೀಮ್ ಇಂಡಿಯಾ ನಾಯಕ; ಓಡಿಐ ತಂಡಕ್ಕೆ ಮುಕೇಶ್, ಪಾಟಿದಾರ್ ಆಯ್ಕೆIndia squad for SA ODI series: ಶಿಖರ್ ಧವನ್ ಟೀಮ್ ಇಂಡಿಯಾ ನಾಯಕ; ಓಡಿಐ ತಂಡಕ್ಕೆ ಮುಕೇಶ್, ಪಾಟಿದಾರ್ ಆಯ್ಕೆ

ವಿರಾಟ್ ಕೊಹ್ಲಿ ಮತ್ತೊಮ್ಮೆ ಅದ್ಭುತವಾಗಿ ಆಡಿದ್ದರು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 237 ರನ್ ಗಳಿಸಿತು. ಕೊನೆಯ ಎರಡು ಓವರ್ ಇರುವಂತೆಯೇ ತಂಡದ ಸ್ಕೋರು 200 ರನ್ ಗಡಿ ದಾಟಿತ್ತು. ವಿರಾಟ್ ಕೊಹ್ಲಿ 28 ಬಾಲ್‌ನಲ್ಲಿ ಅಜೇಯ 49 ರನ್ ಗಳಿಸಿದ್ದರು. ಕೊನೆಯ ಓವರ್ ಇತ್ತು. ಇನ್ನೊಂದು ರನ್ ಗಳಿಸಿದರೂ ಅರ್ಧಶತಕ ಪೂರೈಸಬಹುದಿತ್ತು.

ಕೊನೆಯ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಕ್ರೀಸ್‌ನಲ್ಲಿದ್ದರು. ಕೊಹ್ಲಿ ಕೇಳಿಕೊಂಡಿದ್ದರೆ ದಿನೇಶ್ ಕಾರ್ತಿಕ್ ಸಿಂಗಲ್ಸ್ ತೆಗೆದುಕೊಂಡು ಕೊಹ್ಲಿಗೆ ಸ್ಟ್ರೈಕ್ ಕೊಡುವುದು ದೊಡ್ಡ ವಿಷಯವಾಗಿರಲಿಲ್ಲ. ಆದರೆ, ಕೊಹ್ಲಿ ಅಂಥ ಪ್ರಯತ್ನ ಮಾಡಲಿಲ್ಲ. ನಾಲ್ಕು ಬಾಲ್‌ಗಳ ನಂತರ ದಿನೇಶ್ ಕಾರ್ತಿಕ್ ಅವರೆಯೇ ಕೊಹ್ಲಿ ಬಳಿ ಹೋಗಿ ಸ್ಟ್ರೈಕ್ ಬೇಕಾ ಎಂದು ಕೇಳಿದ್ದೂ ಆಯಿತು. ಆದರೂ ಕೊಹ್ಲಿ ಬೇಡ ಎಂದೇ ಹೇಳಿದರು. ತಮ್ಮ ವೈಯಕ್ತಿಕ ಮೈಲಿಗಲ್ಲಿಗಿಂತ ತಂಡದ ಸ್ಕೋರು ಮುಖ್ಯ ಎಂಬುದು ಕೊಹ್ಲಿಯಂಥ ಕ್ರಿಕೆಟಿಗರಿಂದ ಕಲಿಯುವುದು ಮುಖ್ಯ.

ಯಾವುದೇ ಬ್ಯಾಟರ್‌ಗಾದರೂ ಶತಕ, ಅರ್ಧಶತಕಗಳೆಂದರೆ ಮೈಲಿಗಲ್ಲುಗಳಿದ್ದಂತೆ. ಹೊಡೆದಷ್ಟೂ ಸಮಾಧಾನ. ವಿರಾಟ್ ಕೊಹ್ಲಿ ಬರೋಬ್ಬರಿ 71 ಅಂತಾರಾಷ್ಟ್ರೀಯ ಶತಕಗಳನ್ನು ಭಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ್ದಾರೆ.

Needing 1 Run For Half Century, Virat Kohli Asks Dinesh Karthik To Continue Batting

ರೋಚಕ ಪ್ರತಿಹೋರಾಟ ತೋರಿದ ಸೌತ್ ಆಫ್ರಿಕಾ
ಕ್ರಿಕೆಟ್‌ನಲ್ಲಿ ಒಂದೊಂದು ರನ್‌ಗಳೂ ಮುಖ್ಯ ಎಂಬುದಕ್ಕೆ ಭಾರತ ಮತ್ತು ಸೌತ್ ಆಫ್ರಿಕಾದ ಎರಡನೇ ಟಿ20 ಪಂದ್ಯ ಉದಾಹರಣೆ. ಭಾರತ 20 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದರೂ ಗೆಲುವು ನಿರಾಯಾಸವಾಗಿ ಸಿಗಲಿಲ್ಲ. ಸೌತ್ ಆಫ್ರಿಕಾ 221 ರನ್ ಭಾರಿಸಿ ಗೆಲುವಿನ ಸನಿಹಕ್ಕೆ ಧಾವಿಸಿತ್ತು. ವೈಯಕ್ತಿಕ ಮೈಲಿಗಲ್ಲಿಗಿಂತ ತಂಡ ರನ್ ಗಳಿಸುವುದು ಮುಖ್ಯ ಎಂಬುದು ಅನುಭವಿ ಆಟಗಾರರಿಗೆ ಗೊತ್ತಿರುವ ಸಂಗತಿ. ಭಾರತಕ್ಕೆ ನಾಲ್ಕೈದು ರನ್ ಕಡಿಮೆ ಸಿಕ್ಕಿದ್ದರೂ ಪಂದ್ಯದ ಫಲಿತಾಂಶ ಹೇಗೆ ಬೇಕಾದರೂ ತಿರುಗಬಹುದಿತ್ತು.

ಗುವಾಹಟಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ಇನ್ನೊಂದು ಹೈಲೈಟ್. ರಣರೋಚಕ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಕೇವಲ 22 ಬಾಲ್‌ನಲ್ಲಿ 61 ರನ್ ಚಚ್ಚಿದ್ದರು. ಸೌತ್ ಆಫ್ರಿಕಾ ಬೌಲರ್‌ಗಳ ಪೈಕಿ ಕೇಶವ್ ಮಹಾರಾಜ್ ಮಾತ್ರವೇ ಪರಿಣಾಮಕಾರಿ ಎನಿಸಿದ್ದರು.

ಇನ್ನು, 238 ರನ್ ಗುರಿ ಚೇಸ್ ಮಾಡಿದ ಸೌತ್ ಆಫ್ರಿಕಾ ನೀರಸ ಆರಂಭ ಪಡೆದರೂ ನಾಯಕ ಕ್ವಿಂಟಾನ್ ಡೀ ಕಾಕ್, ಏಡನ್ ಮಾರ್ಕ್ರಂ ಮತ್ತು ಡೇವಿಡ್ ಮಿಲ್ಲರ್ ಅವರ ಪ್ರಚಂಡ ಬ್ಯಾಟಿಂಗ್ ಫಲವಾಗಿ 221 ರನ್ ಗಳಿಸಿ ಕೇವಲ 16 ರನ್‌ಗಳಿಂದ ವೀರೋಚಿತ ಸೋಲಪ್ಪಿತು. ಸೂರ್ಯಕುಮಾರ್‌ನಂತೆಯೇ ಮಿಲ್ಲರ್ ಕೂಡ ಬಿಡುಬೀಸಾಗಿ ಆಡಿ ಕೇವಲ 47 ಬಾಲ್‌ನಲ್ಲಿ ಅಜೇಯ 106 ರನ್ ಭಾರಿಸಿದರು. ಆದರೆ, ಆರಂಭಿಕ ಓವರ್‌ಗಳಲ್ಲಿ ಆದ ಹಿನ್ನಡೆಯು ಸೌತ್ ಆಫ್ರಿಕಾದ ಗೆಲುವಿಗೆ ಅಡ್ಡಗಾಲಾಗಿದ್ದು ಹೌದು.

ಕ್ರಿಕೆಟ್ ಆಟಗಾರನನ್ನು ಹುಡುಕಲು ಇಂಟರ್‌ಪೋಲ್‌ ಸಹಾಯ ಕೋರಿದ ನೇಪಾಳಕ್ರಿಕೆಟ್ ಆಟಗಾರನನ್ನು ಹುಡುಕಲು ಇಂಟರ್‌ಪೋಲ್‌ ಸಹಾಯ ಕೋರಿದ ನೇಪಾಳ

ಮೊದಲ ಬಾರಿಗೆ ಗೆಲುವು
ಮೂರು ಟಿ20 ಪಂದ್ಯಗಳ ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಇನ್ನೊಂದು ಪಂದ್ಯ ಬಾಕಿ ಇದೆ. ತವರಿನ ನೆಲದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ಟಿ20 ಸರಣಿ ಗೆದ್ದದ್ದು ಇದೇ ಮೊದಲು ಎಂದರೆ ಅಚ್ಚರಿ ಎನಿಸುತ್ತದೆ. ಅಷ್ಟೇ ಅಲ್ಲ, ಸೌತ್ ಆಫ್ರಿಕಾ ಭಾರತದ ಪ್ರವಾಸಕ್ಕೆ ಮುನ್ನ ಗೆಲುವಿನ ನಾಗಾಲೋಟದಲ್ಲಿತ್ತು. ಇಂಥ ಭರ್ಜರಿ ಫಾರ್ಮ್‌ನಲ್ಲಿರುವ ತಂಡದ ವಿರುದ್ಧ ಟೀಮ್ ಇಂಡಿಯಾ ಗೆಲುವು ಸಾಧಿಸಿರುವುದು ಸಣ್ಣ ವಿಷಯವಲ್ಲ.

ಇನ್ನೊಂದು ಟಿ20 ಪಂದ್ಯ ಬಾಕಿ ಇದ್ದು, ಭಾರತ ಆ ನಂತರ ಟಿ20 ವಿಶ್ವಕಪ್‌ನಲ್ಲಿ ಆಡಲು ಆಸ್ಟ್ರೇಲಿಯಾ ಹೋಗಲಿದೆ. ಇದೇ ವೇಳೆ, ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಅಕ್ಟೋಬರ್ 6ರಿಂದ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ.

(ಒನ್ಇಂಡಿಯಾ ಸುದ್ದಿ)

English summary
India vs South Africa 2nd T20 Match at Guwahati. Virat Kohli was on 49 runs. Dinesh Karthik asks Kohli to have a strike. But, Kohli tell Karthik to keep strike. This shows the team spirit of Virat Kohli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X