• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking: ಐರ್ಲೆಂಡ್‌ ಪ್ರವಾಸಕ್ಕೆ ವಿವಿಎಸ್‌ ಲಕ್ಷ್ಮಣ್‌ ಭಾರತ ತಂಡದ ಕೋಚ್‌

|
Google Oneindia Kannada News

ಮುಂಬೈ, ಮೇ 18: ಐರ್ಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಟೀಂ ಇಂಡಿಯಾಕ್ಕೆ ಹೊಸ ಕೋಚ್ ನೇಮಕವಾಗುವ ಸುದ್ದಿ ಬಂದಿದೆ. ಎರಡು ಪಂದ್ಯಗಳ ಟಿ20 ಸರಣಿಯ ವೇಳೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಭಾರತ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಭಾರತ ಕ್ರಿಕೆಟ್ ತಂಡಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್‌ ತಂಡದ ಮುಖ್ಯ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಕಳೆದ ವರ್ಷ ಕೋವಿಡ್‌ 19 ಕಾರಣದಿಂದ ರದ್ದಾಗಿರುವ ಏಕೈಕ ಟೆಸ್ಟ್‌ ಪಂದ್ಯ ಮರು ಹೊಂದಿಸಲಾಗಿದ್ದು, ಆ ಪಂದ್ಯಕ್ಕಾಗಿ ಭಾರತ ಟೆಸ್ಟ್‌ ತಂಡದ ಜೊತೆ ತಯಾರಿಯಲ್ಲಿರಲಿದ್ದಾರೆ ಎನ್ನಲಾಗುತ್ತಿದೆ.

ಇಂಗ್ಲೆಂಡ್‌ ವಿರುದ್ಧ ಕೊನೆಯ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ತಂಡ ಲೈಲೆಸ್ಟರ್‌ ಕೌಂಟಿ ತಂಡದ ವಿರುದ್ಧ ಜೂನ್‌ 24-27ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ 4 ದಿನಗಳ ಪಂದ್ಯವನ್ನಾಡಲಿದೆ. ಈ ಪಂದ್ಯದ ವೇಳೆ ದ್ರಾವಿಡ್ ಭಾರತ ತಂಡದ ಜೊತೆಯಲ್ಲಿರಲಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಜುಲೈ 1ರಿಂದ 5ರವರೆಗೆ ಕೊನೆಯ ಟೆಸ್ಟ್‌ ಪಂದ್ಯವನ್ನಾಡಲಿದೆ.

ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯಸ್ಥರಾಗಿರುವ ಲಕ್ಷ್ಮಣ್‌, ಇದಕ್ಕೂ ಮುನ್ನ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಮುಖ್ಯ ಕೊಚ್‌ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ.

English summary
NCA chief VVS Laxman is all set to be named coach of the Indian team that will play two T20Is against Ireland in late June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X